ರಾತ್ರಿ ತಂದೆ ಸಾವು.. ಬೆಳಗ್ಗೆ SSLC ಪರೀಕ್ಷೆ; ದುಃಖದಲ್ಲೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ!

author-image
admin
Updated On
ರಾತ್ರಿ ತಂದೆ ಸಾವು.. ಬೆಳಗ್ಗೆ SSLC ಪರೀಕ್ಷೆ; ದುಃಖದಲ್ಲೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ!
Advertisment
  • ಮಗಳೇ ನಾನೇ ನಿನ್ನನ್ನು ಬೆಳಗ್ಗೆ ಪರೀಕ್ಷೆಗೆ ಬಿಡುವುದಾಗಿ ಹೇಳಿದ್ದರು
  • ನಿನ್ನೆ ರಾತ್ರಿಯೇ ಏಕಾಏಕಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ ತಂದೆ ನೂರಹಸನ
  • ತಂದೆಯ ಆಸೆ ಈಡೇರಿಸಲು ದುಃಖದಲ್ಲೂ ನಿರ್ಧಾರ ಮಾಡಿದ ವಿದ್ಯಾರ್ಥಿನಿ

ಧಾರವಾಡ: ತಂದೆ ಸಾವಿನ ದುಃಖದಲ್ಲೂ ಮಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಮನಕಲಕುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.

ಶಬಾನಾ ಪಟಾಸು ನವಲಗುಂದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಶಬಾನಾ ಚೆನ್ನಾಗಿ ಓದಬೇಕು ಅನ್ನೋದು ಶಬಾನಾ ತಂದೆ ನೂರಹಸನ ಅವರ ಆಸೆಯಾಗಿತ್ತು. ಆದರೆ ಕಳೆದ ಗುರುವಾರ ರಾತ್ರಿ ಏಕಾಏಕಿ ಹೊಟ್ಟೆ ನೋವು ಬಂದು ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಮಗಳಿಗೆ SSLC ಪರೀಕ್ಷೆ ಇತ್ತು. ಗುರುವಾರ ರಾತ್ರಿ ತಂದೆ ನೂರಹಸನ ಮಗಳೇ ನಾನೇ ನಿನ್ನನ್ನು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬಿಡುವುದಾಗಿ ಹೇಳಿದ್ದರು. ಆದರೆ ಗುರುವಾರ ರಾತ್ರಿಯೇ ವಿದ್ಯಾರ್ಥಿನಿ ತಂದೆ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಭಯಾನಕ ದೃಶ್ಯ.. ಬಿಎ ವಿದ್ಯಾರ್ಥಿನಿ ದುರಂತ ಅಂತ್ಯ; ಆಗಿದ್ದೇನು? 

ತಂದೆಯ ಸಾವಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಶಬಾನಾ ಪಟಾಸು SSLC ಪರೀಕ್ಷೆಗೆ ಗೈರಾಗುತ್ತಿದ್ದರು. ಇದನ್ನು ತಿಳಿದ ಶಿಕ್ಷಕರು ವಿದ್ಯಾರ್ಥಿನಿಯ ಮನ ಒಲಿಸಿದ್ದಾರೆ. ಶಿಕ್ಷಕರ ಮನವಿ, ತಂದೆಯ ಆಸೆ ಈಡೇರಿಸಲು ನಿರ್ಧರಿಸಿದ ಶಬಾನಾ ಪರೀಕ್ಷೆಗೆ ಹಾಜರಾಗಿದ್ದಾರೆ.

ಈ ವಿಷಯ ತಿಳಿದ ಶಿಕ್ಷಣ ಇಲಾಖೆ ವಿದ್ಯಾರ್ಥಿನಿಗೆ ವಾಹನ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟಿದೆ. ತಂದೆಯ ಪ್ರೇರಣೆಯಿಂದಲೇ ಶಾಲೆಗೆ ಬರುತ್ತಿರುವುದಾಗಿ ಹೇಳಿರುವ ವಿದ್ಯಾರ್ಥಿನಿ ದುಃಖದಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment