/newsfirstlive-kannada/media/post_attachments/wp-content/uploads/2025/06/accident1.jpg)
ಬೆಂಗಳೂರು: ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ಭೀಕರ ಅಪಘಾತ ಸಂಭವಿಸಿ ಸಬ್ ಇನ್‌ಸ್ಪೆಕ್ಟರ್ ಜೀವಬಿಟ್ಟಿರೋ ಘಟನೆ ಸೂರ್ಯ ಸಿಟಿ ಬಳಿ ನಡೆದಿದೆ.
ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!
ಜೂನ್ 24ರಂದು ಸೂರ್ಯ ಸಿಟಿ ಬಳಿ ಗಾಂಜಾ ಕೇಸ್ವೊಂದರಲ್ಲಿ ಅತ್ತಿಬೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಕರೆ ತರುವಾಗ ಈ ಅಪಘಾತ ಸಂಭವಿಸಿದೆ. ಪರಿಣಮ ತಲಘಟ್ಟಪುರ ಸಬ್ ಇನ್‌ಸ್ಪೆಕ್ಟರ್ ಮೈಬೂಬ್ ಗುಡ್ಡಳ್ಳಿ ಮೃತಪಟ್ಟಿದ್ದಾರೆ. ಮೊದಲು ಕಾರಿನಿಂದ ಹೊರಗೆ ಬಂದು ಸಬ್ ಇನ್‌ಸ್ಪೆಕ್ಟರ್ ಫೋನಿನಲ್ಲಿ ಮಾತಾಡುತ್ತಿದ್ದರು. ಆಗ ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಗುದ್ದಿದೆ.
ಅಪಘಾತದ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದಾದ ಬಳಿಕ ಮೈಬೂಬ್ ಗುಡ್ಡಳ್ಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಸಬ್ ಇನ್‌ಸ್ಪೆಕ್ಟರ್ ಮೈಬೂಬ್ ಗುಡ್ಡಳ್ಳಿ ನಿಧನರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ