/newsfirstlive-kannada/media/post_attachments/wp-content/uploads/2024/06/vinay-Gowda-1.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಹಾಗೂ 11ರ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಸದ್ಯ ರಿಲೀಸ್ ಆಗಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಭಯದ ವಾತಾವರಣ ಸೃಷ್ಟಿಸುವಂತ ರೀಲ್ಸ್ ಮಾಡಿದ್ದಕ್ಕಾಗಿ ಈ ಇಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ FIR ದಾಖಲಾಗಿತ್ತು.
ರಜತ್ ಹಾಗೂ ವಿನಯ್ ಗೌಡ ಲಾಂಗ್ ತೋರಿಸಿ ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಬಸವೇಶ್ವರನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನಿನ್ನೆ ಪೊಲೀಸರು ಹಲವು ಗಂಟೆಗಳ ಕಾಲ ಈ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ:MLA ಮಗನ ಜೊತೆ ಭಾರ್ಗವಿ ರೊಮ್ಯಾಂಟಿಕ್ ಡ್ಯಾನ್ಸ್.. ಇಲ್ಲಿದೆ ತೆರೆ ಹಿಂದಿನ ಸಖತ್ ವಿಡಿಯೋ!
ಮಚ್ಚು ಬಳಸಿ ರೀಲ್ಸ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಸಮಾಜಕ್ಕೆ ಯಾವ ಸಂದೇಶ ನೀಡಲು ಈ ರೀತಿ ಮಾಡಿದ್ದಾಗಿ ಕೇಳಿದ್ದಾರೆ. ಆಗ ವಿನಯ್ ಹಾಗೂ ರಜತ್, ರಿಯಾಲಿಟಿ ಶೋ ಸಲುವಾಗಿ ರೀಲ್ಸ್ ಮಾಡಿದ್ದೇವೆ. ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದೇವೆ. ಕಾರ್ಯಕ್ರಮದಲ್ಲಿ ವಿನಯ್ ಪುಷ್ಪ ಪಾತ್ರ ಹಾಗೂ ರಜತ್ ದರ್ಶನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಅದರ ಪ್ರಮೋಷನ್ ಸಲುವಾಗಿ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ವಿ. ಈ ಕಾರ್ಯಕ್ರಮ ಶನಿವಾರ 7.30ಕ್ಕೆ ಪ್ರಸಾರವಾಗಿದೆ ಎಂಬೆಲ್ಲಾ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.
ಇದೀಗ ಮಧ್ಯರಾತ್ರಿ ರಿಲೀಸ್ ಮಾಡಿದ ಬೆನ್ನಲ್ಲೇ ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಕೇಸ್ ಸಂಬಂಧ ವಿನಯ್ ಗೌಡ ಹಾಗೂ ರಜತ್ ಕಿಶನ್ 10.30ಕ್ಕೆ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ