/newsfirstlive-kannada/media/post_attachments/wp-content/uploads/2024/12/Bangalore-Priyanka-Case.jpg)
ಬೆಂಗಳೂರು: ಅಂದು ಶುಕ್ರವಾರ. ಆಗಷ್ಟೇ ಸೂರ್ಯೋದಯವಾಗಿತ್ತು. ನಿತ್ಯ 5 ಗಂಟೆಗೆಲ್ಲಾ ಏಳ್ತಿದ್ದ ಮಗಳು 7 ಗಂಟೆಯಾದ್ರೂ ಸದ್ದು ಮಾಡಿರಲಿಲ್ಲ. ತಂದೆ ಮನೆಯಲ್ಲಿರಲಿಲ್ಲ. ತಾಯಿ ಮಗಳನ್ನ ಎಬ್ಬಿಸೋಕೆ ರೂಮ್ಗೆ ಹೋದ್ರೆ ಅಲ್ಲೂ ಇರಲಿಲ್ಲ. ಹೊರಗೆ ಬಂದು ನೋಡಿದಾಗ ಆಕೆ ಟೆರೆಸ್ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿದ್ದಳು. ಅವತ್ತು ಸಾವಿಗೆ ಶರಣಾಗಿದ್ದ ಆಕೆಯ ಆತ್ಮಹತ್ಯೆ ರಹಸ್ಯ ಕುಟುಂಬಸ್ಥರನ್ನೇ ಬೆಚ್ಚಿಬೀಳಿಸಿದೆ.
ಈಕೆ ಹೆಸರು ಪ್ರಿಯಾಂಕಾ. ರಾಜಾಜಿನಗರದ ನಿವಾಸಿ. ತಂದೆ ತಾಯಿಗೆ ಮುದ್ದಿನ ಮಗಳು. ವಯಸ್ಸು ಕೇವಲ 19. ಪಿಯುಸಿ ಮುಗಿಸಿ ಬಿಕಾಂ ಸೇರಿದ್ದ ಈಕೆ. ದುರಾಸೆಗೆ ಬಲಿಯಾಗಿ ಜೀವವನ್ನೇ ಬಿಟ್ಟಿದ್ದಾಳೆ ಅಂದ್ರೆ ತಪ್ಪಾಗಲ್ಲ.
ಇವನ ಹೆಸರು ದಿಗಂತ್. ಪ್ರಿಯಾಂಕಾ ಸಹಪಾಠಿ. ಒಂದೇ ಕ್ಲಾಸ್ನಲ್ಲಿ ಓದುತ್ತಿದ್ದ ಇವರಿಬ್ಬರು ಒಳ್ಳೇ ಸ್ನೇಹಿತರು. ನೆನಪಿರಲಿ ಇವರ ಮಧ್ಯೆ ಯಾವುದೇ ಪ್ರೀತಿ ಪ್ರೇಮ ಇಲ್ಲ. ಆದ್ರೆ ಪ್ರಿಯಾಂಕಾ ಜೊತೆ ಚೆನ್ನಾಗಿಯೇ ಇದ್ದ ದಿಗಂತ್ ಮಾಡಿದ ಆ ಕೆಲಸದಿಂದ ಈಗ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ದುರಾಸೆ ತಂದ ಕುತ್ತು..!
ದಿಗಂತ್ ತನಗೆ ಹಣ ಕೊಟ್ರೆ ಡಬ್ಬಲ್ ಮಾಡಿ ಕೊಡ್ತೀನಿ ಹಾಗೂ BMW ಕಾರು ಕೊಡಿಸ್ತೀನಿ ಎಂದು ಪ್ರಿಯಾಂಕಾಗೆ ಆಸೆ ತೋರಿಸಿದ್ದ. ಹೀಗಾಗಿ ಮನೆಯವರಿಗೆ ಗೊತ್ತಾಗದಂತೆ ಪ್ರಿಯಾಂಕಾ ದಿಗಂತ್ಗೆ ಚಿನ್ನ ಕೊಟ್ಟಿದ್ದಳು. ಬರೋಬ್ಬರಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದ ದಿಗಂತ್ ಅಡಮಾನಕ್ಕಿಟ್ಟು ಹಣ ಪಡೆದಿದ್ದ. ಆದ್ರೆ ಎಷ್ಟು ದಿನ ಕಳೆದ್ರೂ ಹಣ ಮತ್ತು ಚಿನ್ನಾಭರಣವನ್ನ ವಾಪಸ್ ಕೊಟ್ಟಿರಲಿಲ್ಲ. ಈಕೆಗೆ ಮನೆಯಲ್ಲಿ ಚಿನ್ನದ ಬಗ್ಗೆ ಕಥೆಯೇನು ಅನ್ನೋ ಭಯ ಶುರುವಾಗಿತ್ತು. ಇದೇ ಕಾರಣಕ್ಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಪ್ರಿಯಾಂಕ ಶರಣಾಗಿದ್ದಾಳೆ. ನನ್ನ ಬಗ್ಗೆ ಕೆಟ್ಟದಾಗಿ ಹೇಳಿ ಮಾನಸಿಕ ಕಿರುಕುಳ ಕೊಟ್ಟಿದ್ದ, ಆತ್ಮಹತ್ಯೆಗೆ ದಿಗಂತ್ ಕಾರಣ ಎಂದು ಪ್ರಿಯಾಂಕಾ ಬರೆದಿದ್ದಾಳೆ.
ಡೆತ್ ನೋಟ್ ಆಧರಿಸಿ ಆರೋಪಿ ದಿಗಂತ್ನನ್ನ ಬಂಧಿಸಿರೋ ಪೊಲೀಸರು ಜೈಲಿಗಟ್ಟಿದ್ದಾರೆ. ಅದೇನೇ ಇರ್ಲಿ ಆಸೆ ಇರಬೇಕು.. ಅದು ದುರಾಸೆಗೆ ತಿರುಗಿದ್ರೆ ಜೀವನ ಹೀಗೆ ಅರ್ಧದಲ್ಲೇ ಮುಗಿದು ಹೋಗುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
ಇದನ್ನೂ ಓದಿ: IPL 2025: KL ರಾಹುಲ್ ಬೆನ್ನಲ್ಲೇ ಆರ್ಸಿಬಿಯಿಂದ ಮತ್ತೊಬ್ಬ ಕನ್ನಡಿಗನಿಗೆ ಭಾರೀ ಅನ್ಯಾಯ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ