newsfirstkannada.com

ಹೇಮಾವತಿ ಎಕ್ಸ್​ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತೀವ್ರ ವಿರೋಧ; ಕಾರಣವೇನು?

Share :

Published May 17, 2024 at 6:13am

  ಕುಣಿಗಲ್​ನಿಂದ ಮಾಗಡಿಗೆ ನೀರು ಹರಿಸುವ ಯೋಜನೆ

  ಯೋಜನೆ ನಿಲ್ಲಿಸುವಂತೆ ಪಕ್ಷಾತೀತವಾಗಿ ತೀವ್ರ ಹೋರಾಟ

  ಜಿಲ್ಲೆಯಲ್ಲಿ ಈಗಲೇ ‘ನಮ್ಮ ನೀರು-ನಮ್ಮ ಹಕ್ಕು’ ಎಂಬ ಕೂಗು

ಹೇಮಾವತಿ ನೀರು ಹಂಚಿಕೆ ವಿಚಾರಕ್ಕೆ ತುಮಕೂರಿನ ರಾಜಕೀಯ ನಾಯಕರು ಹಾಗೂ ಡಿ.ಕೆ ಶಿವಕುಮಾರ್ ನಡುವೆ ಜಲ ಸಂಘರ್ಷ ಶುರುವಾಗಿದೆ. ಹೇಮಾವತಿ ನೀರನ್ನ ಮಾಗಡಿಗೆ ಹರಿಸೋ ಡಿಸಿಎಂ ಎಕ್ಸ್‌ಪ್ರೆಸ್‌ ಕೆನಾಲ್‌ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಪ್ರತಿಭಟನೆ ರೂಪ ಪಡೆದಿದೆ. ಯೋಜನೆ ನಿಲ್ಲಿಸಲು ಸರ್ಕಾರಕ್ಕೆ ಒಂದು ತಿಂಗಳ ಗಡುವು ಕೊಡಲಾಗಿದೆ.

ಇದನ್ನೂ ಓದಿ: ಮತ್ತೆ​ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ; ಫ್ಯಾನ್ಸ್​ ಫುಲ್ ಶಾಕ್​; ಏನಂದ್ರು ಗೊತ್ತಾ?

ಮಾಗಡಿಯ ಶ್ರೀರಂಗ ಏತ ಯೋಜನೆಗೆ ಕುಣಿಗಲ್‌ನಿಂದ ಹೇಮಾವತಿ ನೀರು ಹರಿಸಲು ಎಕ್ಸ್‌ಪ್ರೆಸ್‌ ಕೆನಾಲ್‌ ಯೋಜನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ಕೊಟ್ಟಿದ್ರು. ಯೋಜನೆ ಜಾರಿಯಾದಾಗಿನಿಂದ ರೈತರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತುಮಕೂರು ಜನರ ಆತಂಕಕ್ಕೂ ಕಾರಣವಾಗಿದೆ. ಹಾಸನದಿಂದ ಹರಿದು ಬರೋ ಹೇಮಾವತಿ ನೀರು ತುಮಕೂರಿಗೆ ಜೀವನದಿಯಾಗಿದೆ. ಇದೀಗ ಅದೇ ನೀರನ್ನ ಹೇಮಾತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಮೂಲಕ ಕುಣಿಗಲ್‌ನಿಂದ ಮಾಗಡಿಗೆ ನೀರು ಹರಿಸೋದಕ್ಕೆ 984 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಯೋಜನೆ ಪ್ರಸ್ತಾಪದಿಂದಲೂ ವಿರೋಧವಿದ್ದರೂ ಸರ್ಕಾರ ಸ್ಥಳೀಯರ ಆಕ್ರೋಶಕ್ಕೆ ಕ್ಯಾರೆ ಎನ್ನದೆ ಕಾಮಗಾರಿ ಕೈಗೆತ್ತಿಕೊಂಡಿದೆ.

ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು, ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲೆಯಲ್ಲೀಗ ನಮ್ಮ ನೀರು-ನಮ್ಮ ಹಕ್ಕು ಎಂಬ ಕೂಗು ಗಟ್ಟಿಯಾಗಿದೆ. ಗುಬ್ಬಿ ತಾಲೂಕಿನ ಸುಂಕಾಪುರ ಬಳಿಯ ಲಿಂಕ್ ಕೆನಾಲ್‌ ಬಳಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಮಸಾಲ ಜಯರಾಂ, ಶಾಸಕರುಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗಿಯಾಗಿದ್ರು. ಅಷ್ಟೇ ಅಲ್ಲದೇ ನೂರಾರು ರೈತರು, ರೈತಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ವಿರೋಧ ವ್ಯಕ್ತಪಡಿಸಿದ್ರು. ಮುನ್ನೆಚ್ಚರಿಕಾ ಕ್ರಮವಾಗಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಬಳಿ ಬಿಗಿ ಪೊಲೀಸ್ ಭದ್ರತೆಯನ್ನ ಒದಗಿಸಲಾಗಿತ್ತು. ಹೇಮಾವತಿ ನಾಲೆ ಬದಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿತ್ತು. ಕಾಮಗಾರಿ ಆದ್ರೆ ಗುಬ್ಬಿಗೆ ಒಂದು ಹನಿ ನೀರು ಸಿಗಲ್ಲ ಅಂತಾ ಯೋಜನೆ ವಿರುದ್ಧ ಜೆಡಿಎಸ್ ಶಾಸಕ ಕೃಷ್ಣಪ್ಪ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು, ಲಿಂಕ್ ಕೆನಾಲ್ ಕಾಮಗಾರಿ ನಾಲೆ ಬಳಿ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರ ಅಣುಕು ಶವಯಾತ್ರೆ ಮಾಡಲಾಯ್ತು. ಕನ್ನಡಪರ ಹಾಗೂ ರೈತ ಸಂಘಟನೆಗಳು ತುಮಕೂರಿನ ಟೌನ್‌ಹಾಲ್‌ನ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ರು. ಕೆನಾಲ್‌ ಬಳಿ ಸ್ವಾಮೀಜಿಗಳು, ಜನಪ್ರತಿನಿಧಿಗಳು ಹಿಡಿ ಮಣ್ಣು ಹಾಕೋ ಮೂಲಕ ಸರ್ಕಾರ ಕಾಮಗಾರಿ ನಿಲ್ಲಸದಿದ್ರೆ ಜೆಸಿಬಿಯಿಂದ ನಾಲೆ ಮುಚ್ಚುವುದಾಗಿ ಎಚ್ಚರಿಕೆ ನೀಡಲಾಗಿದ್ದು, ಒಂದು ತಿಂಗಳು ಗಡುವು ಕೊಡಲಾಗಿದೆ. ಜಿಲ್ಲೆಗೆ ಸಿಗಬೇಕಾದ ಹೇಮಾವತಿ ಪಾಲೇ ಸರಿಯಾಗಿ ಸಿಗುತ್ತಿಲ್ಲ. ಹೀಗಿರುವಾಗ ಮಾಗಡಿಗೆ ನೀರು ಕೊಡುವುದು ಹೇಗೆಂದು ತುಮಕೂರಿಗರ ಪ್ರಶ್ನೆಯಾಗಿದೆ. ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರೋದ್ರಿಂದ ಇದಕ್ಕೆ ಡಿಸಿಎಂ ಹಾಗೂ ಸರ್ಕಾರ ಯಾವ ರೀತಿ ಸ್ಪಂದಿಸುತ್ತೆ ಅಂತಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೇಮಾವತಿ ಎಕ್ಸ್​ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತೀವ್ರ ವಿರೋಧ; ಕಾರಣವೇನು?

https://newsfirstlive.com/wp-content/uploads/2024/05/dk-shivakumar3.jpg

Load More