/newsfirstlive-kannada/media/post_attachments/wp-content/uploads/2025/05/sslc3.jpg)
ಮೊನ್ನೆಯಷ್ಟೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ವಿದ್ಯಾರ್ಥಿಗಳು ತಮ್ಮ ಫಲಿತಾಂಶ ನೋಡಲು ಕಾತರದಿಂದ ಕಾಯುತ್ತಿದ್ದರು. ಆದ್ರೆ, ಇದೇ ವೇಳೆ ಪರೀಕ್ಷಾ ಮಂಡಳಿ ಮಾಡಿದ ಯಡವಟ್ಟಿಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ವೀಕ್ಷಕರಿಗೆ ಬಿಗ್ ಶಾಕ್.. ಮುಕ್ತಾಯದ ಹಂತದಲ್ಲಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್!
ವಿದ್ಯಾರ್ಥಿನಿ ಅಷ್ಟೇ ಅಲ್ಲದೇ ಪೋಷಕರು ಕೂಡ ಅಚ್ಚರಿಪಟ್ಟಿದ್ದಾರೆ. ವಿದ್ಯಾರ್ಥಿನಿ ತನ್ಮಯಿ ತನ್ನ ಫಲಿತಾಂಶವನ್ನು ನೋಡಲು karresults.nic.in ಅಧಿಕೃತ ವೆಬ್ಸೈಟ್ಗೆ ಹೋಗಿ ಫಲಿತಾಂಶ ಚೆಕ್ ಮಾಡಿದ್ದಾರೆ. ಆಗ ಇಂಗ್ಲಿಷ್ - 108, ಸಂಸ್ಕೃತ- 97, ಗಣಿತ - 81, ವಿಜ್ಞಾನ- 94, ಸಾಮಾಜಿಕ ವಿಜ್ಞಾನ - 99 ಅಂಕ ಪಡೆದಿದ್ದಾಳೆ.
ಎಲ್ಲಾ ಸಬ್ಜೆಕ್ಟ್ ಟಾಪ್ ಆಗಿದ್ದ ವಿದ್ಯಾರ್ಥಿನಿಗೆ ಕನ್ನಡದಲ್ಲಿ ಬರೀ 25 ಅಂಕ ಬಂದಿದೆ. ಇದನ್ನೇ ನೋಡಿದ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ಗಾಬರಿಗೊಂಡಿದ್ದಾರೆ. ಇದ್ರಿಂದ ಅನುಮಾನ ಬಂದ ಪೋಷಕರು ಪೇಪರ್ ಕಾಪಿ ಮೊರೆ ಹೋಗಿದ್ದು, ಈ ವೇಳೆ ವಿದ್ಯಾರ್ಥಿ ಪಡೆದಿದ್ದು 75 ಅಂಕ ಎಂದು ತಿಳಿದಿದೆ. ಆದ್ರೆ ವೆಬ್ ಸೈಟ್ನಲ್ಲಿ ತೋರಿಸಿದ್ದು 25 ಅಂಕ ಮಾತ್ರ. ಸದ್ಯ ಎಸ್ಎಸ್ಎಲ್ಸಿ ಬೋರ್ಡ್ಗೆ ಪೋಷಕರು ಮನವಿ ಮಾಡಿದ್ದು, ಸರಿ ಪಡಿಸುವುದಾಗಿ ಭರವಸೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ