/newsfirstlive-kannada/media/post_attachments/wp-content/uploads/2025/03/KLB_SSLC.jpg)
ಕಲಬುರಗಿ: ತಂದೆ ಸಾವಿನ ನೋವಿನಲ್ಲೂ ಇಬ್ಬರು ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ. ಕಲಬುರಗಿಯ ನಗರದ ಫಿಲ್ಟರ್ ಬೆಡ್ ನಿವಾಸಿ ಪ್ರಕಾಶ್ ನಾಯಕ್ ಹೃದಯಾಘಾತದಿಂದ ನಿಧನರಾಗಿದ್ದರು.
ತಂದೆ ನಿಧನರಾದ ದಿನ ಮಕ್ಕಳಿಗೆ SSLC ಪರೀಕ್ಷೆ ಇತ್ತು. ಮಕ್ಕಳಾದ ವಿದ್ಯಾಶ್ರೀ ಮತ್ತು ವಾಣಿಶ್ರೀ ನೋವಿನಲ್ಲೇ ಪರೀಕ್ಷೆಯನ್ನು ಬರೆದಿದ್ದಾರೆ. ಪರೀಕ್ಷೆ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಮಕ್ಕಳು ನಗರ ಮೆಹ್ತಾ ಸ್ಕೂಲ್ನಲ್ಲಿ ಓದುತ್ತಿದ್ದಾರೆ.
ಇದೇ ರೀತಿಯ ದುಃಖದ ಪ್ರಕರಣ ಧಾರವಾಡದಲ್ಲೂ ಮಾರ್ಚ್ 22 ರಂದು ನಡೆದಿತ್ತು. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಶಬಾನಾ ಪಟಾಸು ಎಂಬ ವಿದ್ಯಾರ್ಥಿನಿ ಅಪ್ಪನ ಕಳೆದುಕೊಂಡ ನೋವಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ಶುಕ್ರವಾರ ಬೆಳಗ್ಗೆ ಮಗಳಿಗೆ SSLC ಪರೀಕ್ಷೆ ಇತ್ತು. ಗುರುವಾರ ರಾತ್ರಿ ತಂದೆ ನೂರ್ ಹಸನ್ ಮಗಳೇ ನಾನೇ ನಿನ್ನನ್ನು ಬೆಳಗ್ಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಬಿಡುವುದಾಗಿ ಹೇಳಿದ್ದರು. ಆದರೆ ಗುರುವಾರ ರಾತ್ರಿಯೇ ವಿದ್ಯಾರ್ಥಿನಿ ತಂದೆ ಪ್ರಾಣ ಬಿಟ್ಟಿದ್ದರು.
ರಾಜ್ಯದಲ್ಲಿ ಮಾರ್ಚ್ 21 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶುರುವಾಗಿದೆ. ಏಪ್ರಿಲ್ 4ವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಪರೀಕ್ಷೆ ಬರೆಲು 8,96,447 ವಿದ್ಯಾರ್ಥಿಗಳು ನೊಂದೋಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 4,61,563 ಗಂಡುಮಕ್ಕಳು ಹಾಗೂ 4,34,884 ವಿದ್ಯಾರ್ಥಿನಿಯರಾಗಿದ್ದಾರೆ.
ಇದನ್ನೂ ಓದಿ: ರಾತ್ರಿ ತಂದೆ ಸಾವು.. ಬೆಳಗ್ಗೆ SSLC ಪರೀಕ್ಷೆ; ದುಃಖದಲ್ಲೂ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ