Advertisment

ಬಿಸಿಯೂಟದಲ್ಲಿ ಸತ್ತ ಹಲ್ಲಿ ಪತ್ತೆ.. 100ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

author-image
AS Harshith
Updated On
ಬಿಸಿಯೂಟದಲ್ಲಿ ಸತ್ತ ಹಲ್ಲಿ ಪತ್ತೆ.. 100ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Advertisment
  • ಮಧ್ಯಾಹ್ನದ ಊಟದ ವೇಳೆ ಬಟ್ಟಲಲ್ಲಿ ಸಿಕ್ತು ಸತ್ತ ಹಲ್ಲಿ
  • ಊಟ ವಿತರಣೆ ಮಾಡೋದನ್ನ ಸ್ಥಗಿತಗೊಳಿಸಿದ ಶಿಕ್ಷಕರು
  • ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡ ಹೊಟ್ಟೆ ನೋವು, ವಾಂತಿ

ಮಧ್ಯಾಹ್ನ ಊಟದ ವೇಳೆ ಬಟ್ಟಲಲ್ಲಿ ಸತ್ತ ಹಲ್ಲಿಯೊಂದು ಸಿಕ್ಕ ಘಟನೆ ಒಡಿಶಾದ ಬಾಲಸೋರ್​ನಲ್ಲಿ ನಡೆದಿದೆ. ಅಲ್ಲಿನ ಸಿರಾಪುರ ಗ್ರಾಮದ ಉದಯನಾರಾಯಣ ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisment

ಆಹಾರದಲ್ಲಿ ಸತ್ತ ಹಲ್ಲಿ ಕಂಡುಬಂದ ಹಿನ್ನೆಲೆ ಶಾಲಾ ಶಿಕ್ಷಕರು ಊಟ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ಊಟ ಮಾಡದಂತೆ ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳನ್ನು ಬಾವಿಗೆ ಎಸೆದು ತಾಯಿ ಆತ್ಮಹ*.. ಅಮ್ಮನ ಜೊತೆಗೆ ಪ್ರಾಣಬಿಟ್ಟ ಕಂದಮ್ಮಗಳು

ಅತ್ತ ಊಟ ಸೇವಿಸಿದ ಹಲವು ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿ ಮತ್ತು ಎದೆ ನೋವಿನಿಂದ ಬಳಲಿದ್ದಾರೆ. ತಕ್ಷಣ ಅವರನ್ನು ಆ್ಯಂಬುಲೆನ್ಸ್​​ ಮತ್ತು ಇತರೆ ವಾಹನದ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisment

ಇದನ್ನೂ ಓದಿ: ಬೆಕ್ಕು ಸಾಕುವವರೇ ಹುಷಾರ್​! ಶಿವಮೊಗ್ಗದಲ್ಲಿ ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು

ಇನ್ನು ಘಟನೆಯ ಬಗ್ಗೆ ತಿಳಿದ ಸ್ಥಳೀಯ ಶಾಸಕ ಮಾಧವ್​ ಧಾಡಾ, ಶಾಲಾ ಆಡಳಿತ ಮಂಡಳಿ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಗಮನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment