Advertisment

ಕೋಳಿ ಮಾಂಸ ತಿಂದ್ರೆ ಅಕಾಲಿಕ ಮರಣ, ಭಯಾನಕ ಕ್ಯಾನ್ಸರ್..! ವಾರದಲ್ಲಿ ಎಷ್ಟು ತಿನ್ನಬಹುದು..?

author-image
Ganesh
Updated On
Sunday Special: ಮನೆಯಲ್ಲೇ ಮಾಡಿ ಚಿಕನ್​​ ಮುಮ್ತಾಜ್.. ​ಸಿಂಪಲ್​ ರೆಸಿಪಿ 10 ನಿಮಿಷದಲ್ಲೇ ರೆಡಿ
Advertisment
  • ಕೋಳಿ ಮಾಂಸ ತಿನ್ನೋರಿಗೆ ಎಚ್ಚರಿಕೆ ಕೊಟ್ಟ ತಜ್ಞರು
  • ಆಹಾರ ಸಮತೋಲನತೆಗಾಗಿ ಏನು ಮಾಡಬೇಕು?
  • ಕೋಳಿ ಮಾಂಸ ತುಂಬಾನೇ ಅಪಾಯಕಾರಿ, ಅಧ್ಯಯನ ಏನು ಹೇಳುತ್ತೆ

ಉತ್ತಮ ಆರೋಗ್ಯಕ್ಕೆ ಯಾವುದು ಒಳ್ಳೆಯ ಆಹಾರ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಸಸ್ಯಾಹಾರಿ ಅಥವಾ ಮಾಂಸಾಹಾರಿ. ಇದರಲ್ಲಿ ಯಾವುದು ಬೆಸ್ಟ್ ಎಂಬ ಗೊಂದಲ ಇದೆ. ತಜ್ಞರು ತಮ್ಮದೇ ರೀತಿಯ ವಿಶ್ಲೇಷಣೆ ಮೂಲಕ ಉತ್ತರಿಸುತ್ತಾರೆ. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳೂ ನಡೆದಿವೆ. ಇತ್ತೀಚಿನ ಅಧ್ಯಯನವೊಂದು ಪ್ರತಿದಿನ ಕೋಳಿ ತಿನ್ನೋರಿಗೆ ಎಚ್ಚರಿಕೆ ನೀಡಿದೆ.

Advertisment

ಅಧ್ಯಯನ ಏನು ಹೇಳುತ್ತದೆ?

ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ (Italy’s National Institute of Gastroenterology) ಸಂಶೋಧಕರ ಪ್ರಕಾರ.. ಹೆಚ್ಚು ಕೋಳಿ ಮಾಂಸ ತಿನ್ನೋದು ಅಪಾಯಕಾರಿ. ವಾರಕ್ಕೆ 300 ಗ್ರಾಂಗಿಂತ ಹೆಚ್ಚು ಕೋಳಿ ಮಾಂಸ ತಿಂದರೆ ಹೊಟ್ಟೆ, ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಅದರಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ ಎಂದು ಹೇಳಿದೆ. ಇಷ್ಟುದಿನ ಕೆಂಪು ಮಾಂಸ ತಪ್ಪಿಸಬೇಕು, ಕೋಳಿ ಮಾಂಸ (ಕೋಳಿ) ಉತ್ತಮ ಆಯ್ಕೆ ಎಂದು ನಂಬಲಾಗಿತ್ತು. ಆದರೆ ಈ ಅಧ್ಯಯನ ಜನರ ನಂಬಿಕೆಯನ್ನ ಸುಳ್ಳು ಮಾಡಿದೆ.

ಇದನ್ನೂ ಓದಿ: ತೀವ್ರ ಜ್ವರ ಬಂದಾಗ ಯಾಕೆ ಗೊಣಗುತ್ತಾರೆ..? ಮೆದುಳಿಗೆ ಅದು ಎಷ್ಟು ಡೇಂಜರ್​..?

publive-image

ಕೋಳಿ ಮಾಂಸ ಏಕೆ ಅಪಾಯಕಾರಿ?

ಕೋಳಿಯನ್ನು ಹೆಚ್ಚಾಗಿ ತಿನ್ನೋದ್ರಿಂದ ಜೀರ್ಣಾಂಗ ವ್ಯವಸ್ಥೆ ಮೇಲೆ Gastrointestinal ಕ್ಯಾನ್ಸರ್ ತೂಗುಗತ್ತಿಯ ಅಪಾಯ ಹೆಚ್ಚಿದೆ ಎಂಬುದನ್ನ ಸಂಶೋಧಕರು ಕಂಡುಕೊಂಡಿದ್ದಾರೆ. 20 ವರ್ಷಗಳ ಅವಧಿಯಲ್ಲಿ 4,869 ವಯಸ್ಕರ ಡೇಟಾ ಅಧ್ಯಯನ ಮಾಡಲಾಗಿದೆ. ಹೆಚ್ಚು ಕೋಳಿ ಮಾಂಸ ಸೇವಿಸಿದೋರಿಗೆ ಅಕಾಲಿಕ ಮರಣದ ಅಪಾಯವೂ ಹೆಚ್ಚಾದೆ.

Advertisment

ತಜ್ಞರ ಹೇಳೋದೇನು..?

ನೀವು ಯಾವುದೇ ಆಹಾರ ಸೇವಿಸಿ. ಅದು ಸಸ್ಯಹಾರ ಆಗಿರಲಿ ಅಥವಾ ಮಾಂಸ ಆಹಾರ ಆಗಿರಲಿ. ಆದರೆ ನಿಮ್ಮ ಆಹಾರದಲ್ಲಿ ಸಮತೋಲನ ಇರಲಿ. ಮಾಂಸಾಹಾರ ಸೇವನೆಯಿಂದ ಹೃದಯ ಬಡಿತ ಹೆಚ್ಚುತ್ತದೆ. ಹೆಚ್ಚು ಕೋಳಿ ಮಾಂಸ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: ಶೂ ಸಾಕ್ಸ್ ಬಳಸುವವರೇ ಎಚ್ಚರ.. ಈ ಅಭ್ಯಾಸದ ವ್ಯಕ್ತಿಗೆ ಭಯಾನಕ ರೋಗ; ವೈದ್ಯರಿಗೆ ದೊಡ್ಡ ಶಾಕ್‌!

publive-image

ಕೋಳಿಯ ಗುಣಮಟ್ಟದಲ್ಲಿ ಅಥವಾ ಅದನ್ನು ಬೇಯಿಸುವ ವಿಧಾನದಲ್ಲಿ ವ್ಯತ್ಯಾಸ ಆಗಿದಿಯೇ ಅನ್ನೋದ್ರ ಬಗ್ಗೆ ರಿವೀಲ್ ಆಗಿಲ್ಲ. ಅದರ ಬಗ್ಗೆ ತನಿಖೆ ಮಾಡುವ ಅಗತ್ಯ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಒಟ್ಟಾರೆ ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ (journal of nutrients) ಪ್ರಕಟವಾದ ವರದಿಯಲ್ಲಿ, ಕೋಳಿ ಮಾಂಸ ತಿನ್ನುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Advertisment

ಮಾಂಸಾಹಾರಿಗಳು ಏನು ಮಾಡಬೇಕು?

  • ಕೋಳಿ ಮಾಂಸ ಕಡಿಮೆ ತಿನ್ನಿ.
  •  ಕೋಳಿ ಮಾಂಸವನ್ನು ಉತ್ತಮ ಮತ್ತು ಆರೋಗ್ಯಕರ ರೀತಿಯಲ್ಲಿ ಬೇಯಿಸಿ
  •  ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ನಾರಿನ ಪ್ರಮಾಣ ಹೆಚ್ಚಿಸಿ
  •  ಸಂಸ್ಕರಿಸಿದ ಮಾಂಸ ಅಥವಾ ಡೀಪ್ ಫ್ರೈಡ್ ಚಿಕನ್ ತಪ್ಪಿಸಿ

ಇದನ್ನೂ ಓದಿ: ಡ್ರೈ ಫ್ರೂಟ್ಸ್‌, ಕಲ್ಲು ಉಪ್ಪು.. ಈ ಎಲ್ಲಾ ವಸ್ತುಗಳು ಇನ್ಮುಂದೆ ಭಾರತದಲ್ಲಿ ದುಬಾರಿ; ಕಾರಣ ಇಲ್ಲಿದೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment