Advertisment

Video; 15 ಜನರಿಗೆ ತಿವಿದು ಗಾಯಗೊಳಿಸಿದ ಭಯಂಕರ ಗೂಳಿ! ಸೆರೆಹಿಡಿಯಲು ಬೇಕಾಯ್ತು ಬರೋಬ್ಬರಿ 3 ಗಂಟೆ!

author-image
Gopal Kulkarni
Updated On
Video; 15 ಜನರಿಗೆ ತಿವಿದು ಗಾಯಗೊಳಿಸಿದ ಭಯಂಕರ ಗೂಳಿ! ಸೆರೆಹಿಡಿಯಲು ಬೇಕಾಯ್ತು ಬರೋಬ್ಬರಿ 3 ಗಂಟೆ!
Advertisment
  • ಹಾದಿ ಬೀದಿಯಲ್ಲಿ ಹೋಗುವವರನ್ನು ಗುದ್ದಿ ಕೆಡವಿದ ಗೂಳಿ
  • ರೊಚ್ಚಿಗೆದ್ದ ಗೂಳಿಯಿಂದ ತಿವಿಸಿ ಗಾಯಗೊಂಡರು 15 ಜನ!
  • ಪಾಲಿಕೆಯ ನಿರಂತರ ಮೂರು ಗಂಟೆಗಳ ಸಾಹಸದಿಂದ ಗೂಳಿ ಸೆರೆ

ಗೂಳಿ ಒಮ್ಮೆ ಕಾಲು ಕೆರೆದುಕೊಂಡು ನಿಂತು ಬಿಟ್ಟರೆ ಮುಗಿತು, ಮುಂದೆ ಇರುವವರು ಯಾರು ಏನು ಎಂಬುದನ್ನು ನೋಡದೇ ನುಗ್ಗಿಕೊಂಡು ಬಂದು ಗುದ್ದಿ ಕೆಡವಿ ಬಿಡುತ್ತವೆ. ಗೂಳಿ ಒಂದು ಬಾರಿ ತನ್ನ ಸ್ಥಿಮಿತ ಕಳೆದುಕೊಂಡರೆ ಮುಗೀತು ಮುಂದೆ ನಡೆಯುವುದು ಅನಾಹುತಗಳ ಸರಮಾಲೆಯೇ. ಇಂತಹುದೇ ಒಂದು ಘಟನೆ ಉತ್ತರಪ್ರದೇಶದ ಜಲಾಲಾಬಾದ್​ನಲ್ಲಿ ನಡೆದಿದೆ. ಜಲಾಲಾಬಾದ್ ಬೀದಿಯೊಂದರಲ್ಲಿ ರೊಚ್ಚಿಗೆದ್ದ ಗೂಳಿಯೊಂದು ಕಂಡವರ ಕಡೆಗೆಲ್ಲಾ ನುಗ್ಗಿ ತಿವಿದು ಸುಮಾರು 15 ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ.

Advertisment


">November 26, 2024

ಗೂಳಿಯ ರೊಚ್ಚಿಗೆದ್ದ ಪರಿ ಹೇಗಿತ್ತು ಎಂಬುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಜಲಾಲಾಬಾದ್ ಬೀದಿಯೊಂದರಲ್ಲಿ ವ್ಯಕ್ತಿಯನ್ನು ಹಿಂದಿನಿಂದ ಬಂದು ಗುದ್ದಿ ಗೂಳಿ. ಅವನ ಸಾವರಿಸಿಕೊಂಡು ಏಳುವ ಮೊದಲೇ ಮತ್ತೆ ಗುದ್ದಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕಿದೆ. ಗೂಳಿ ಗುದ್ದಿದ ಹೊಡೆತಕ್ಕೆ ವ್ಯಕ್ತಿಯ ಕಣ್ಣಿಗೆ ಭಾರೀ ಪ್ರಮಾಣದ ಗಾಯವಾಗಿದೆ.ಕಣ್ಣಿನ ಸುತ್ತಲೂ ರಕ್ತ ಸೋರುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ:ಕಸ್ಟಮರ್ ಕೇರ್​​ಗೆ ಕಾಲ್ ಮಾಡಿ ಲಕ್ಷ ಲಕ್ಷ ಕಳೆದುಕೊಂಡ ವ್ಯಕ್ತಿ..! ಅಷ್ಟಕ್ಕೂ ಆಗಿದ್ದು ಏನು?

Advertisment

ಈತನೊಬ್ಬನೇ ಅಲ್ಲ, ಆ ಬೀದಿಯಲ್ಲಿ ಅಡ್ಡಾಡಿದ ಸುಮಾರು 15 ಜನರಿಗೆ ಹೀಗೆಯೇ ಗುದ್ದಿ ಗಾಯಗೊಳಿಸಿದೆ ರೊಚ್ಚಿಗೆದ್ದ ಗೂಳಿ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆಯವರು ಗೂಳಿಯನ್ನು ಸೆರೆಹಿಡಿಯಲು ಕಾರ್ಯೋನ್ಮುಖರಾಗಿದ್ದಾರೆ. ನಿರಂತರ ಮೂರು ಗಂಟೆಗಳ ಕಾಲ ಒದ್ದಾಡಿ, ಗುದ್ದಾಡಿ ಕೊನೆಗೂ ಗೂಳಿಯನ್ನು ಸೆರೆಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment