/newsfirstlive-kannada/media/post_attachments/wp-content/uploads/2024/12/Love-Story-12.jpg)
ಮೈಸೂರು: ಈ ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಈ ಸ್ಪೆಷಲ್ ಸ್ಟೋರಿಯಲ್ಲಿ ಪ್ರೀತಿ ಇದೆ. ಆ್ಯಕ್ಷನ್ ಇದೆ. ಟ್ರ್ಯಾಜಿಡಿ ಎಂಡಿಂಗ್ ಇದೆ. ಕ್ಲಾಸ್ ರೂಮ್ನಲ್ಲೇ ಸ್ಟೂಡೆಂಟ್ ಹಾಗೂ ಟೀಚರ್ ಮಧ್ಯೆ ಪ್ರೀತಿಯ ಪಾಠ ಶುರುವಾಗಿತ್ತು. ಕಾಲೇಜಿಗೆ ಹೋಗಿ ಬರ್ತೀನಿ ಎಂದು ಹೋದವಳು ಹೋಗಿದ್ದು ಮಾತ್ರ ಟೀಚರ್ ಜೊತೆಗೆ.
ಟೀಚರ್ ಹಾಗೂ ಸ್ಟೂಡೆಂಟ್ ನಡುವಿನ ಪ್ರೇಮ ಪಾಠ
ಸ್ಟೂಡೆಂಟ್ ಹೆಸರು ಪೂರ್ಣಿಮಾ. ಟೀಚರ್ ಹೆಸರು ಯಶೋದ್ ಕುಮಾರ್. ಈ ಇಬ್ಬರ ಮಧ್ಯೆಯೇ ಲವ್ ಆಗಿದ್ದು. ಮೈಸೂರಿನ ಹುಣಸೂರಿನಲ್ಲಿರೋ ಖಾಸಗಿ ಕಾಲೇಜಲ್ಲಿ ಪಾಠ ಹೇಳಿ ಕೊಡಬೇಕಿದ್ದ ಮೇಷ್ಟ್ರು ವಿದ್ಯಾರ್ಥಿನಿಗೆ ಪ್ರೀತಿ ಪಾಠ ಹೇಳಿ ಕೊಟ್ಟಿದ್ದಾನೆ. ಸ್ಟೂಡೆಂಟ್ ಜೊತೆಗೆ ಊರು ಬಿಟ್ಟು ಹೋಗಿದ್ದಾನೆ.
ಕಾಲೇಜಿಗೆ ಹೋದವಳು ಮದುವೆ ಆಗಿದ್ದೀನಿ ಅಂತ ಮೆಸೇಜ್
ಇನ್ನು, ಹುಡುಗಿಯ ಲವ್ ಮ್ಯಾಟರ್ ಪೋಷಕರಿಗೆ ಗೊತ್ತಾಗುತ್ತಿದ್ದಂತೆಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 26ರಂದು ಸರ್ಟಿಫಿಕೇಟ್ ತರ್ತೀನಿ ಎಂದು ಕಾಲೇಜಿಗೆ ಹೋದವಳು ಮದುವೆ ಆಗಿದೀನಿ ಎಂದು ಮೆಸೇಜ್ ಮಾಡಿದ್ದಾಳೆ.
ಪೂರ್ಣಿಮಾ ತನ್ನ ಅಕ್ಕನಿಗೆ ಕಳಿಸಿದ ಮೆಸೇಜ್ನಲ್ಲೇನಿದೆ?
ನಾನು ಪೂರ್ಣಿಮಾ. ನಾನು ಇಷ್ಟ ಪಟ್ಟವರ ಜೊತೆಗೆ ಮದುವೆ ಆಗಿದ್ದೇನೆ. ಮದುವೆ ಆಗಿರೋ ಹುಡುಗ ಕೆಟ್ಟವರಲ್ಲ. ಅವರು ಒಳ್ಳೆಯ ವ್ಯಕ್ತಿ. ನಮ್ಮ ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ಮದುವೆ ಆಗಬೇಕು ಎಂಬ ಆಸೆ ನಮ್ಮಿಬ್ಬರದ್ದು ಆಗಿತ್ತು. ಆದ್ರೆ ಕಳೆದ ವರ್ಷ ನಮ್ಮಿಬ್ಬರ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳಿದ್ದಕ್ಕೆ ಗಲಾಟೆ ಆಗಿದ್ದನ್ನ ಪ್ರತ್ಯಕ್ಷವಾಗಿ ನೋಡಿದ್ದೀಯಾ. ಹಾಗಾಗಿ ಮತ್ತೊಮ್ಮೆ ಮನೆಯಲ್ಲಿ ನಮ್ಮಿಬ್ಬರ ಪ್ರೀತಿಯ ವಿಷಯ ಹೇಳಲು ನನಗೆ ಧೈರ್ಯ ಇಲ್ಲ. ಹೇಳಿದ್ದರು ಕೂಡ ನಮ್ಮಿಬ್ಬರ ಕಲ್ಮಶವಿಲ್ಲದ ಪ್ರೀತಿಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆದ್ದುದರಿಂದ ನಾನು ನನ್ನ ಸ್ವ ಇಷ್ಟದಂತೆ ಮದುವೆ ಆಗಿದ್ದೇನೆ. ತಪ್ಪಿದ್ದರೆ ಕ್ಷಮಿಸಿ. ಅಪ್ಪ ಅಮ್ಮ ಪಾಪು ಎಲ್ಲರನ್ನು ಚೆನ್ನಾಗಿ ನೀನು ನೋಡಿಕೋ ಅಕ್ಕಾ ಎಂದಿದ್ದಾರೆ ಪೂರ್ಣಿಮಾ.
ಅತ್ತ, ಮಗಳು ಓಡಿ ಹೋಗಿ ಮದುವೆ ಆಗಿರುವ ವಿಷಯ ಕೇಳಿ ತಂದೆ ಹಾಸಿಗೆ ಹಿಡಿದ್ದಾರೆ.. ಅಲ್ಲದೆ, ಇಡಿ ಕುಟುಂಬ ಪೂರ್ಣಿಮಾ ನಿರ್ಧಾರದಿಂದ ಕಣ್ಣೀರು ಹಾಕುತ್ತಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನೂ ಹುಡುಕಾಟ ಆರಂಭಿಸಿದ್ದಾರೆ. ವಯಸ್ಸಾದ ತಂದೆ ತಾಯಿಗೆ ಆಸರೆಯಾಗಬೇಕಿದ್ದ ಮಗಳು, ಲೆಕ್ಚರರ್ ಹೇಳಿ ಕೊಟ್ಟ ಪ್ರೀತಿ ಪಾಠಕ್ಕೆ ಮರುಳಾಗಿ ಓಡಿ ಹೋಗಿ ಮದುವೆಯಾಗಿದ್ದಾಳೆ. ಇತ್ತ ಮಗಳನ್ನು ನಂಬಿದ್ದ ಹೆತ್ತವರು ನಿತ್ಯ ಕಣ್ಣೀರು ಹಾಕುವಂತಾಗಿದೆ.
ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಗೈಡ್‌ಲೈನ್ಸ್; ನ್ಯೂಇಯರ್ ಗುಂಗಲ್ಲಿದ್ದವರಿಗೆ ಸರ್ಕಾರದಿಂದ ಬಿಗ್ ಶಾಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ