ಗಟ್ಟಿಗಿತ್ತಿ ಸುನಿತಾ ವಿಲಿಯಮ್ಸ್​.. ಈಕೆಯ ಛಲ, ಸಾಧನೆ ಮಹಿಳೆಯರಿಗೆ ಸ್ಫೂರ್ತಿ

author-image
AS Harshith
Updated On
ಗಟ್ಟಿಗಿತ್ತಿ ಸುನಿತಾ ವಿಲಿಯಮ್ಸ್​.. ಈಕೆಯ ಛಲ, ಸಾಧನೆ ಮಹಿಳೆಯರಿಗೆ ಸ್ಫೂರ್ತಿ
Advertisment
  • ಬಾಹ್ಯಾಕಾಶದಲ್ಲಿ 322 ದಿನಗಳನ್ನು ಕಳೆದಿರುವ ಅನುಭವ
  • ನೌಕೆಯಲ್ಲಿರೋದು ಬರೀ 45 ದಿನಕ್ಕಾಗುವಷ್ಟು ಇಂಧನ
  • ಬರೀ 20 ದಿನಗಳು ಬಾಕಿ ಉಳಿದಿವೆ.. ಮುಂದೇನು ಕತೆ?

ಆಕೆ ಗಟ್ಟಿಗಿತ್ತಿ. ಛಲದಂಕ ಮಲ್ಲಿ. ಏನೇಯಾದರೂ. ಯಾವುದಕ್ಕೂ ಹೆದರದೆ ಗೆದ್ದೇ ಗೆಲ್ಲುತ್ತೇನೆ ಎಂಬ ಹಠವಾದಿ. ಬಾಹ್ಯಾಕಾಶದಲ್ಲಿ ಸಿಲುಕಿ ಸಂಕಷ್ಟದ ಸುಳಿಯಲ್ಲಿರುವ ಭಾರತದ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್​ ಗುಂಡಿಗೆ ಮಾತ್ರ ಮೆಚ್ಚಲೇ ಬೇಕು.

ಶಾಲೆಗೆ ಹೋದ ಮಕ್ಕಳು ಸಂಜೆ ಮನೆ ಸೇರುವ ಸಮಯದಲ್ಲಿ ಕೊಂಚ ತಡವಾದರೆ ಪೋಷಕರು ತಲೆಕೆಲಗಾದಂತೆ ಮಾಡುತ್ತಾರೆ. ಆದರೆ ಈ 58 ವರ್ಷದ ಧೈರ್ಯಗಿತ್ತಿ ಮಹಿಳೆ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ ಎಂದರೆ ಆಕೆಯ ಧೈರ್ಯ ಬಗ್ಗೆ ಏನು ಹೇಳಬೇಕು?. ಆದರೂ ಭೂಮಿ ಮೇಲಿರುವ ನಮಗೆ ಒಂದು ಕ್ಷಣ ಯೋಚಿಸಿದರೆ ಕರುಳು ಚುರ್​ಕ್​ ಅಂದುಬಿಡುತ್ತದೆ.

publive-image

ಏನಾಯ್ತು ಅಲ್ಲಿ?

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಇಲ್ಲಿಗೆ ನಾಸಾ ತನ್ನ ಗಗನಯಾತ್ರಿಗಳನ್ನ ಕಳಿಸಿತ್ತು. ಮಾನವರನ್ನ ಬಾಹ್ಯಾಕಾಶಕ್ಕೆ ಟೂರ್ ಕರೆದೊಯ್ಯೋ ಪ್ಲಾನ್​ನಲ್ಲಿರೋ ನಾಸಾ ಇದರ ಮೊದಲ ಭಾಗವಾಗಿ ಬೋಯಿಂಗ್ ಸಹಯೋಗದೊಂದಿಗೆ ಗಗನಯಾತ್ರಿಗಳನ್ನ ಕಳಿಸಿತ್ತು. ಕಕ್ಷೆಯಲ್ಲಿರುವ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 8 ದಿನಗಳನ್ನು ಕಳೆಯಲು ಗಗನಯಾತ್ರಿಗಳು ನಿರ್ಧರಿಸಿದ್ದರು. ಇದರ ಭಾಗವಾಗಿ ಬುಚ್ ವಿಲ್ಮೋರ್ ಎಂಬ ಮತ್ತೊಬ್ಬ ಖಗೋಳ ವಿಜ್ಞಾನಿಯೊಂದಿಗೆ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ಲ್ಯಾಂಡ್ ಆಗಿದ್ದರು. ಅಂದು ಕುಣಿದು ಕುಪ್ಪಳಿಸಿದ್ದರು ಸುನಿತಾ ವಿಲಿಯಮ್ಸ್.

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಜೂನ್ 14 ರಂದು ಇಬ್ಬರು ಭೂಮಿಗೆ ಹಿಂದಿರುಗಬೇಕಿತ್ತು. ಆದ್ರೆ, ಅನಿರೀಕ್ಷಿತ ಆಘಾತ ಕಾದಿತ್ತು. ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಬಾಹ್ಯಕಾಶ ನೌಕೆಯ ಪ್ರೊಪಲ್ಷನ್​ ಸಿಸ್ಟಂ ಮತ್ತು ಸೀಲಿಯಂ ಸೋರಿಕೆಯಿಂದಾಗಿ ಕೊಂಚ ಸಮಸ್ಯೆ ಕಾಣಿಸಿಕೊಂಡಿತು. ಸದ್ಯ ಇಬ್ಬರು ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ.

publive-image

ಇನ್ನು ಜೂನ್ 14ರ ಬದಲಾಗಿ, ಜೂನ್ 26ರಂದು ಭೂಮಿಗೆ ಮರಳೋದಕ್ಕೆ ಡೇಟ್ ಫಿಕ್ಸ್ ಮಾಡಲಾಗಿತ್ತು. ಆದರೀಗ ತಾಂತ್ರಿಕ ಸಮಸ್ಯೆ ಸರಿದೂಗಿಸಲು ನಾಸಾ ಕೆಲಸ ಮಾಡುತ್ತಿದೆ. ಪರಿಸ್ಥಿತಿ ಬಗ್ಗೆ ಯೋಚಿಸಿದರೆ ನೌಕೆಯಲ್ಲಿ 45 ದಿನಕ್ಕಾಗುವಷ್ಟು ಇಂಧನ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಇಂಧನ ಸೋರಿಕೆಯಾದ್ರೆ ಮುಂದೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದರೆ ಈಗಾಗಲೇ 25 ದಿನಗಳ ಕಳೆದಿವೆ ಇನ್ನು ಬರೀ 20 ದಿನಗಳು ಬಾಕಿ ಉಳಿದಿವೆ.

ಬಾಹ್ಯಾಕಾಶದಲ್ಲಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುನಿತಾ ವಿಲಿಯಮ್ಸ್​ ಛಲ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅದರಲ್ಲೂ ಆಕೆ ಭಾರತೀಯ ಮೂಲದ ನಾರಿ ಎಂಬುದು ಹೆಮ್ಮೆಯ ಸಂಗತಿ. ಅಚ್ಚರಿ ಸಂಗತಿ ಎಂದರೆ ಸುನೀತಾ ಬಾಹ್ಯಾಕಾಶದಲ್ಲಿ 322 ದಿನಗಳ ಕಳೆದಿರುವ ಅನುಭವ ಅವರಿಗಿದೆ. ಇಷ್ಟೆಲ್ಲಾ ಸಾಧನೆ ಮಾಡಿದ ಆಕೆ ಮತ್ತೆ ಭೂಮಿಗೆ ಹಿಂತಿರುಗುವ ನಂಬಿಕೆಯಿದೆ.

publive-image

ಧೈರ್ಯ ತುಂಬಿದ ನಾಸಾ

ಈಗಾಗಲೇ ಬಾಹ್ಯಾಕಾಶಕ್ಕೆ ಹೋಗಿರುವ ಸುನಿತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಸುರಕ್ಷಿತವಾಗಿದ್ದಾರೆ. ಹಿಂತಿರುಗಲು ಯಾವುದೇ ಆತುರವಿಲ್ಲ ಎಂದು ತಿಳಿಸಿದ್ದಾರೆ. ಬಾಹ್ಯಕಾಶದಲ್ಲಿ ಅವರು ಸಮಯವನ್ನು ಆನಂದಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಹಿಂತಿರುಗಲಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment