ಹೊಸ ಮನೆಗೆ ಕಾಲಿಟ್ಟ ಭಾಗ್ಯಲಕ್ಷ್ಮೀ ಖ್ಯಾತಿಯ ತಾಂಡವ್ ದಂಪತಿ.. ಫೋಟೋಸ್ ಇಲ್ಲಿವೆ

author-image
Veena Gangani
Updated On
ಹೊಸ ಮನೆಗೆ ಕಾಲಿಟ್ಟ ಭಾಗ್ಯಲಕ್ಷ್ಮೀ ಖ್ಯಾತಿಯ ತಾಂಡವ್ ದಂಪತಿ.. ಫೋಟೋಸ್ ಇಲ್ಲಿವೆ
Advertisment
  • ಭಾಗ್ಯಲಕ್ಷ್ಮೀ ಸೀರಿಯಲ್​ ಮೂಲಕ ಫೇಮಸ್ ಆಗಿದ್ದ ನಟ
  • ತಾಂಡವ್ ಪಾತ್ರದಲ್ಲಿ ನಟ ಸುದರ್ಶನ್ ರಂಗಪ್ರಸಾದ್ ಅಭಿನಯ
  • ಸುದರ್ಶನ್ ರಂಗಪ್ರಸಾದ್, ಸಂಗೀತಾ ಭಟ್ ದಂಪತಿ ಫುಲ್ ಖುಷ್

ಭಾಗ್ಯಲಕ್ಷ್ಮಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಸುದರ್ಶನ್ ರಂಗಪ್ರಸಾದ್ ದಂಪತಿ ಹೊಸ ನಿವಾಸದಲ್ಲಿ ಸಂತೋಷ ಮನೆ ಮಾಡಿದೆ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ತಾಂಡವ್ ಪಾತ್ರದಲ್ಲಿ ನಟ ಸುದರ್ಶನ್ ರಂಗಪ್ರಸಾದ್ ಅಭಿನಯಿಸುತ್ತಿದ್ದಾರೆ. ಇದೀಗ ನಟ ಸುದರ್ಶನ್ ರಂಗಪ್ರಸಾದ್ ಹಾಗೂ ನಟಿ ಸಂಗೀತಾ ಭಟ್ ಗೃಹಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ:ಸರೋಜಾ ದೇವಿಗೆ ತುಂಬಾನೇ ಕಾಡಿದ ನೋವು ಅದು.. ಅಂದಿನಿಂದ ಚೇತರಿಸಿಕೊಳ್ಳಲು ತುಂಬಾ ವರ್ಷಗಳು ಬೇಕಾಯಿತು..

publive-image

ಹೌದು, ಗೃಹ ಪ್ರವೇಶದ ಫೋಟೋಗಳನ್ನು ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಭರವಸೆ ನೀಡಿದಂತೆ, ನಮ್ಮ ಜೀವನದ ಅತ್ಯಂತ ಸಂತೋಷದಾಯಕ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಇದು ನಮ್ಮ ಜೀವನದ ದೊಡ್ಡ ಮೈಲಿಗಲ್ಲುಗಳಲ್ಲಿ ಒಂದಾದ ಸಾಧನೆಯಾಗಿದೆ. ಜೊತೆಗೆ ಸುಖಸಾ ನಮಗೆ ನೆಲೆಯಾಗಿದೆ.

publive-image

ಸು-ಸುದರ್ಶನ್ ಸುಖ ಎಂದರೆ ಆನಂದ/ಸಂತೋಷ, 'ಸುಕಾಸಾ' ಎಂದರೆ ನಿಮ್ಮ ಮನೆ ಮತ್ತು ಖಾಸಾ ಎಂದರೆ ಮನೆ. ಆಸಾ ಎಂದರೆ ಆಶ್ರಯ ಸ-ಸಂಗೀತ. ಒಟ್ಟಿಗೆ ಇದು ಸಂತೋಷದ ವಾಸಸ್ಥಾನ/ಮನೆಯಾಗುತ್ತದೆ. ಸಂತೋಷದ ಮನೆ ಎಂದು ಕರೆಯಬಹುದಾದ ಸ್ಥಳವನ್ನು ಹೊಂದಿರುವುದಕ್ಕಿಂತ ಶಾಶ್ವತವಾದದ್ದು ಯಾವುದೂ ಇಲ್ಲ. ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವುದು ನಮಗೆ ಸಂತೋಷವನ್ನು ತರುತ್ತದೆ. ನಾವು ವಿನಮ್ರವಾಗಿ ನಮಸ್ಕರಿಸುತ್ತೇವೆ ಮತ್ತು ನಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ.

publive-image

ನಮ್ಮ ಎಲ್ಲಾ ಹಿತೈಷಿಗಳ ಪ್ರಾರ್ಥನೆ ಮತ್ತು ಆಶೀರ್ವಾದಗಳಿಗಾಗಿ ಧನ್ಯವಾದಗಳು. ನಾವು ಒಟ್ಟಿಗೆ ಅನುಭವಿಸಲು ಮತ್ತು ಆಚರಿಸಲು ಸಾಧ್ಯವಾಗುತ್ತಿರುವ ಎಲ್ಲಾ ಅದ್ಭುತ ನೆನಪುಗಳ ಭಾಗವಾಗಿದ್ದಕ್ಕಾಗಿ ನಮ್ಮ ಕುಟುಂಬಗಳು, ಸ್ನೇಹಿತರು ಮತ್ತು ಪೋಷಕರಿಗೆ ಧನ್ಯವಾದಗಳು. ಎಲ್ಲರಿಗೂ ಶಾಂತಿ, ಶಾಂತ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ವಿಶ್ವವು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ ಮತ್ತು ಆಶೀರ್ವಾದ ಪಡೆಯಲಿ ಎಂದು ಬರೆದುಕೊಂಡಿದ್ದಾರೆ.

publive-image

ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ದಂಪತಿ ಗೃಹಪ್ರವೇಶ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment