newsfirstkannada.com

ಸಿಗ್ನಲ್‌ ಜಂಪ್​​ ಮಾಡ್ತಿದ್ದ ಅಧಿಕಾರಿಗಳಿಗೆ ಬಿಗ್​​ ಶಾಕ್‌.. ನಿಯಮ ಮೀರಿದ್ರೆ ದಂಡ ಕಟ್ಟಲೇಬೇಕು!

Share :

Published February 13, 2024 at 10:21pm

    ಸಿಗ್ನಲ್‌ ಜಂಪಿಂಗ್‌ ಜಪಾಂಗ್ ಮಾಡ್ತಿದ್ದವರಿಗೆ ಶಾಕ್‌

    ಸದ್ಯದಲ್ಲೇ ಪಾಲಿಕೆ ಅಧಿಕಾರಿಗಳಿಗೆ ಸಿಗಲಿದೆ ನೋಟಿಸ್‌

    ದಂಡ ಕಟ್ಟಲೇಬೇಕು.. ಇಲ್ಲಾಂದ್ರೆ ಚಾರ್ಜ್‌ಶೀಟ್‌ ಪಕ್ಕಾ!

ಬೆಂಗಳೂರು: ಅವರೆಲ್ಲಾ ಬಿಬಿಎಂಪಿ ಆಫೀಸರ್ಸ್​​​.. ಅವರ ವೆಹಿಕಲ್ಸ್​ ರಸ್ತೆಗಿಳಿದ್ರೆ ಸಾಕು, ತಾವು ಹೋಗಿದ್ದೇ ರೋಡ್​​, ತಾವು ಮಾಡಿದ್ದೇ ರೂಲ್ಸ್.. ಆ ಭ್ರಮೆಯಲ್ಲಿ ಟ್ರಾಫಿಕ್​​ ರೂಲ್ಸ್​​ ಬ್ರೇಕ್​ ಮಾಡಿ, ತಮ್ಮಿಷ್ಟದಂತೆ ವಾಹನ ಚಲಾಯಿಸ್ತಿದ್ರು. ಆದ್ರೀಗ ಅಂತಹ ಅಧಿಕಾರಿಗಳಿಗೆ ನ್ಯೂಸ್​ ಫಸ್ಟ್​ ರಿಪೋರ್ಟ್​​ ವರದಿ ಶಾಕ್ ಕೊಟ್ಟಿದೆ.

ಸ್ಟಾಪ್​.. ಸಿಗ್ನಲ್​​.. ಒನ್​ ವೇ.. ಅನ್ನೋ ಟ್ರಾಫಿಕ್​​ ರೂಲ್ಸ್​​ನಲ್ಲಿರೋ ಈ ರೂಲ್ಸ್​​ಗಳು ಬಿಬಿಎಂಪಿ ಅಧಿಕಾರಿಗಳಿಗೆ ಲೆಕ್ಕಾನೇ ಇಲ್ವಂತೆ.. ತಾವು ಮಾಡಿದ್ದೆ ರೂಲ್ಸ್​​ ಅಂತೆ.. ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಇದೀಗ ಕಾನೂನಿನ ಅಸ್ತ್ರ ಝಳಪಿಸಲು‌ ಸಂಚಾರಿ ಪೊಲೀಸರು ಮುಂದಾಗಿದ್ದು, ನೊಟೀಸ್ ಕೊಡಲು ತಯಾರಿ ನಡೆಸ್ತಿದ್ದಾರೆ.

ಇದು ನ್ಯೂಸ್​ ಫಸ್ಟ್​​ ವರದಿಯ ಬಿಗ್​ ಇಂಪ್ಯಾಕ್ಟ್​​

ಹೌದು.. ಬಿಬಿಎಂಪಿ ಅಧಿಕಾರಿಗಳ ಕಾರ್ ಮೇಲೆ 30ರಿಂದ 40 ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರೋ ಕೇಸ್​ಗಳಿವೆ.. 20ಸಾವಿರದಷ್ಟು ದಂಡ ಇದೆ.. ಅನ್ನೋ ಬಗ್ಗೆ ಡಿಸೆಂಬರ್ 18ರಂದು ನ್ಯೂಸ್ ಫಸ್ಟ್‌ ಸುದ್ದಿ ಪ್ರಸಾರ ಮಾಡಿ ಬಿಬಿಎಂಪಿ ಅಧಿಕಾರಿಗಳ ಕಳ್ಳಾಟವನ್ನ ಬಯಳಿಗೆಳೆದಿತ್ತು.. ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ 40 ಬಾರಿ, ಚೀಫ್ ಇಂಜಿನಿಯರ್ ಪ್ರಹ್ಲಾದ್ 47 ಬಾರಿ ಸೇರಿದಂತೆ ಕೆಲ ಬಿಬಿಎಂಪಿ ಅಧಿಕಾರಿಗಳು ಎಷ್ಟೆಷ್ಟು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ ಅನ್ನೋದರ ಬಗ್ಗೆಯೂ ವರದಿ ಪ್ರಸಾರ ಮಾಡಿತ್ತು. ಸದ್ಯ ಈ ಸುದ್ದಿ ಇಂಪ್ಯಾಕ್ಟ್​ ಆಗಿದ್ದು, ಇದೇ ಸುದ್ದಿಯನ್ನ ಆಧರಿಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಗಳಿಗೆ ನೋಟಿಸ್ ಕೊಡಲು ಸಂಚಾರಿ ಪೊಲೀಸರು ತಯಾರಿ ನಡೆಸಿದ್ದಾರೆ.

ಒಟ್ನಲ್ಲಿ ಪಾಲಿಕೆ ಅಧಿಕಾರಿಗಳಿಗೆ ನೋಟಿಸ್‌ ಗ್ಯಾರಂಟಿ. ಅಧಿಕಾರಿಗಳೇನಾದ್ರೂ ನೋಟಿಸ್ ಕೊಟ್ಟ ಮೇಲೂ ದಂಡದ ಹಣ ಕಟ್ಟದಿದ್ರೆ, ಕೋರ್ಟ್​​ನಲ್ಲಿ ಚಾರ್ಜ್​​​ಶೀಟ್ ಹಾಕೋಕು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಗ್ನಲ್‌ ಜಂಪ್​​ ಮಾಡ್ತಿದ್ದ ಅಧಿಕಾರಿಗಳಿಗೆ ಬಿಗ್​​ ಶಾಕ್‌.. ನಿಯಮ ಮೀರಿದ್ರೆ ದಂಡ ಕಟ್ಟಲೇಬೇಕು!

https://newsfirstlive.com/wp-content/uploads/2023/07/Traffic-Fine.jpg

Load More