/newsfirstlive-kannada/media/post_attachments/wp-content/uploads/2025/07/fighter_jet_F_35_Kerala.jpg)
ಬ್ರಿಟಿಷ್ ರಾಯಲ್ ನೌಕಾಪಡೆಯ ಎಫ್-35 ಬಿ ಫೈಟರ್ ಜೆಟ್ ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಏರ್​​ಪೋರ್ಟ್​ನಲ್ಲಿದೆ. ವಿಶ್ವದ ದುಬಾರಿ ಈ ಫೈಟರ್ ಜೆಟ್ ರಿಪೇರಿ ಮಾಡಲು ಬ್ರಿಟನ್ ಇಂಜಿನಿಯರ್​ಗಳಿಗೂ ಸಾಧ್ಯವಾಗಲಿಲ್ಲ. ಫೈಟರ್ ಜೆಟ್​ನ ಹೈಡ್ರಾಲಿಕ್​ನಲ್ಲಿ ಸಮಸ್ಯೆ ಇದೆ. ಇದು ಈಗ ಭಾರತದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಿಮಿಗಳಿಗೆ ಆಹಾರವಾಗಿದೆ. ಸಾಕಷ್ಟು ಮಂದಿ ಮಿಮಿ ಟೆಂಪ್ಲೇಟ್​ಗಳನ್ನು ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹಾಸ್ಯ, ವ್ಯಂಗ್ಯವಾದ ಮಿಮಿ ಪೋಸ್ಟ್​ಗಳನ್ನು ಸೃಷ್ಟಿಸಿದ್ದಾರೆ. ತಮಾಷೆಯ ವಿಡಿಯೋಗಳನ್ನು ಈ ಫೈಟರ್ ಜೆಟ್ ವಿಮಾನದ ಬಗ್ಗೆ ಹಾಕಿದ್ದಾರೆ.
ಇನ್ನೂ ಕೆಲವರು ಎಫ್-35ಬಿ ಫೈಟರ್ ಜೆಟ್ ಅನ್ನು ಭಾರತದ ನಾಗರಿಕ ಎಂದು ಊಹಿಸಿಕೊಂಡು ಕೆಲವರು ಆಧಾರ್ ಕಾರ್ಡ್ ಅನ್ನು ತಮಾಷೆಗೆ ಜನರೇಟ್ ಮಾಡಿದ್ದಾರೆ. ನಾಗರಿಕರ ಹೆಸರಿನ ಜಾಗದಲ್ಲಿ ಏರ್ ಕ್ರಾಫ್ಟ್ ಹೆಸರು ಅನ್ನು ಹಾಕಿದ್ದಾರೆ. ಇದು ಈಗ ಇಂಟರ್ ನೆಟ್​ನಲ್ಲಿ ಜನರ ಮನ ಗೆದ್ದಿದೆ. ಆಧಾರ್ ಕಾರ್ಟ್​​ನಲ್ಲಿ ವ್ಯಕ್ತಿಯ ಹೆಸರಿನ ಜಾಗದಲ್ಲಿ ಎಫ್-35 ಬಿ ನಾಯರ್ ಎಂದು ಬರೆಯಲಾಗಿದೆ.
ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ಜೂನ್ 14 ಎಂದು ಉಲ್ಲೇಖಿಸಲಾಗಿದೆ. ಜೂನ್ 14 ರಂದು ಈ ಫೈಟರ್ ಜೆಟ್ ಭಾರತದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿತ್ತು. ಜೊತೆಗೆ ಸ್ಥಳ ತಿರುವನಂತಪುರ ಏರ್ ಪೋರ್ಟ್ ಎಂದು ನಮೂದಿಸಲಾಗಿದೆ. ಅಂಡರ್ ರೀಪೇರಿ ಎಂದು ಆಧಾರ್ ಕಾರ್ಟ್​ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಕೇರಳದ ಪ್ರವಾಸೋದ್ಯಮ ಇಲಾಖೆಯು ಈ ಮಿಮಿ ಫೆಸ್ಟ್​ಗೆ ಎಂಟ್ರಿ ಕೊಟ್ಟಿದೆ. ಪ್ರವಾಸೋದ್ಯಮ ಇಲಾಖೆಯು ಫೈಟರ್ ಜೆಟ್ ಕೇರಳದಲ್ಲಿರುವ ಪೋಟೋ ಹಾಕಿ, ಕೇರಳ ಎಂಥಾ ಅದ್ಬುತ ಸ್ಥಳ. ನಾನು ಬಿಟ್ಟು ಹೋಗಲಾರೆ. ಖಂಡಿತವಾಗಿಯೂ ನಿಮಗೆ ಶಿಫಾರಸ್ಸು ಮಾಡುತ್ತೇನೆ ಎಂದು ಕೇರಳ ಪ್ರವಾಸೋದ್ಯಮ ಇಲಾಖೆ ಪೋಸ್ಟ್ ಮಾಡಿದೆ.
ಇನ್ನೂ ಕೆಲವರು ಭಾರತದಲ್ಲಿ ನಿಯಮದ ಪ್ರಕಾರ, ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬೇಕೆಂದು ಪ್ಯಾನ್ ಮತ್ತು ಆಧಾರ್ ಕಾರ್ಡ್ ಎರಡು ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಎಫ್-35 ಬಿ ಫೈಟರ್ ಜೆಟ್ ಪ್ಯಾನ್ ಕಾರ್ಡ್ ಕೂಡ ರೆಡಿಯಾಗಿದೆ. ಎಫ್- 35ಬಿನಿಂದಲೇ ಪ್ಯಾನ್ ನಂಬರ್ ಶುರುವಾಗುತ್ತೆ.
ಇದನ್ನೂ ಓದಿ: ಸ್ಟಾರ್​ ನಟನ 15,000 ಕೋಟಿ ರೂಪಾಯಿ ಆಸ್ತಿ ಸರ್ಕಾರದ ಪಾಲು.. ಸೈಫ್ ಅಲಿ ಖಾನ್​ಗೆ ಹಿನ್ನಡೆ
ಎಫ್-35 ಬಿ ಫೈಟರ್ ಜೆಟ್, ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್​ಗೆ ಸೇರಿದೆ. ಕೇರಳದ ಕರಾವಳಿಯಿಂದ ನೂರು ನಾಟಿಕಲ್ಸ್ ಮೈಲು ದೂರದಲ್ಲಿ ಹಾರಾಟ ನಡೆಸುವಾಗ ತಾಂತ್ರಿಕ ತೊಂದರೆಯಿಂದ ಭಾರತದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಬ್ರಿಟನ್ ಅನುಮತಿ ಕೇಳಿತ್ತು. ಭಾರತವು ಅನುಮತಿ ನೀಡಿದ ಬಳಿಕ ತಿರುವನಂತಪುರ ಏರ್ ಪೋರ್ಟ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದೆ.
ಬ್ರಿಟನ್​ನಿಂದ ಇಂಜಿನಿಯರ್​​ಗಳು ಬಂದು ಈಗಾಗಲೇ ರಿಪೇರಿ ಮಾಡಿದ್ದಾರೆ. ಆದರೇ, ರೀಪೇರಿ ಯಶಸ್ವಿಯಾಗಿಲ್ಲ. ಇವತ್ತು 40 ಇಂಜಿನಿಯರ್​ಗಳ ತಂಡವು ಬ್ರಿಟನ್​ನಿಂದ ಬಂದಿದ್ದು, ರಿಪೇರಿ ಕಾರ್ಯ ನಡೆಸುತ್ತಿದೆ. ರಿಪೇರಿ ಯಶಸ್ವಿಯಾಗದೇ ಇದ್ದರೇ, ವಿಮಾನವನ್ನು ಸಿ-17 ಗ್ಲೋಬ್ ಮಾಸ್ಟರ್ ಸರಕು ಸಾಗಣೆ ವಿಮಾನದಲ್ಲಿ ಬ್ರಿಟನ್​​ಗೆ ಏರ್ ಲಿಫ್ಟ್ ಮಾಡಲಾಗುತ್ತೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ