/newsfirstlive-kannada/media/post_attachments/wp-content/uploads/2025/04/student-death.jpg)
ಮುಖದಲ್ಲಿ ಚೆಂದದ ನಗು, ಮಾತಿನಲ್ಲಿ ಧೈರ್ಯ.. ಹೀಗೆ ಖುಷಿ ಖುಷಿಯಿಂದ ವೇದಿಕೆ ಮೇಲೆ ನಿಂತುಕೊಂಡು ಮೈಕ್ ಮುಂದೆ ನಿಂತುಕೊಂಡು ಭಾಷಣ ಮಾಡುತ್ತಿದ್ದಾಗ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ರಾಮಾಚಾರಿ ಸೀರಿಯಲ್ ಚಾರು ಸೀರೆ ಮೇಲೆ ಹೆಣ್ಮಕ್ಕಳ ಕಣ್ಣು; ನಟಿ ಮೌನ ಗುಡ್ಡೆಮನೆ ಕಲೆಕ್ಷನ್ ನೋಡಿ!
ಹೌದು, ಸಾವು ಯಾರಿಗೆ ಯಾವಗ ಬಂದು ಬಿಡುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ನಿನ್ನೆ ನಮ್ಮ ಜೊತೆಗೆ ಇದ್ದವರು ಇಂದು ಇರೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ನಡೆದ ಘೋರ ದುರಂತ ಎಲ್ಲರಿಗೂ ಶಾಕ್ ಉಂಟು ಮಾಡಿದೆ.
ಕಾಲೇಜಿನಲ್ಲಿ ಬೀಳ್ಕೊಡುವ ಸಮಾರಂಭದ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಆಕೆಗೆ ಏಕಾಏಕಿ ಪ್ರಜ್ಞೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಲೆ. ಇನ್ನೂ, ವಿದ್ಯಾರ್ಥಿನಿ ಸಾಯುವ ದೃಶ್ಯ ಫೋನ್ನಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
निरोप समारंभाचे भाषण देत असताना विद्यार्थिनीचा मृत्यू; परांडा येथील घटना#Paranda#Dharashivpic.twitter.com/nJe8ic12XM
— Lokmat (@lokmat)
निरोप समारंभाचे भाषण देत असताना विद्यार्थिनीचा मृत्यू; परांडा येथील घटना#Paranda#Dharashivpic.twitter.com/nJe8ic12XM
— Lokmat (@lokmat) April 5, 2025
">April 5, 2025
ಮಾಹಿತಿ ಪ್ರಕಾರ, ಈ ಘಟನೆ ಪಾರಂಡದ ಶಿಂಧೆ ಕಾಲೇಜಿನಲ್ಲಿ ನಡೆದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ 20 ವರ್ಷದ ವಿದ್ಯಾರ್ಥಿನಿ ವರ್ಷಾ ಖಾರತ್ ತನ್ನ ವಿದಾಯ ಭಾಷಣವನ್ನು ಅತ್ಯಂತ ಆತ್ಮವಿಶ್ವಾಸದಿಂದ ಮತ್ತು ನಗು ಮುಖದಲ್ಲಿ ಪ್ರಾರಂಭಿಸಿದ್ದಾಳೆ. ಹೀಗೆ ತನ್ನ ಸ್ನೇಹಿತರು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಲೆ ಮೈಕ್ ಮುಂದೆ ನಿಂತುಕೊಂಡಿದ್ದ ವರ್ಷಾ ರಪ್ಪನೇ ಕೆಳಗೆ ಬಿದ್ದುಬಿಟ್ಟಿದ್ದಾಳೆ.
ಆ ಕೂಡಲೇ ವರ್ಷಾಳನ್ನು ಪರಾಂಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ವರ್ಷಾ 8 ವರ್ಷದವಳಿದ್ದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆದರೆ ಕಳೆದ ಹನ್ನೆರಡು ವರ್ಷಗಳಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿರಲಿಲ್ಲ ಮತ್ತು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆದ್ರೆ, ಭಾಷಣ ಮಾಡುತ್ತಿದ್ದಾಗ ಆಕೆಗೆ ಹಠಾತ್ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ ಎಂದು ತಿಳದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ