/newsfirstlive-kannada/media/post_attachments/wp-content/uploads/2025/07/VISHAL.jpg)
ಕಾಲಿವುಡ್ ಸ್ಟಾರ್ ಆರ್ಯ ನಟನೆಯ ಹೊಸ ಸಿನಿಮಾದ ಶೂಟಿಂಗ್ ಮಾಡುವ ವೇಳೆ ಸ್ಟಂಟ್ಮ್ಯಾನ್ ಒಬ್ಬರು ನಿಧನರಾಗಿದ್ದಾರೆ. ಶೂಟಿಂಗ್ನಲ್ಲಿ ಕಾರು ಸ್ಟಂಟ್ ಮಾಡುವಾಗ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ.
ತಮಿಳು ಸಿನಿ ರಂಗದ ಸಾಹಸ ಕಲಾವಿದ ರಾಜು ಎನ್ನುವರು ಕೊನೆಯುಸಿರೆಳೆದಿದ್ದಾರೆ. ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್ನಲ್ಲಿ ಕಾರು ಸ್ಟಂಟ್ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್ ಮಾಡಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ ಘಟನೆಯಲ್ಲಿ ಸ್ಟಂಟ್ ಮ್ಯಾನ್ ರಾಜು ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕರುಣ್ ನಾಯರ್ಗೆ ಇದು ಒಳ್ಳೆ ಸರಣಿ.. ಕನ್ನಡಿಗನ ಬೆನ್ನಿಗೆ ನಿಂತ ಲೆಜೆಂಡರಿ ಕ್ರಿಕೆಟರ್ ಅನಿಲ್ ಕುಂಬ್ಳೆ, ಏನಂದ್ರು?
ಈ ಕುರಿತು ತಮಿಳು ನಟ ವಿಶಾಲ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾನು, ರಾಜು ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್ಗಳನ್ನು ಮಾಡಿದ್ದೇವೆ. ಅವರನ್ನು ಕಳೆದುಕೊಂಡಿರುವುದು ನಮಗೆ ತುಂಬಾ ದುಃಖ ತರಿಸಿದೆ. ಕಾರು ಉರುಳಿಸುವ ಸನ್ನಿವೇಶದ ಸ್ಟಂಟ್ ಮಾಡುವಾಗ ಈ ಘಟನೆ ನಡೆದಿದೆ. ತಮಿಳು ಸಿನಿ ರಂದಲ್ಲಿ ಕೆಲವು ವರ್ಷಗಳಿಂದ ರಾಜು ರಿಸ್ಕ್ ತೆಗೆದುಕೊಂಡು ಸ್ಟಂಟ್ಗಳನ್ನು ಮಾಡುತ್ತಿದ್ದರು. ಆದರೆ ಇಂದು ಕೆಚ್ಚೆದೆಯ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತಮಿಳು ಸಿನಿಮಾ ಶೂಟಿಂಗ್ಗಳಲ್ಲಿ ಸ್ಟಂಟ್ ಮಾಡುತ್ತಿದ್ದ ರಾಜು ಎಲ್ಲರಿಗೂ ಪರಿಚಿತರಾಗಿದ್ದರು. ಪಾ.ರಂಜೀತ್ ನಿರ್ದೇಶನದಲ್ಲಿ ಆರ್ಯ ಅವರು ನಟಿಸುತ್ತಿರುವ ಹೊಸ ಸಿನಿಮಾದ ಶೂಟಿಂಗ್ನಲ್ಲಿ ರಾಜು ಸ್ಟಂಟ್ ಮಾಡುವಾಗ ಇದು ನಡೆದಿದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ