newsfirstkannada.com

ವಿದ್ಯಾರ್ಥಿಗಳ ಬ್ಯಾಂಕ್​ ಅಕೌಂಟ್​​​ ಬಳಸಿ ಡ್ರಗ್ಸ್​​ ಮಾರುತ್ತಿದ್ದ ಕಿಡಿಗೇಡಿ ಅರೆಸ್ಟ್​; ಈತ ಸಿಕ್ಕಿಬಿದ್ದಿದ್ದೇ ರೋಚಕ!

Share :

Published July 10, 2023 at 10:16pm

    ಪ್ರತ್ಯೇಕ ಪ್ರಕರಣದಲ್ಲಿ ಒಬ್ಬ ಪುರುಷ, ಮಹಿಳೆ ಪೊಲೀಸ್​​ ಬಲೆಗೆ

    ​ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟ್ ಡಿಟೇಲ್ಸ್​ ಪಡೆಯುತ್ತಿದ್ದ ಪ್ರಿನ್ಸ್​

    ವಾಟ್ಸಪ್ ಮೂಲಕ ಲೊಕೇಷನ್ ಶೇರ್ ಮಾಡಿ ಬ್ಯುಸಿನೆಸ್..!

ಬೆಂಗಳೂರು: ಮಕ್ಕಳನ್ನ ಕಾಲೇಜಿಗೆ ಕಳುಹಿಸೋ ಪೋಷಕರು ಎಚ್ಚರದಿಂದ ಗಮನಿಸಬೇಕಾದ ಸುದ್ದಿ ಇದು. ನಿಮ್ಮ ಮಕ್ಕಳ ಅಕೌಂಟ್‌ ಮೇಲೂ ನೀವು ಹದ್ದಿನ ಇಡಲೇಬೇಕು ಅನ್ನೋ ಸಿಚುವೇಶನ್‌ ನಿರ್ಮಾಣ ಮಾಡುತ್ತಿದೆ ಈ ಸುದ್ದಿ. ಈಶಾನ್ಯ ವಿಭಾಗದ ಪೊಲೀಸರ ಕಾರ್ಯಾಚರಣೆಯಲ್ಲಿ ಇಂತಹದ್ದೊಂದು ಅಚ್ಚರಿಯ ಕ್ರೈಂ ಹೊರಬಿದ್ದಿದೆ. ಪ್ರತ್ಯೇಕ ಪ್ರಕರಣದಲ್ಲಿ ಒಬ್ಬ ಪುರುಷ ಹಾಗೂ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯಿಂದ 2 ಕೆಜಿ ಗಾಂಜಾ, 2.75 ಲಕ್ಷ ಮೌಲ್ಯದ 105 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ವಿದೇಶಿ ಪ್ರಜೆಯಿಂದ 75 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಪ್ರಿನ್ಸ್​ ವಿದ್ಯಾರ್ಥಿಗಳ ಬ್ಯಾಂಕ್​ ಅಕೌಂಟ್ ಬಳಸಿ ಡ್ರಗ್ ಬ್ಯುಸಿನೆಸ್ ಮಾಡುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.​ ಅಷ್ಟೇ ಅಲ್ಲ ಬಳಿಕ ಆ ವಿದ್ಯಾರ್ಥಿಗಳಿಗೆ ಖರ್ಚಿಗೆಂದು ತಿಂಗಳಿಗೆ ಎರಡು ಅಥವಾ ಮೂರು ಸಾವಿರ ಹಣ ನೀಡುತ್ತಿದ್ದನಂತೆ. ವಾಟ್ಸಪ್ ಮೂಲಕ ಲೊಕೇಷನ್ ಶೇರ್ ಮಾಡಿ ನಂತರ ನಿಗದಿತ ಸ್ಥಳದಲ್ಲಿ ಡ್ರಗ್ಸ್ ಅಡಗಿಸಿಡುತ್ತಿದ್ದ. ನಂತರ ಒಂದು ಪೇಮೆಂಟ್ ಲಿಂಕ್ ಕಳಿಸಿ ಬಳಿಕ ಡ್ರಗ್ ಫೊಟೋ ಹಾಕಿ ಸ್ಥಳದ ವಿವರ ನೀಡಿ ಡ್ರಗ್ ಪಡೆದುಕೊಳ್ಳುತ್ತಿದ್ದ. ನಂತರ ವಿದ್ಯಾರ್ಥಿಗಳ ಅಕೌಂಟ್ ನಂಬರ್ ನೀಡಿ ಅದಕ್ಕೆ ಗೂಗಲ್ ಪೇ ಮಾಡಿಸುತ್ತಿದ್ದ. ಹೀಗೆ ವಿದ್ಯಾರ್ಥಿಗಳ ಹೆಸರಿನಲ್ಲಿರುವ ಡೆಬಿಟ್ ಕಾರ್ಡ್ ಬಳಸಿ ಆರೋಪಿ ಪ್ರಿನ್ಸ್ ಹಣ ಡ್ರಾ ಮಾಡುತ್ತಿದ್ದ ಎನ್ನಲಾಗಿದೆ.

ಸದ್ಯ, ಇಬ್ಬರ ವಿರುದ್ಧ NDPS ಆಕ್ಟ್ ಹಾಗೂ ಫಾರಿನರ್ಸ್ ಆಕ್ಟ್ ನಡಿ ಕೇಸ್​ ದಾಖಲಾಗಿದೆ. ಸಂಪಿಗೆಹಳ್ಳಿ ಹಾಗೂ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಅದೇನೇ ಇರಲಿ ವಿದ್ಯಾರ್ಥಿಗಳನ್ನ ತಮ್ಮ ಕ್ರೈಂಗೆ ದಾಳವಾಗಿ ಬಳಸಿಕೊಂಡಿದ್ದು ನಿಜಕ್ಕೂ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳ ಬ್ಯಾಂಕ್​ ಅಕೌಂಟ್​​​ ಬಳಸಿ ಡ್ರಗ್ಸ್​​ ಮಾರುತ್ತಿದ್ದ ಕಿಡಿಗೇಡಿ ಅರೆಸ್ಟ್​; ಈತ ಸಿಕ್ಕಿಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2023/07/police-1.jpg

Load More