/newsfirstlive-kannada/media/post_attachments/wp-content/uploads/2025/02/Sudan_Plane_1.jpg)
ಮಿಲಿಟರಿ ವಿಮಾನವೊಂದು ಪತನಗೊಂಡು ಮಹಿಳೆಯರು, ಮಕ್ಕಳು ಸೇರಿ 46 ಪ್ರಯಾಣಿಕರು ಕೊನೆಯುಸಿರೆಳೆದಿರುವ ಘಟನೆ ದಕ್ಷಿಣ ಸುಡಾನ್ ರಾಜಧಾನಿ ಖಾರ್ಟೂಮ್ ನಗರದ ಹೊರವಲಯದಲ್ಲಿ ನಡೆದಿದೆ.
ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಆಂಟೊನೊವ್ ವಿಮಾನವು ರಾತ್ರಿ ವೇಳೆ ಖಾರ್ಟೂಮ್ನ ವಾಯುವ್ಯ ಭಾಗದಲ್ಲಿರುವ ಒಮ್‌ಡುರ್‌ಮನ್‌ನ ಸೇನೆಯ ಕೇಂದ್ರವಾದ ವಾಡಿ ಸೀಡ್ನಾ ವಾಯುನೆಲೆಯ ಬಳಿ ಪತನಗೊಂಡಿದೆ. ಆಂಟೊನೊವ್ ವಿಮಾನ ಟೇಕ್‌ಆಫ್ ಆಗುವ ಸಮಯದಲ್ಲಿ ಪತನಗೊಂಡಿದ್ದರಿಂದ 46 ಪ್ರಯಾಣಿಕರು ಜೀವ ಕಳೆದುಕೊಮಡಿದ್ದಾರೆ. ಅಪಘಾತದಲ್ಲಿ 10 ಜನರು ಗಂಭೀರವಾಗಿ ಗಾಯಗೊಂಡಿದ್ದರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:RCBಗೆ ಹ್ಯಾಟ್ರಿಕ್ ಸೋಲು.. ಬ್ಯಾಟಿಂಗ್ನಲ್ಲಿ ಸ್ಮೃತಿ ಮಂದಾನ ಮತ್ತೆ ವಿಫಲ, ಪೆರ್ರಿ ಡಕೌಟ್
ವಿಮಾನವು ಕ್ರ್ಯಾಶ್ ಆಗಿ ಬಿದ್ದ ಮೇಲೆ ಭೀಕರವಾದ ಬೆಂಕಿ ಕಾಣಿಸಿಕೊಂಡಿದ್ದರಿಂದ ಒಳಗಿದ್ದ ಜನರಿಗೆ ಹೊರಗೆ ಬರಲು ಆಗಿಲ್ಲ. ಅಲ್ಲದೇ ರಾತ್ರಿ ಸಮಯದಲ್ಲಿ ಇದು ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಹಾನಿ ಸಂಭವಿಸಿದೆ. ಇನ್ನು ಸ್ಥಳೀಯವಾಗಿ ಕೂಡ ಮನೆಗಳು ಹಾನಿಯಾಗಿರುವುದು ಕಂಡು ಬಂದಿದೆ.
ವಿಮಾನ ಕ್ರ್ಯಾಶ್ಗೊಂಡು ಮನೆಗಳ ಮೇಲೆ ಬಿದ್ದಿದ್ದರಿಂದ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಇದರ ಜೊತೆಗೆ ಕರೆಂಟ್ ಕಂಬಗಳು ಕೂಡ ನೆಲಕ್ಕುರುಳಿದ್ದು ಸ್ಥಳೀಯವಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಆಂಟೊನೊವ್ ವಿಮಾನದಲ್ಲಿ ತಾಂತ್ರಿಕ ಅಡಚಣೆ ಈ ದುರ್ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ