Advertisment

ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾವು

author-image
Bheemappa
Updated On
ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾವು
Advertisment
  • ವಿದ್ಯಾರ್ಥಿಯನ್ನು ಎಬ್ಬಿಸಲು ಹೋದ ಯುವಕನಿಗೂ ಕರೆಂಟ್ ಶಾಕ್
  • ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನ ಶಿಫ್ಟ್ ಮಾಡಿ, ಪರಿಶೀಲನೆ
  • ಪಿಜಿಯಲ್ಲಿದ್ದ ವಿದ್ಯಾರ್ಥಿಗೆ ಕರೆಂಟ್ ಶಾಕ್ ತಗುಲಿದ್ದು ಹೇಗೆ, ಕಾರಣ?

ಬೆಂಗಳೂರು: ಮೊಬೈಲ್ ಪೋನ್ ಚಾರ್ಜ್ ಹಾಕಲು ಹೋದಾಗ ಕರೆಂಟ್ ಶಾಕ್​​ನಿಂದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಜುನಾಥ್ ನಗರದ‌ ವರ್ಷಿಣಿ ಜೆಂಟ್ಸ್​ ಪಿಜಿಯಲ್ಲಿ ನಡೆದಿದೆ.

Advertisment

ಇದನ್ನೂ ಓದಿ: ವರುಣಾರ್ಭಟಕ್ಕೆ ಬೆಚ್ಚಿಬಿದ್ದ ಕರಾವಳಿ, ಮಲೆನಾಡು! ರೆಡ್​ ಅಲರ್ಟ್.. ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ಬೀದರ್ ಮೂಲದ ಶ್ರೀನಿವಾಸ್ (24) ಮೃತಪಟ್ಟ ವಿದ್ಯಾರ್ಥಿ. ಸಾಫ್ಟ್​​ವೇರ್ ಕೋರ್ಸ್​ ಮಾಡಲೆಂದು ಬೆಂಗಳೂರಿಗೆ ಬಂದು ಮಂಜುನಾಥ್ ನಗರದ‌ ಪಿಜಿಯಲ್ಲಿದ್ದ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ತನ್ನ ರೂಮ್​ನಲ್ಲಿ ಮೊಬೈಲ್​ ಚಾರ್ಜ್​ ಹಾಕಲು ಹೋಗಿದ್ದಾಗ ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್​​ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಮೊಬೈಲ್ ಚಾರ್ಜಿಂಗ್ ವೈರ್ ಡ್ಯಾಮೇಜ್ ಆಗಿರುವುದು ಗೊತ್ತಾಗಿದೆ. ಸಾವಿಗೆ ಇದೇ ಕಾರಣವಾಯ್ತಾ ಎನ್ನುವ ಅನುಮಾನ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ:ಸಿಲಿಕಾನ್​ ಸಿಟಿಯಲ್ಲಿ ಡೆಂಘೀಗೆ ಮೊದಲ ಬಲಿ.. 11 ವರ್ಷದ ಬಾಲಕ ಸಾವು 

publive-image

ರಾತ್ರಿ ಊಟದ ಸಮಯವಾಗಿದ್ದರಿಂದ ಊಟಕ್ಕೆ ಬಾ ಎಂದು ಪಕ್ಕದ ಬೆಡ್ ಯುವಕ, ಆ ವಿದ್ಯಾರ್ಥಿಯನ್ನ ಕರೆದಿದ್ದ. ಆದರೆ ಆತ ಯಾವುದೇ ಸನ್ನೆ, ಸೂಚನೆ ಮಾಡಲಿಲ್ಲ. ವಿದ್ಯಾರ್ಥಿ ಅಂಗಾತ ಬಿದ್ದಿರೋದು ನೋಡಿ ಮೈಮುಟ್ಟಿ ಕರೆಯಲು  ಯುವಕ ಮುಂದಾಗಿದ್ದಾನೆ. ಆಗ ಯುವಕನಿಗೂ ಕರೆಂಟ್ ಶಾಕ್ ಹೊಡೆದಿದೆ.

Advertisment

ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಪಿಜಿ ಸಿಬ್ಬಂದಿ ಬಸವೇಶ್ವರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಬಸವೇಶ್ವರನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment