newsfirstkannada.com

ಹೆಣ್ಣುಮಕ್ಕಳ ವೋಟ್​ಗಾಗಿ ರಾಜಕೀಯ ಪಕ್ಷಗಳ ಸರ್ಕಸ್​; ಕಲರ್​ ಕಲರ್​ ಸೀರೆಗಳಿಗೆ ಸಖತ್​ ಡಿಮ್ಯಾಂಡ್​!

Share :

Published March 22, 2024 at 6:18am

Update March 22, 2024 at 6:19am

    ವಿವಿಧ ನೆಪ ಹೇಳಿ ಸೀರೆ ಖರೀದಿಸ್ತಿರೋ ರಾಜಕಾರಣಿಗಳು

    ಬಣ್ಣ ಬಣ್ಣದ ಸೀರೆ ಹಂಚಲು ರಾಜಕಾರಣಿಗಳು ಮುಂದು

    ಕಲರ್​ ಕಲರ್ ಸೀರೆ ಆರ್ಡರ್ ಕೊಡ್ತಿರೋ ನಾಯಕರು!

ಮತಯುದ್ಧಕ್ಕೆ ಮೂಹೂರ್ತ ನಿಗದಿಯಾಗಿದೆ. ತಣ್ಣಗಿದ್ದ ಪೊಲಿಟಿಕಲ್ ದುನಿಯಾದಲ್ಲಿ ಹೊಸ ತರಂಗ ಎದ್ದಿದೆ. ಈ ನಡುವೆ ಮಹಿಳಾ ಮತ ಬ್ಯಾಂಕ್​ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳು ನಾರಿಯರ ಮನಗೆಲ್ಲಲ್ಲು ಸೀರೆ ಅಸ್ತ್ರದ ಮೊರೆ ಹೋಗಿದ್ದಾರೆ. ಪರಿಣಾಮ ಮಾರುಕಟ್ಟೆಯಲ್ಲಿ ಸೀರೆಗೆ ಭರ್ಜರಿ ಡಿಮ್ಯಾಂಡ್ ಬಂದಿದೆ.

ಸೀರೆ ಹಂಚಿ ‘ಮತ’ಶಿಕಾರಿಗೆ ರಾಜಕೀಯ ಪಕ್ಷಗಳು ಪ್ಲಾನ್

ಹೌದು, ಮತಭಾರತಕ್ಕೆ ರಣಕಹಳೆ ಮೊಳಗಿದೆ. ರಣಕಣದಲ್ಲಿ ಕದನಕಲಿಗಳು ರಣೋತ್ಸಾಹದೊಂದಿಗೆ ಮುನ್ನುಗ್ಗುತ್ತಿದ್ದಾರೆ. ಈ ನಡುವೆ ಮಹಿಳಾ ಮತಬ್ಯಾಂಕ್​ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳು, ನಾರಿಯರ ಮನಗೆಲ್ಲಲ್ಲು ಸೇರಿತೆ ಮೊರೆ ಹೋಗಿದ್ದಾರೆ. ಮಹಿಳಾ ಮತಬ್ಯಾಂಕ್​ ಗಟ್ಟಿಗೊಳಿಸಲು ಕಲರ್ ಕಲರ್​ ಸೀರೆಯ ಅಸ್ತ್ರ ಹೂಡಿದ್ದು, ಈಗಾಗಲೇ ಸೀರೆ ವ್ಯಾಪಾರ ಕೂಡ ಭರ್ಜರಿಯಾಗಿ ನಡೆಯುತ್ತಿದೆ.

ಕಲರ್​ ಕಲರ್ ಸೀರೆ ಆರ್ಡರ್ ಕೊಡ್ತಿರುವ ರಾಜಕಾರಣಿಗಳು!

ಇನ್ನು, ಈಗಾಗಲೇ ಸೀರೆ ಅಂಗಡಿ ಮಾಲೀಕರಿಗೆ ಆರ್ಡರ್ ಮೇಲೆ ಆರ್ಡರ್​ ಕೊಟ್ಟಿರುವ ಪೊಲಿಟಿಕಲ್​ ಲೀಡರ್ಸ್​, ತಮ್ಮ ಆಪ್ತರ ಮೂಲಕ ಆ ಸೀರೆಗಳನ್ನ ತಮ್ಮ ಮನೆಗೆ ತುಂಬಿಸಿಕೊಳ್ತಿದ್ದಾರೆ. ಟ್ರೆಂಡಿಂಗ್​ ಬದಲಾಗ್ತಿದ್ದಂತೆ ಟೆಕ್ನಿಕ್​ ಕೂಡ ಬದಲಾಗಿದೆ ಅನ್ಸುತ್ತೆ. ಅಕ್ರಮದ ವಾಸನೆ ಚುನಾವಣಾಧಿಕಾರಿಗಳ ಮೂಗಿಗೆ ಬಡಿಬಾರ್ದು ಅನ್ನೋ ಕಾರಣಕ್ಕೆ ರಾಜಕಾರಣಿಗಳು ಒಂದೇ ಕಲರ್​ನ ಸೀರೆ ಬದಲು, ಕಲರ್​ ಕಲರ್​ ಸೀರೆ ಖರೀದಿ ಮಾಡಿ ಹಂಚಲು ಮುಂದಾಗಿದ್ದು, ವಿವಿಧ ನೆಪ ಹೇಳಿ ಸೀರೆಗಳನ್ನ ಖರೀದಿ ಮಾಡ್ತಿದ್ದಾರೆ. ಚುನಾವಣೆಯ ಕಾವು ಹೆಚ್ಚಾಗ್ತಿದ್ದಂತೆ ಮತದಾರರನ್ನ ಸೆಳೆಯಲು ರಾಜಕಾರಣಿಗಳು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಈ ಟೈಂನಲ್ಲಿ ಒಂದೊಂದೇ ಅಕ್ರಮದ ಬಾಗಿಲು ಓಪನ್​ ಆಗ್ತಿದ್ದು, ಚುನಾವಣಾಧಿಕಾರಿಗಳು ಕೂಡ ಈ ಕಡೆ ಗಮನ ಹರಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಣ್ಣುಮಕ್ಕಳ ವೋಟ್​ಗಾಗಿ ರಾಜಕೀಯ ಪಕ್ಷಗಳ ಸರ್ಕಸ್​; ಕಲರ್​ ಕಲರ್​ ಸೀರೆಗಳಿಗೆ ಸಖತ್​ ಡಿಮ್ಯಾಂಡ್​!

https://newsfirstlive.com/wp-content/uploads/2024/03/sareee-1.jpg

Load More