ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಬೇಸರ; 3ನೇ ಮಹಡಿಯಿಂದ ಜಿಗಿದು ಪ್ರಾಣವನ್ನೇ ಬಿಟ್ಟ ಇಂಜಿನಿಯರಿಂಗ್​​ ವಿದ್ಯಾರ್ಥಿ

author-image
Ganesh Nachikethu
Updated On
ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಬೇಸರ; 3ನೇ ಮಹಡಿಯಿಂದ ಜಿಗಿದು ಪ್ರಾಣವನ್ನೇ ಬಿಟ್ಟ ಇಂಜಿನಿಯರಿಂಗ್​​ ವಿದ್ಯಾರ್ಥಿ
Advertisment
  • ಜೀವ ಕಳೆದುಕೊಂಡ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ..!
  • 3ನೇ ಮಹಡಿಯಿಂದ ಜಿಗಿದು ಆಕಾಶ್ ರೆಡ್ಡಿ ಎಂಬ ವಿದ್ಯಾರ್ಥಿ ಸಾವು
  • ಕಡಿಮೆ ಅಂಕ ಬಂದ ಹಿನ್ನೆಲೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಶಂಕೆ

ಬೆಂಗಳೂರು: ಈಗಿನ ಜನರೇಷನ್ ಮಕ್ಕಳು ಅದೆಷ್ಟು ವೀಕ್ ಎಂದರೆ ಸಣ್ಣ ವಿಷ್ಯಕ್ಕೂ ಸಾವಿನ ಹಾದಿ ಹಿಡಿಯುತ್ತಾರೆ. ಇದಕ್ಕೆ ಸೋಶಿಯಲ್ ಮೀಡಿಯಾ ಕಾರಣವೋ, ಮನೆಯವರ ಒತ್ತಡ ಕಾರಣವೋ ಎಂಬುದು ಹೇಳಲು ಆಗುವುದಿಲ್ಲ. ಈಗ ಅದೇ ರೀತಿ ವಿದ್ಯಾರ್ಥಿಯೋರ್ವ ಸಾವಿನ ಹಾದಿ ಹಿಡಿದಿದ್ದಾನೆ.

ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್. ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಇದು ಒಂದು. ಇದೇ ಕಾಲೇಜಿನಲ್ಲಿ ದುರಂತವೊಂದು ನಡೆದುಹೋಗಿದೆ. ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ.

ಹೆಸರು ಆಕಾಶ್ ರೆಡ್ಡಿ. ಇದೇ ಕಾಲೇಜಿನಲ್ಲಿ ಇಂಜನಿಯರಿಂಗ್ 7ನೇ ಸೆಮಿಸ್ಟರ್‌ ಓದುತ್ತಿದ್ದ. ಕಾಲೇಜಿನ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಅದು ಓದಿನ ವಿಚಾರಕ್ಕೆ. ಆಕಾಶ್ ರೆಡ್ಡಿಗೆ ಎಕ್ಸಾಂನಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹನುಮಂತ ನಗರ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು.

ಮಗನ ಬಗ್ಗೆ ಅದೆಷ್ಟು ಈ ತಾಯಿ ಕನಸು ಕಂಡಿದ್ರೋ ಗೊತ್ತಿಲ್ಲ. ಮುಪ್ಪಿನ ಕಾಲದಲ್ಲಿ ಆಧಾರವಾಗ್ತಾನೆ ಅಂದುಕೊಂಡಿದ್ದ ಮಗ ಮುಂದೆದೂ ಬಾರದ ಲೋಕಕ್ಕೆ ಹೋಗಿದ್ದಾನೆ. ಮಗನನ್ನು ಕಳ್ಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ವಿಜಯ್‌ ಹಜಾರೆ ಟ್ರೋಫಿ ಗೆದ್ದು ಬೀಗಿದ ಮಯಾಂಕ್​ ಪಡೆ; 5ನೇ ಬಾರಿ ಕರ್ನಾಟಕ ಚಾಂಪಿಯನ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment