ನಂಬಿದ್ರೆ ನಂಬಿ.. ದಿನಕ್ಕೆ 30Km.. ಮೆಟ್ರೋ, ಬಸ್​ನಲ್ಲಿ ಓಡಾಡುತ್ತಿದೆ ಈ ಬೀದಿ ಶ್ವಾನ!

author-image
AS Harshith
Updated On
ನಂಬಿದ್ರೆ ನಂಬಿ.. ದಿನಕ್ಕೆ 30Km.. ಮೆಟ್ರೋ, ಬಸ್​ನಲ್ಲಿ ಓಡಾಡುತ್ತಿದೆ ಈ ಬೀದಿ ಶ್ವಾನ!
Advertisment
  • ಈ ಬೀದಿ ಶ್ವಾನದ ಪ್ರಯಾಣದ ಬಗ್ಗೆ ಗಮನಹರಿಸಿದ ಪುರಸಭೆ ಅಧಿಕಾರಿಗಳು
  • ಪ್ರತಿನಿತ್ಯ ದೋಣಿ, ಬಸ್​, ಮೆಟ್ರೋದಲ್ಲಿ ಓಡಾಡುತ್ತಿದೆ ಈ ಬೀದಿ ಶ್ವಾನ
  • ಶ್ವಾನಕ್ಕೆ ತಲುಪುವ ಸ್ಥಳದ ಬಗ್ಗೆ ಗೊತ್ತು.. ಆದ್ರೆ ಅದರ ಉದ್ದೇಶವೇನು?

ಬೀದಿ ಶ್ವಾನವೊಂದು ದಿನಕ್ಕೆ 30 ಕಿಮೀ ಕ್ರಮಿಸುತ್ತದೆ ಎಂದರೆ ನಂಬ್ತೀರಾ? ಅದರಲ್ಲೂ ದೋಣಿ, ಬಸ್​, ಮೆಟ್ರೋದ ಮೂಲಕ ಪ್ರಯಾಣಿಸುತ್ತದೆ ಎಂದರೆ ನಂಬಲು ಅಸಾಧ್ಯ. ಆದರೆ ಬೋಜಿ ಎಂಬ ಬೀದಿ ಶ್ವಾನದ ಪ್ರಯಾಣದ ಬಗ್ಗೆ ಪುರಸಭೆ ಅಧಿಕಾರಿಗಳು ಗಮನಿಸಿದ್ದಾರೆ. ಈ ವೇಳೆ ಬೋಜಿ ಪ್ರತಿದಿನ 30 ಕಿಮೀ ಕ್ರಮಿಸುವ ಬಗ್ಗೆ ಪತ್ತೆಹಚ್ಚಿದ್ದಾರೆ.

ಅಂದಹಾಗೆಯೇ ಈ ಘಟನೆ ಬೆಳಕಿಗೆ ಬಂದಿರೋದು ಇಸ್ತಾಂಬುಲ್​ನಲ್ಲಿ. ಈ ದೇಶ ಶ್ರೀಮಂತ ಇತಿಹಾಸದ ಜೊತೆಗೆ ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದರ ಜೊತೆಗೆ ಇಲ್ಲಿ ಬೀದಿ ಶ್ವಾನಗಳ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ಬೀದಿ ಶ್ವಾನಗಳು ಇಲ್ಲಿ ದೋಣಿ, ಬಸ್​, ಮೆಟ್ರೋದಲ್ಲಿ ಪ್ರಯಾಣಿಸುವುದನ್ನು ಕಾಣವಹುದಾಗಿದೆ.

ಹೀಗೆ ಬೀದಿ ಶ್ವಾನಗಳ ಪ್ರಯಾಣದ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸಿದ್ದು, ಅದರಲ್ಲಿ ಬೋಜಿ ಎಂಬ ಶ್ವಾನ ಪ್ರತಿದಿನ 30 ಕಿ.ಮೀ ಕ್ರಮಿಸುತ್ತದೆ. ಸಿಕ್ಕ ಸಿಕ್ಕ ವಾಹನದಲ್ಲಿ ಪ್ರಯಾಣಿಸುತ್ತದೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ನೀಡಿದ ಬೋಜಿ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

publive-image

ಇದನ್ನೂ ಓದಿ: ಜನಸಂಖ್ಯೆಯನ್ನೂ ಮೀರಿಸಿದ ಆಡುಗಳು; ಉಪಟಳ ತಾಳಲಾರದೆ ಉಚಿತವಾಗಿ ನೀಡ್ತಿದೆ ಇಲ್ಲಿನ ಸರ್ಕಾರ

ಬೋಜಿಗೆ ಎಲ್ಲಿಗೆ ಹೋಗಬೇಕೆಂದು ತಿಳಿದಿದೆ. ಆದರೆ ಅದರ ಉದ್ದೇಶವೇನು ಎಂಬುದರ ಬಗ್ಗೆ ಪುರಸಭೆ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಮಾಹಿತಿ ಪ್ರಕಾರ, ಬೋಜಿಯನ್ನು 2022ರಲ್ಲಿ ಒಮರ್​ ಕೋಕ್​ ಎಂಬ ಉದ್ಯಮಿ ದತ್ತು ಪಡೆದಿದ್ದರು. ಈ ವೇಳೆ ಬೋಜಿ ಶ್ವಾನ ಸ್ವತಂತ್ರವಾಗಿ ಓಡಾಡುತ್ತಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment