Advertisment

300 ಕಿ.ಮೀ ಟ್ರಾಫಿಕ್​ ಜಾಮ್​​; ವಿಶ್ವದಾಖಲೆ; ಮಹಾಕುಂಭಮೇಳಕ್ಕೆ ಕಾರಲ್ಲಿ ಹೋದ್ರೆ ನಿಮ್ಮ ಕಥೆ ಮುಗೀತು!

author-image
Gopal Kulkarni
Updated On
300 ಕಿ.ಮೀ ಟ್ರಾಫಿಕ್​ ಜಾಮ್​​; ವಿಶ್ವದಾಖಲೆ; ಮಹಾಕುಂಭಮೇಳಕ್ಕೆ ಕಾರಲ್ಲಿ ಹೋದ್ರೆ ನಿಮ್ಮ ಕಥೆ ಮುಗೀತು!
Advertisment
  • ಟ್ರಾಫಿಕ್​ ಜಾಮ್​ನಲ್ಲೂ ಮಹಾ ದಾಖಲೆ ಬರೆದ ಕುಂಭಮೇಳ
  • ಪ್ರಯಾಗರಾಜ್​​ಗೆ ಹೋಗುವ ರಸ್ತೆಗಳಲ್ಲೆಲ್ಲಾ ಸಿಲುಕಿದ ವಾಹನಗಳು
  • ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಹೆಸರು ಪಡೆದ ಘಟನೆ

ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳೆ ದಿನನಿತ್ಯ ಹೊಸ ಹೊಸ ದಾಖಲೆ ಬರೆಯುತ್ತಿದೆ. ಮಹಾಕುಂಭ ಮೇಳ ಅಂತ್ಯಕ್ಕೆ ಕೇವಲ 16 ದಿನ ಬಾಕಿ ಇವೆ. ಫೆಬ್ರವರಿ 26ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಪ್ರಯಾಗ್​ರಾಜ್​ನತ್ತ ಭಕ್ತಸಾಗರವೇ ಹರಿದು ಬರ್ತಿದ್ದು, ಟ್ರಾಫಿಕ್​ ವಿಚಾರದಲ್ಲೂ ದಾಖಲೆ ಬರೆದಿದೆ.

Advertisment

publive-image

ಲಕ್ಷಾಂತರ ಭಕ್ತರು ಬರ್ತಿರುವ ಕಾರಣ ನೂರಾರು ಕಿ.ಮೀ. ಟ್ರಾಫಿಕ್​ಜಾಮ್​ ಉಂಟಾಗಿದೆ. ಪ್ರಯಾಗರಾಜ್ -ವಾರಾಣಾಸಿ ಮಾರ್ಗದಲ್ಲಿ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್​ ಆಗಿದ್ದು, ಸುಮಾರು 48 ಗಂಟೆವರೆಗೂ ವಾಹನಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಳ್ತಿವೆ. ಇನ್ನು ಪ್ರಯಾಗರಾಜ್-ಕಾನ್ಪುರ ಮಾರ್ಗದಲ್ಲೂ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ಮಧ್ಯಪ್ರದೇಶ ರಾಜ್ಯದಲ್ಲೇ ಪ್ರಯಾಗರಾಜ್​ನತ್ತ ಬರುವ ವಾಹನಗಳ ಸಂಚಾರವನ್ನು ಬಂದ್‌ ಮಾಡಲಾಗಿದೆ. ಟ್ರಾಫಿಕ್​ನಿಂದಾಗಿ ಸುಮಾರು 50 ಕಿ.ಮೀ.ಸಂಚರಿಸಲು 10-12 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಒಂದೆರೆಡು ಕಿ.ಮೀ.ಸಂಚಾರಕ್ಕೂ ಹೆಚ್ಚಿನ ಸಮಯ ಬೇಕೇ ಬೇಕು. ಆದ್ದರಿಂದ ಮಧ್ಯಪ್ರದೇಶದ ನಗರವಾದ ಕಟ್ನಿಗೂ ಬರಬೇಡಿ ಎಂದು ಭಕ್ತರಲ್ಲಿ ಪೊಲೀಸರ ಮನವಿ ಮಾಡ್ತಿದ್ದಾರೆ.

ಪ್ರಯಾಗರಾಜ್​ನ ಸಂಗಮ ರೈಲ್ವೇ ಸ್ಟೇಷನ್ ಕೂಡ ಬಂದ್
ಬಸಂತ ಪಂಚಮಿಯ ಬಳಿಕ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇತ್ತು. ಆದ್ರೆ ಅದೆಲ್ಲವೂ ಉಲ್ಟಾ ಆಗಿದ್ದು, ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಳವಾಗಿದೆ. ಸದ್ಯ ಪ್ರಯಾಗರಾಜ್‌ನಲ್ಲಿ ಸಾರ್ವಜನಿಕರ ಭಾರೀ ಜನದಟ್ಟಣೆಯಿಂದಾಗಿ ಸಂಗಮ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ. ಸಂಗಮ ರೈಲ್ವೇ ಸ್ಟೇಷನ್​ನಿಂದ ಹೊರ ಹೋಗಲು ಪ್ರಯಾಣಿಕರಿಗೆ ತೊಂದರೆಯಾದ ಕಾರಣ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

Advertisment


">February 10, 2025

ಇನ್ನು ಮಹಾರಾಷ್ಟ್ರದಲ್ಲಿ ಸಾವಿರಾರು ಕಾರುಗಳು ಒಂದು ಒಂದು ಇಂಚು ಕೂಡ ಮೂವ್ ಆಗದ ಮಟ್ಟಕ್ಕೆ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿವೆ.ಮಧ್ಯಪ್ರದೇಶದ ಅನೇಕ ಜಿಲ್ಲೆಗಳು ಕತ್ನಿ, ಮಲ್ಹಾರ್​, ಮತ್ತು ರೇವಾ ಜಿಲ್ಲೆಗಳಲ್ಲಿ ಟ್ರಾಫಿಕ್ ಜಾಮ್ ಸುಮಾರು 200 ಕಿಲೋ ಮೀಟರ್​ನಿಂದ 300 ಕಿಲೋ ಮೀಟರ್​ ವರೆಗೂ ಹಬ್ಬಿದೆ. ಸುಮಾರು 48 ಗಂಟೆಗಳ ಕಾಲದಿಂದ ಟ್ರಾಫಿಕ್ ಹಾಗೆಯೇ ಇದೆ. ಇದು ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: Kumbh Mela; ಮಹಾಕುಂಭಕ್ಕೆ ಹೋಗಲು ಆಗದ ಕನ್ನಡಿಗರಿಗೆ ಸರ್ಕಾರದಿಂದ ಗುಡ್​ನ್ಯೂಸ್

publive-image

ಇನ್ನು ಉತ್ತರಪ್ರದೇಶದ ವಾರಾಣಸಿ, ಲಖನೌ, ಮತ್ತು ಕಾನ್ಪುರ್​ಗಳಲ್ಲಿ ಪ್ರಯಾಗರಾಜ್​ಗೆ ಹೋಗುವ ರಸ್ತೆಗಳೆಲ್ಲವೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸಬಡುತ್ತಿದ್ದಾರೆ. ಸುಮಾರು 25 ಕಿಲೋ ಮೀಟರ್​ವರೆಗೂ ಟ್ರಾಫಿಕ್ ಜಾಮ್ ಹರಡಿದೆ. ಪ್ರಯಾಗರಾಜ್​ನಲ್ಲಿಯೇ ಸುಮಾರು 7 ಕಿಲೋ ಮೀಟರ್​ ರಸ್ತೆಯಲ್ಲಿ ವಾಹಗನಗಳು ಅಲುಗಾಡದೆ ಹಾಗೆಯೇ ನಿಂತಿವೆ.

Advertisment

ಇದನ್ನೂ ಓದಿ:ಪ್ರಯಾಗ್‌ ರಾಜ್‌ ಮಹಾಕುಂಭಮೇಳದಲ್ಲಿ ಡಿ.ಕೆ ಶಿವಕುಮಾರ್ ಪುಣ್ಯಸ್ನಾನ; ಟಾಪ್ 10 ಪೋಟೋಗಳು!

publive-image

ಇನ್ನು ಪ್ರಯಾಗರಾಜ್​ನಿಂದ 400 ಕಿಲೋ ಮೀಟರ್ ದೂರದಲ್ಲಿರುವ ಜಬಲಾಪುರ್​ನಲ್ಲಿಯೂ ಕೂಡ ಸುಮಾರು 15 ಕಿಲೋ ಮೀಟರ್ ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲ ನೆರೆಯ ರಾಜ್ಯಗಳಿಂದ ಪ್ರಯಾಗರಾಜ್​ಗೆ ಹೋಗುವ ಎಲ್ಲಾ ರಸ್ತೆಗಳಲ್ಲಿಯೂ ಕೂಡ ಇದೇ ಸ್ಥಿತಿ ಇದೆ. ಸದ್ಯ ಇದನ್ನು ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕರೆಯಲಾಗುತ್ತದೆ. ಈ ಹಿಂದೆ ಚೀನಾದಲ್ಲಿ 2010ರಲ್ಲಿ ಬೀಜಿಂಗ್ ಟಿಬೆಟ್​ ಎಕ್ಸ್​ಪ್ರೆಸ್​ ಹೈವೇನಲ್ಲಿ ಇದೇ ರೀತಿಯ 100 ಕಿಲೋ ಮೀಟರ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ ಕ್ಲೀಯರ್ ಆಗಲು ಸುಮಾರು 12 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಅದಾದ ಬಳಿಕ ಅತಿದೊಡ್ಡ ಟ್ರಾಫಿಕ್ ಜಾಮ್ ಸಂಭವಿಸಿದ್ದು ಈಗಲೇ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment