newsfirstkannada.com

BREAKING: ಖಾಸಗಿ ಬಸ್​​ನಲ್ಲಿ ನಿಗೂಢ ಸ್ಫೋಟ.. 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

Share :

Published March 20, 2024 at 7:40pm

Update March 21, 2024 at 6:07am

    ಇಂದು ತುಮಕೂರಿನಲ್ಲಿ ಖಾಸಗಿ ಬಸ್​ನಲ್ಲಿ ನಿಗೂಢ ಸ್ಪೋಟ!

    ಟಾಯ್ಲೆಟ್​ಗೆ ಬಳಸೋ ಆ್ಯಸಿಡ್​ ಬಾಟಲ್​ ಬ್ಲಾಸ್ಟ್​ ಅನ್ನೋ ಮಾಹಿತಿ

    ಬಸ್​ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳು!

ತುಮಕೂರು: ಖಾಸಗಿ ಬಸ್​ನಲ್ಲಿ ನಿಗೂಢ ಸ್ಪೋಟವಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ತುಮಕೂರಿನಿಂದ ಕುಣಿಗಲ್​ ಕಡೆಗೆ ಹೋಗುತ್ತಿದ್ದಾಗ ಗೂಳೂರು ಸಮೀಪ ಗಣಪತಿ ಅನ್ನೋ ಬೋರ್ಡ್​ ಹೊಂದಿದ್ದ ಖಾಸಗಿ ಬಸ್​ನಲ್ಲಿ ಈ ಸ್ಫೋಟ ಆಗಿದ್ದು, ಭಾರೀ ದುರಂತ ತಪ್ಪಿದೆ.

ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ ಟಾಯ್ಲೆಟ್​ಗೆ ಬಳಸೋ ಆ್ಯಸಿಡ್​ ಬಾಟಲ್​​​ ಸ್ಫೋಟಗೊಂಡಿದೆ. ಮಹಿಳೆ ಒಬ್ಬರು ತನ್ನೊಂದಿಗೆ ಆ್ಯಸಿಡ್​ ಬಾಟಲ್​ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದರು. ಇದೇ ಬಾಟಲ್​ ದಿಢೀರ್​ ಸ್ಫೋಟಗೊಂಡಿದ್ದು, ಒಂದು ಕ್ಷಣ ಬಸ್​ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಆ್ಯಸಿಡ್​ ಒತ್ತಡ ಹೆಚ್ಚಾಗಿ ಬಾಟಲ್​ ಸ್ಫೋಟಗೊಂಡ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಇನ್ನು, ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಗ್ರಾಮಾಂತರ ಪೊಲೀಸ್ರು ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಹೊನ್ನುಡಿಕೆ ಹ್ಯಾಂಡ್​ ಪೋಸ್ಟ್​ನಿಂದ ಬಸ್​​ನಲ್ಲಿ ಬರುತ್ತಿದ್ದಳು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಖಾಸಗಿ ಬಸ್​​ನಲ್ಲಿ ನಿಗೂಢ ಸ್ಫೋಟ.. 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

https://newsfirstlive.com/wp-content/uploads/2024/03/Bus-Blast.jpg

Load More