/newsfirstlive-kannada/media/post_attachments/wp-content/uploads/2025/01/IND-vs-ENG.jpg)
ನಾಳೆ ಟೀಮ್ ಇಂಡಿಯಾ, ಇಂಗ್ಲೆಂಡ್ ನಡುವೆ 2ನೇ ಟಿ20 ಪಂದ್ಯ ನಡೆಯಲಿದೆ. 2ನೇ ಮಹತ್ವದ ಟಿ20 ಪಂದ್ಯಕ್ಕೆ ಇಂದೇ ಇಂಗ್ಲೆಂಡ್ ಬಲಿಷ್ಠ ತಂಡ ಪ್ರಕಟಿಸಿದೆ. ಇಂಗ್ಲೆಂಡ್ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಆಗಿದ್ದು, ಭಾರತದ ವಿರುದ್ಧ ಬಲಿಷ್ಠ ಟೀಮ್ ಕಣಕ್ಕಿಳಿಯಲಿದೆ.
ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ವೇಗಿ ಗಸ್ ಅಟ್ಕಿನ್ಸನ್ ಭಾರೀ ರನ್ ಬಿಟ್ಟುಕೊಟ್ಟರು. 19ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಕೊಟ್ಟ ಕಾರಣ ಇವರನ್ನು ತಂಡದಿಂದ ಹೊರಗಿಡಲಾಗಿದೆ. ಪ್ಲೇಯಿಂಗ್ ಎಲೆವೆನ್ನಲ್ಲಿ ವೇಗಿ ಗಸ್ ಅಟ್ಕಿನ್ಸನ್ ಬದಲಿಗೆ ಕೇವಲ 4 ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿರೋ ಬ್ರಿಡನ್ ಕೇರ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲು
ಭಾರತದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹೀನಾಯ ಸೋಲು ಕಂಡಿತ್ತು. ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕೇವಲ 132 ರನ್ಗಳಿಸಿತ್ತು. ಫಿಲ್ ಸಾಲ್ಟ್ 0 ಶೂನ್ಯಕ್ಕೆ ಔಟಾದರೆ, ಬೆನ್ ಡಕೆಟ್ 4 ಕೂಡ ವಿಫಲರಾದರು. ಜೋಸ್ ಬಟ್ಲರ್ ಮಾತ್ರ 44 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 68 ರನ್ ಗಳಿಸಿ ಗಮನ ಸೆಳೆದರು.
ಬಟ್ಲರ್ ಹೊರೆತುಪಡಿಸಿ ಹ್ಯಾರಿ ಬ್ರೂಕ್ 17, ಜೋಫ್ರಾ ಆರ್ಚರ್ 12, ಲಿಯಾಮ್ ಲಿವಿಂಗ್‌ಸ್ಟೋನ್ 0, ಜಾಕೋಬ್ ಬೆಥೆಲ್ 7 ಮತ್ತು ಜೇಮೀ ಓವರ್ಟನ್ 2 ರನ್ಗಳಿಸಲು ವಿಫಲರಾದರು.
ಟೀಮ್ ಇಂಡಿಯಾಗೆ ಭರ್ಜರಿ ಜಯ
133 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 12.5 ಓವರ್‌ಗಳಲ್ಲಿ ಪಂದ್ಯ ಮುಗಿಸಿ ಬರೋಬ್ಬರಿ 7 ವಿಕೆಟ್ಗಳಿಂದ ಗೆದ್ದು ಬೀಗಿದೆ. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ 26, ಅಭಿಷೇಕ್ ಶರ್ಮಾ 79, ತಿಲಕ್ ವರ್ಮಾ 19 ಮತ್ತು ಹಾರ್ದಿಕ್ ಪಾಂಡ್ಯ 3 ರನ್ ಗಳಿಸಿ ಭಾರತ ತಂಡವನ್ನು ಗೆಲ್ಲಿಸಿದ್ರು.
ಇದನ್ನೂ ಓದಿ:ಗುರುವನ್ನೇ ಮೀರಿಸೋ ಫಿಯರ್ಲೆಸ್ ಬ್ಯಾಟಿಂಗ್.. ಯುವಿ ಗರಡಿಯ ಅಭಿಷೇಕ್ಗೆ ಭಯವೇ ಇಲ್ವಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ