ಕೊಹ್ಲಿ ಅಲ್ಲವೇ ಅಲ್ಲ; RCB ಕ್ಯಾಪ್ಸನ್ಸಿ ರೇಸ್​​ನಲ್ಲಿ ಯಾರು ಊಹಿಸದ ಅಚ್ಚರಿ ಹೆಸ್ರುಗಳು!

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟಿದ ಆರ್​​ಸಿಬಿ
  • ಆರ್​​ಸಿಬಿ ತಂಡದ ಮುಂದಿನ ಕ್ಯಾಪ್ಟನ್​ ಯಾರು ಗೊತ್ತಾ?
  • ಕ್ಯಾಪ್ಟನ್ಸಿ ರೇಸ್​ನಲ್ಲಿ ಐವರು ಅಚ್ಚರಿ ಆಟಗಾರರ ಹೆಸರು

ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ನಡೆದ 2025ರ ಇಂಡಿಯನ್​​​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸ್ಟಾರ್​​ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದೆ. ಒಟ್ಟು 19 ಮಂದಿ ಆಟಗಾರರನ್ನು ಖರೀದಿ ಮಾಡಿದ್ದು, ಈ ಪೈಕಿ 8 ಮಂದಿ ವಿದೇಶಿ ಆಟಗಾರರೇ ಇದ್ದಾರೆ.

ಮುಂದಿನ ಸೀಸನ್​ಗೆ ಆರ್​​ಸಿಬಿ ಹೊಸ ಕ್ಯಾಪ್ಟನ್​ ಹುಡುಕಾಟದಲ್ಲಿದೆ. ಒಂದು ವೇಳೆ ವಿರಾಟ್​ ಕೊಹ್ಲಿ ಆರ್​​ಸಿಬಿ ತಂಡವನ್ನು ಮುನ್ನಡೆಸದೆ ಹೋದಲ್ಲಿ ಈ ಐವರು ವಿದೇಶಿಗರಲ್ಲಿ ಯಾರಾದ್ರೂ ಒಬ್ಬರು ಕ್ಯಾಪ್ಟನ್​ ಆಗಬಹುದು.

ಆರ್​​ಸಿಬಿ ಕ್ಯಾಪ್ಟನ್​ ಆಗಬಲ್ಲ ಐವರು ವಿದೇಶಿಗರು

ಫಿಲ್ ಸಾಲ್ಟ್

ಇಂಗ್ಲೆಂಡ್​ ತಂಡದ ಸ್ಫೋಟಕ ಬ್ಯಾಟರ್​​ ಫಿಲ್ ಸಾಲ್ಟ್. ಇವರು ಕಳೆದ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಮಿಂಚಿದ್ರು. ಫಿಲ್​ ಸಾಲ್ಟ್​ ಅವರನ್ನು ಈಗ ಆರ್​​​ಸಿಬಿ 11.50 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಆರ್​ಸಿಬಿ ಒಪನಿಂಗ್ ಹಾಗೂ ವಿಕೆಟ್ ಕೀಪರ್​ ಸ್ಥಾನ ತುಂಬಿಕೊಂಡಿದೆ. ಇವರು ಈಗಾಗಲೇ ತನ್ನ ಕರಿಯರ್​​ನಲ್ಲಿ ಹಲವು ತಂಡಗಳನ್ನು ಲೀಡ್​ ಮಾಡಿದ್ದು, ಆರ್​​ಸಿಬಿ ಕ್ಯಾಪ್ಟನ್​​ ಆಗೋ ಸಾಮರ್ಥ್ಯ ಹೊಂದಿದ್ದಾರೆ.

ಲಿಯಾಮ್ ಲಿವಿಂಗ್​ಸ್ಟೋನ್

ಇಂಗ್ಲೆಂಡ್ ತಂಡದ ಆಲ್​ರೌಂಡರ್​ ಲಿಯಾಮ್ ಲಿವಿಂಗ್​ಸ್ಟೋನ್. ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ಲಿವಿಂಗ್​ಸ್ಟೋನ್ ಅವರನ್ನು 8.75 ಕೋಟಿ ರೂ. ನೀಡಿ ಖರೀದಿಸುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ. ಇವರಿಗೂ ಕ್ಯಾಪ್ಟನ್​ ಆಗೋ ಕ್ಯಾಪಾಸಿಟಿ ಇದೆ.

ಜೋಶ್​ ಹೇಜಲ್​ವುಡ್

ಆಸ್ಟ್ರೇಲಿಯಾದ ಸ್ಟಾರ್​ ಬೌಲರ್​​ ಜೋಶ್​ ಹೇಜಲ್​ವುಡ್​​. ಐಪಿಎಲ್ 2023ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಜೋಶ್ ಕಳೆದ ಸೀಸನ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಐಪಿಎಲ್​ಗೆ ಕಮ್​ಬ್ಯಾಕ್​ ಮಾಡಿದ್ದು, ಇವರನ್ನು ಆರ್​ಸಿಬಿ 12.50 ಕೋಟಿ ರೂ. ನೀಡಿ ಖರೀದಿಸಿದೆ. ಆರ್​​ಸಿಬಿ ಕ್ಯಾಪ್ಟನ್ಸಿ ಲಿಸ್ಟ್​ನಲ್ಲಿ ಇವರ ಹೆಸರು ಕೂಡ ಇದೆ.

ಟಿಮ್ ಡೇವಿಡ್

ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್. ಇವರನ್ನು ಆರ್​ಸಿಬಿ ಫ್ರಾಂಚೈಸಿ 3 ಕೋಟಿ ರೂ. ನೀಡಿ ಖರೀದಿಸಿದೆ. ಇವರು ಯಾವುದೇ ಒತ್ತಡ ಇಲ್ಲದೆ ಬ್ಯಾಟ್​ ಬೀಸಬಹುದು. ಹಾಗಾಗಿ ಕ್ಯಾಪ್ಟನ್ಸಿ ಕೂಡ ಇವರಿಗೆ ಹೊರೆ ಅಲ್ಲ.

ರೊಮಾರಿಯೊ ಶೆಫರ್ಡ್

ರೊಮಾರಿಯೊ ಶೆಫರ್ಡ್ ವೆಸ್ಟ್ ಇಂಡೀಸ್​ನ ಆಲ್​ರೌಂಡರ್. ಶೆಫರ್ಡ್ ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಈ ಬಾರಿ ಹರಾಜಿನಲ್ಲಿ ಕೇವಲ 1.5 ಕೋಟಿ ರೂ. ನೀಡಿ ರೊಮಾರಿಯೊ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ. ಇವರು ಕೂಡ ಕ್ಯಾಪ್ಟನ್​ ಮೆಟಿರೀಯಲ್​​.

ಇದನ್ನೂ ಓದಿ:ಮುಂಬೈನಿಂದ ಇಶಾನ್ ಕಿಶನ್​ ​ಹೊರಹಾಕಲು ಕಾರಣವೇನು? ಸ್ಫೋಟಕ ಸತ್ಯ ಬಿಚ್ಚಿಟ್ಟ ಹಾರ್ದಿಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment