4ನೇ ಟಿ20 ಪಂದ್ಯಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ; ಸ್ಟಾರ್​​ ಆಟಗಾರರಿಗೆ ತಂಡದಿಂದ ಗೇಟ್​ಪಾಸ್​​​

author-image
Ganesh Nachikethu
Updated On
ಮಹತ್ವದ ಟಿ20 ಪಂದ್ಯಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ತಂಡದಿಂದ ಸ್ಟಾರ್​ ಆಟಗಾರರಿಗೆ ಗೇಟ್​ಪಾಸ್​​​​
Advertisment
  • ನಾಳೆ ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವಿನ 4ನೇ ಟಿ20
  • ಪುಣೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಪಂದ್ಯ..!
  • ಇಂಡಿಯಾದ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಮೇಜರ್​ ಸರ್ಜರಿ

ನಾಳೆ ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯ ನಡೆಯಲಿದೆ. ಪುಣೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.

ಇನ್ನು, ಸರಣಿಯ 3 ಪಂದ್ಯಗಳ ನಂತರ ಟೀಮ್​ ಇಂಡಿಯಾ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. 3ನೇ ಪಂದ್ಯ ಸೋತಿರೋ ಟೀಮ್​ ಇಂಡಿಯಾ 4ನೇ ಟಿ20 ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹಾಗಾಗಿ ಟೀಮ್​ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಮೇಜರ್​ ಸರ್ಜರಿ ಆಗಲಿದೆ.

ಬಲಿಷ್ಠ ತಂಡ ಕಣಕ್ಕಿಳಿಸೋ ಪ್ಲಾನ್​ ಭಾರತದ್ದು!

ಇಂಗ್ಲೆಂಡ್​ ವಿರುದ್ಧ ನಾಳೆ ಬಲಿಷ್ಠ ಟೀಮ್​​ ಇಂಡಿಯಾ ಕಣಕ್ಕಿಳಿಯಲಿದೆ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಲಿದ್ದು, ನಾಳೆಯೇ ತವರಿನ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ನಿರೀಕ್ಷೆ ಇದೆ.

ಹೇಗಿರಲಿದೆ ಟೀಮ್​​?

ಎಂದಿನಂತೆಯೇ ಟೀಮ್​ ಇಂಡಿಯಾ ಪರ 4ನೇ ಟಿ20 ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಓಪನಿಂಗ್​ ಮಾಡಲಿದೆ. ತಂಡದ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ತಿಲಕ್ ವರ್ಮಾ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಬಹುದು.

ರಿಂಕು ಸಿಂಗ್ ಟೀಮ್​ ಇಂಡಿಯಾದ ಸ್ಟಾರ್​ ಫಿನಿಶರ್​​. ಇವರು 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು. ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಫಿನಿಶರ್ ಪಾತ್ರ ನಿರ್ವಹಿಸಬಹುದು.

ಇಷ್ಟೇ ಅಲ್ಲ ಅಕ್ಷರ್​ ಪಟೇಲ್ ಮತ್ತು ವರುಣ್ ಚಕ್ರವರ್ತಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರಲಿದ್ದಾರೆ. ಅಕ್ಷರ್​ ಪಟೇಲ್​ ಬೌಲಿಂಗ್ ಮತ್ತು ಬ್ಯಾಟಿಂಗ್​​ನಲ್ಲೂ ತಂಡಕ್ಕೆ ಕೊಡುಗೆ ನೀಡಲಿದ್ದಾರೆ.

ಸ್ಟಾರ್​ ಬೌಲರ್​ಗೆ ಕೊಕ್​

ಮೊಹಮ್ಮದ್ ಶಮಿ ಜೊತೆಗೆ ಅರ್ಷದೀಪ್ ಸಿಂಗ್ ಕೂಡ 4ನೇ ಟಿ20 ಆಡಬಹುದು. ಇಬ್ಬರು ಆಂಗ್ಲರನ್ನು ಕಾಡಲಿದ್ದು, ರವಿ ಬಿಷ್ಣೋಯ್​ ಅವರಿಗೆ ತಂಡದಿಂದ ಗೇಟ್​ಪಾಸ್​ ನೀಡಲಾಗುವುದು.

ಇದನ್ನೂ ಓದಿ:ಕೊಹ್ಲಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಮೊಹಮ್ಮದ್​ ಶಮಿ; ಇಬ್ಬರ ಮಧ್ಯೆ ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment