/newsfirstlive-kannada/media/post_attachments/wp-content/uploads/2025/07/RMG_2nd_CLASS.jpg)
ರಾಮನಗರ: ಖಾಸಗಿ ಶಾಲಾ ಬಸ್​ನಿಂದ 2ನೇ ತರಗತಿ ವಿದ್ಯಾರ್ಥಿ ಕೆಳಗ್ಗೆ ಬಿದ್ದು ಸ್ಥಳದಲ್ಲೇ ಜೀವ ಬಿಟ್ಟಿರುವ ಘಟನೆ ಮಾಗಡಿ ತಾಲೂಕಿನ ಹುಚ್ಚಹನುಮೇಗೌಡನ ಪಾಳ್ಯ ಗ್ರಾಮದ ಬಳಿ ನಡೆದಿದೆ.
ಹೊಸಪಾಳ್ಯ ಜನತಾ ಕಾಲೋನಿ ನಿವಾಸಿ ಲೋಕೇಶ್ ಪುತ್ರ ರಜತ್ (7) ಮೃತ ಬಾಲಕ. ಮಾಗಡಿ ಪಟ್ಟಣದ ಎಸ್‍ಬಿಎಸ್ ಶಾಲೆಯಲ್ಲಿ ರಜತ್ 2ನೇ ತರಗತಿ ಓದುತ್ತಿದ್ದನು. ಎಂದಿನಂತೆ ಶಾಲೆಗೆ ಹೋಗಿದ್ದನು. ಬಸ್ ತೆರಳುವ ಸಮಯದಲ್ಲಿ ವಾಹನದ ಬಾಗಿಲಿನಿಂದ ಬಾಲಕ ಬಿದ್ದಿದ್ದಾನೆ. ಇದನ್ನ ನೋಡಿದ ಬಾಲಕನ ಸಹೋದರಿ ಅಣ್ಣ ಕೆಳಗೆ ಬಿದ್ದ ಬಸ್​ ನಿಲ್ಲಿಸಿ ಎಂದು ಸಹೋದರಿ ದುರ್ಷಿತಾ ಕೂಗಿದ್ದಾಳೆ.
/newsfirstlive-kannada/media/post_attachments/wp-content/uploads/2025/07/RMG_2nd_CLASS_1.jpg)
ಬಸ್​ ನಿಲ್ಲಿಸಿ ನೋಡಿದಾಗ ಸ್ಥಳದಲ್ಲೇ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ವಾಹನದ ಬಾಗಿಲು ಮುಚ್ಚದೆ ಇರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಚಾಲಕ ವಿನೋದ್ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗ ಇನ್ನಿಲ್ಲ ಎನ್ನುವ ಸುದ್ದಿ ಸಹಿಸಲಾರದೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us