/newsfirstlive-kannada/media/post_attachments/wp-content/uploads/2024/08/tb-dam4.jpg)
ವಿಜಯನಗರ: ತುಂಗಭದ್ರಾ ತೀರದಿಂದ ಗುಡ್​ನ್ಯೂಸ್​ನ ಹೊರಹರಿವು ಸಿಕ್ಕಿದೆ. ರಭಸದಿಂದ ಹರಿವ ನೀರಿನಲ್ಲೇ ಗೇಟ್ ಎಲಿಮೆಂಟ್ ಕೂರಿಸಲು ತಜ್ಞರು ನಡೆಸಿದ ಪ್ರಯತ್ನಕ್ಕೆ ಕೊನೆಗೂ ಫಲ ನೀಡಿದೆ. ಕನ್ಹಯ್ಯ ನಾಯ್ಡು ತಂಡದ ಕಾರ್ಯಾಚರಣೆ ಹೇಗಿತ್ತು ಅನ್ನೋ ವರದಿ​ ಇಲ್ಲಿದೆ.
ಇದನ್ನೂ ಓದಿ:ಭಗೀರಥ ಪ್ರಯತ್ನಕ್ಕೆ ಯಶಸ್ಸು.. ತುಂಗಭದ್ರಾ ಡ್ಯಾಂಗೆ ಮೊದಲ ಸ್ಟಾಪ್ ಲಾಗ್ ಫಿಕ್ಸ್! ಎಷ್ಟು TMC ನೀರು ಸೇಫ್?
/newsfirstlive-kannada/media/post_attachments/wp-content/uploads/2024/08/tb-dam2.jpg)
6 ದಿನಗಳ ಟೆನ್ಶನ್​ಗೆ ಕೊಂಚ ವಿರಾಮ ಸಿಕ್ಕಂತಾಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕ ಮೂರು ರಾಜ್ಯದ ಪಾರ್ಥನೆಗೆ ಕೊನೆಗೂ ಮೊದಲ ಫಲ ಸಿಕ್ಕಿದೆ. ನಿನ್ನೆ ಸಂಜೆ ವೇಳೆ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಪೂಜೆ ಮಾಡಿ ಆರಂಭವಾದ ಗೇಟ್ ನಿರ್ಮಾಣ ಕಾರ್ಯ, ಸತತ ಪರಿಶ್ರಮ, ನಿರಂತರ ಕಾರ್ಯಾಚರಣೆಯ ಬಳಿಕ ಯಶಸ್ವಿಯಾಗಿದೆ. ಟಿಬಿ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಎಲಿಮೆಂಟ್ ಅಳವಡಿಸುವ ಕಾರ್ಯ ಭರ್ಜರಿ ಸಕ್ಸಸ್ ಕಂಡಿದೆ. ಮೊದಲ ಹಂತದ ಕಾರ್ಯಾಚರಣೆ ಯಶಸ್ವಿಯಾಗ್ತಿದ್ದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಡ್ಯಾಂ ಮೇಲೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇನ್ನೂ ಗೇಟ್ ಕೂರಿಸಿದ ಸವಾಲಿನ ಬಗ್ಗೆ ಮಾಹಿತಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/tb-dam1.jpg)
ಇಂದಿನ ಕಾರ್ಯಾಚರಣೆ ಯಶಸ್ವಿಯಾಗಿದೆ. ಈಗ 22 TMC ನೀರು ಉಳಿಸಲು ಸಹಯಕವಾಗಿದೆ. ಹರೆಯುವ ನೀರಿನಲ್ಲಿ ಗೇಟ್ ಹಾಕೋ ಕಾರ್ಯ ಚಾಲೇಜ್ ಇತ್ತು. ಜಿಂದಾಲ್, ಹಿಂದೂಸ್ತಾನ್ ಹಾಗೂ ನಾರಾಯಣ ಸ್ಟೀಲ್ ಕಂಪನಿಗಳಿಗೆ ಧನ್ಯವಾದ ಹೇಳುವೆ. ನಾಳೆ ಸಂಜೆಯೊಳಗೆ ನಾಲ್ಕು ಸ್ಟಾಪ್ ಲಾಗ್‌ಗಳ ಅಳವಡಿಸುತ್ತೇವೆ. ಕನಿಷ್ಠ 70 TMC ನೀರು ಉಳಿಸಲಾಗುವುದು ಎಂದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ
/newsfirstlive-kannada/media/post_attachments/wp-content/uploads/2024/08/TB-Dam-Gate-Success-2.jpg)
ಸದ್ಯ ಈಗ ಮೊದಲ ಎಲಿಮೆಂಟ್‌ನ ಮೇಲ್ಭಾಗದಿಂದ ಈಗ ನೀರು ಹರಿಯುತ್ತಿದೆ. ಇನ್ನೂ ನಾಲ್ಕು ಗೇಟ್ ಅಳವಡಿಸುವ ಪ್ರಕ್ರಿಯೆ ಬಾಕಿಯಿದೆ. ಕನ್ಹಯ್ಯ ನಾಯ್ಡು ನೇತೃತ್ವದ ತಂಡದಿಂದ ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ಎರಡನೇ ಎಲಿಮೆಂಟ್ ಅಳವಡಿಸುವ ಕೆಲಸ ಆರಂಭವಾಗಿದೆ. ಒಟ್ಟಾರೆ, ತುಂಗಭದ್ರಾ ಜಲಾಶಯದ ನೀರಿನ ಮಟ್ಟ 65 ಟಿಎಂಸಿಗೆ ಇಳಿದಿದೆ. ಹೊರಹರಿವಿನ ಪ್ರಮಾಣವನ್ನು 86 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಒಳಹರಿವು 33 ಸಾವಿರ ಕ್ಯೂಸೆಕ್ ಇದ್ದು, ಈ ನೀರಿನ ರಭಸದಲ್ಲೇ ಇವತ್ತು ಮತ್ತೆ ಕಾರ್ಯಾಚರಣೆ ಆರಂಭಿಸಲಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us