/newsfirstlive-kannada/media/post_attachments/wp-content/uploads/2025/03/karna-1.jpg)
ಕರಿಮಣಿ ಧಾರಾವಾಹಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸ್ಲಾಟ್ ಚೇಂಜ್ ಆದ್ರೂ ಕೂಡ ವೀಕ್ಷಕರನ್ನ ಹಿಡಿದುಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ತಂಡ. ಸದ್ಯ ಕರಿಮಣಿ ಸ್ಟೋರಿನಲ್ಲಿ ಮಹಾ ಟ್ವಿಸ್ಟ್ವೊಂದು ತೆರೆದುಕೊಳ್ಳುತ್ತಿದೆ. ಅದೇನೂ ಅಂತ ಹೇಳೋಕು ಮೊದಲು ಕರ್ಣ ಪಾತ್ರದಲ್ಲಿ ನಟಿಸುತ್ತಿರೋ ಅಶ್ವಿನ್ಗೆ ವಿದ್ಯಾರ್ಥಿನಿಯರು ಮುತ್ತಿಗೆ ಹಾಕಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಜಾಕ್‌ಪಾಟ್: ಒಂದಲ್ಲ.. ಎರಡಲ್ಲ.. 7 ಕಡೆ KGF ಮಾದರಿಯ ಚಿನ್ನದ ನಿಕ್ಷೇಪ ಪತ್ತೆ; ಗುಡ್‌ನ್ಯೂಸ್!
ಹೌದು, ಕರ್ಣನ ಸ್ಮೈಲ್.. ಸ್ಟೈಲ್ಗೆ ಹುಡ್ಗಿರು ಫಿದಾ ಆಗಿದ್ದಾರೆ. ಅಶ್ವಿನ್ಗೆ ಫೀಮೇಲ್ ಫಾಲೋವಿಂಗ್ ಜಾಸ್ತಿ ಇದೆ. ಇತ್ತೀಚೆಗೆ JSS ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದರು ನಟ. ಈ ವೇಳೆ ಒಂದಿಷ್ಟು ಹುಡುಗಿಯರು ಅವರನ್ನು ಸುತ್ತುವರೆದೂ ರಾಜಾ.. ರಾಜಾ.. ಸಾಂಗ್ಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಇದೇ ವಿಡಿಯೋವನ್ನು ಹಂಚಿಕೊಂಡ ನಟ ಅಶ್ವಿನ್, ಧನ್ಯವಾದಗಳು JSS ಮಹಿಳಾ ಕಾಲೇಜು. ನಿಮ್ಮ ಪ್ರೀತಿಯಿಂದ ನಾನು ಸಂಪೂರ್ಣವಾಗಿ ಮುಳುಗಿದ್ದೇನೆ. ನೀವು ಸಂಪೂರ್ಣವಾಗಿ ಶಕ್ತಿಶಾಲಿಗಳು. ನಿಮ್ಮ ಶಕ್ತಿ ನನ್ನ ದಿನವನ್ನು ಮಾಡಿದೆ. ಹೆಣ್ಮಕ್ಕಳೆ ಸ್ಟ್ರಾಂಗೂ ಗುರು ಅಂತ ಬರೆದುಕೊಂಡಿದ್ದಾರೆ. ಅಂದ್ಹಾಗೆ, ನಟನೆಯಲ್ಲಿ ಯಾವುದು ಕೈಗೂಡದ ಕಾರಣ ಐಟಿ ಉದ್ಯೋಗಕ್ಕೆ ಸೇರಿದ್ರು ಅಶ್ವಿನ್. ಆದ್ರೆ ಕೆಲಸ ಆತ್ಮ ತೃಪ್ತಿ ಕೊಡಲಲ್ಲಿ. ಅಭಿನಯದಲ್ಲೇ ಏನಾದ್ರು ಸಾಧನೆ ಮಾಡಬೇಕು ಅಂತ ಇಂಡಸ್ಟ್ರಿಗೆ ಕರಿಮಣಿ ಮೂಲಕ ಮತ್ತೆ ಕಾಲಿಟ್ಟಿದ್ದಾರೆ.
View this post on Instagram
ಇನ್ನೂ, ಸೀರಿಯಲ್ ಸ್ಟೋರಿಗೆ ಬರೋದಾದ್ರೇ, ಬ್ಲ್ಯಾಕ್ ರೋಸ್ ಯಾರು ಅನ್ನೋ ಸತ್ಯ ರಿವೀಲ್ ಆಗಿದೆ. ಕರ್ಣನ ಸಾಕು ತಾಯಿಯೇ ಬ್ಲ್ಯಾಕ್ ರೋಸ್ ಆಗಿ ಕಾಡ್ತಾ ಇದ್ರು ಎಂಬ ರಹಸ್ಯ ಬಯಲಾಗ್ತಿದೆ. ಆ ರೋಚಕ ಸನ್ನಿವೇಶಗಳು, ಪ್ಲ್ಯಾಶ್ ಬ್ಯಾಕ್ ಸ್ಟೋರಿ ನೋಡಲು ಕರಿಮಣಿ ಮಿಸ್ ಮಾಡದೇ ನೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ