/newsfirstlive-kannada/media/post_attachments/wp-content/uploads/2025/02/Hair-Loss.jpg)
ಬೋಳು ತಲೆ ಯಾವತ್ತಿದ್ದರೂ ಮಂಡೆ ಬಿಸಿ. ನೆತ್ತಿ ಮೇಲೆ ಕೂದಲಿದ್ದರಷ್ಟೇ ಚಂದ, ಆರೋಗ್ಯವೂ ಸೌಖ್ಯ. ಹುಟ್ಟುವಾಗಲೇ ಸಮಸ್ಯೆ ಅಥವಾ ಪೂರ್ವಜರಿಂದ ಬಳುವಳಿಯಿಂದ ಕೂದಲು ಮಾಯವಾದ್ರೆ ಚಿಂತೆ ಮಾಡುವಂಥದ್ದು ಏನೂ ಇರಲ್ಲ. ಇಲ್ಲಿನ 18 ಗ್ರಾಮಗಳ ಜನರ ಕಂಗಾಲು ಮಾಡಿದ್ದ ನಿಗೂಢ ರಹಸ್ಯಕ್ಕೆ ಉತ್ತರ ಸಿಕ್ಕಿದೆ. ‘ಒಂದು ಮೊಟ್ಟೆಯ ಕತೆ’ಯ ಹಿಂದೆ ಹೋಗಿದ್ದ ವಿಜ್ಞಾನಿಗಳು, ಆತಂಕಕಾರಿ ವಿಚಾರವನ್ನು ಬಯಲಿಗೆ ತಂದಿದ್ದಾರೆ!
ಸ್ಥಳ: ಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಜಿಲ್ಲೆ
ಸಮಸ್ಯೆ: ತಲೆ ಮೇಲಿದ್ದ ಕೂದಲು ದಿಢೀರ್ ಮಂಗಮಾಯ
ಹೌದು, ಬುಲ್ಡಾನಾ ಜಿಲ್ಲೆಯ 18 ಗ್ರಾಮಗಳಲ್ಲಿ ನಿಗೂಢ ಸಮಸ್ಯೆಯೊಂದು ಭಾರೀ ಚಿಂತೆಗೆ ದೂಡಿತ್ತು. ಸರಿ ಸುಮಾರು 300ಕ್ಕೂ ಅಧಿಕ ಮಂದಿಯ ತಲೆ ಮೇಲಿದ್ದ ಕೂದಲು ಹಠಾತ್ ಮಾಯವಾಗಿಬಿಟ್ಟಿತ್ತು. ಕಳೆದ ಡಿಸೆಂಬರ್, ಜನವರಿಯಲ್ಲಿ ತಲೆ ಮೇಲಿದ್ದ ಕೂದಲುಗಳು ನಾಪತ್ತೆ ಆಗಿದ್ದವು. ಇದು ಇಡೀ ಗ್ರಾಮವನ್ನೇ ಕಂಗಾಲು ಮಾಡಿತ್ತು. ಮದುವೆಗೆ ಬಂದ ಯುವಕರಿಂದ ಹಿಡಿದು, ಕೆಲವು ಮಕ್ಕಳಲ್ಲಿಯೂ ಸಮಸ್ಯೆ ಕಾಡಿತ್ತು. ಇದು ಅಲ್ಲಿನ ವೈದ್ಯರಿಗೂ ಸವಾಲಾಗಿ ಪರಿಣಮಿಸಿತ್ತು. ಸರ್ಕಾರದ ಆದೇಶದಂತೆ, ಐಸಿಎಂಆರ್​ನಿಂದ (Indian Council of Medical Research) ಉನ್ನತ ಮಟ್ಟದ ತನಿಖೆ ನಡೆದಿತ್ತು. ಇದೀಗ ವಿಜ್ಞಾನಿಗಳು ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ‘ಚಿನ್ನ’ವಾದ ಮೊಟ್ಟೆ.. ಬಾಡಿಗೆ ಕೋಳಿಗಳಿಗೆ ಮುಗಿಬಿದ್ದ ಅಮೆರಿಕಾ ನಿವಾಸಿಗಳು; ಕಾರಣವೇನು?
/newsfirstlive-kannada/media/post_attachments/wp-content/uploads/2025/02/Hair-Loss-1.jpg)
ತನಿಖೆ ಆರಂಭಿಸಿದ ವಿಜ್ಞಾನಿಗಳು ಊರಿನ ನೀರು, ಮಣ್ಣು ಸೇರಿದಂತೆ ವಿವಿಧ ಸ್ಯಾಂಪಲ್ ಸಂಗ್ರಹಿಸಿಕೊಂಡು ಹೋಗಿದ್ದರು. ವಿಧಿ ವಿಜ್ಞಾನಗಳ ಪ್ರಯೋಗಾಲಯದಲ್ಲಿ ಅವುಗಳ ಮೇಲೆ ಗಂಭೀರವಾದ ಅಧ್ಯಯನ ನಡೆದಿತ್ತು. ಪರೀಕ್ಷೆ ವೇಳೆ ಅದೊಂದು ವಸ್ತು ಬದುಕಿಗೆ ಮಾರಕವಾಗ್ತಿದೆ ಎಂಬ ವಿಚಾರ ತಿಳಿದುಬಂದಿದೆ.
ಇದೇ ಕಾರಣಕ್ಕೆ ಕೂದಲು ಮಾತ್ರವಲ್ಲದೇ, ತಲೆನೋವು, ಜ್ವರ, ಮೂಳೆ ಸೆಳೆತ, ನೆತ್ತಿಯಲ್ಲಿ ತುರಿಕೆ, ಮೈ ಜುಮ್ ಎನ್ನುವುದು, ವಾಂತಿ, ಲೂಸ್ ಮೋಷನ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಅಂತಾ ರಾಯಗಡ ಬವಸ್ಕರ್ ಹಾಸ್ಪಿಟಲ್ ಅಂಡ್ ರಿಸರ್ಜ್ ಸೆಂಟರ್​ನ ಎಂಡಿ ಡಾ ಹಿಮ್ಮತ್ ರಾವ್ ತಿಳಿಸಿದ್ದಾರೆ.
ಸಮಸ್ಯೆಯ ಮೂಲ..
ಇಷ್ಟೆಲ್ಲ ಅನಾಹುತಕ್ಕೆ ಕಾರಣ ಸರ್ಕಾರ! ಬಡವರಿಗೆ ಅಂತಾ ಸರ್ಕಾರ ಉಚಿತ ದವಸ, ಧಾನ್ಯಗಳನ್ನ ವಿತರಿಸೋದು ಹೊಸದಲ್ಲ. ಸರ್ಕಾರದ ಪಡಿತರ ಗುಣಮಟ್ಟದಿಂದ ಇರುವುದಿಲ್ಲ. ಕಳಪೆಯಿಂದ ಕೂಡಿರುತ್ತದೆ ಅನ್ನೋದು ತುಂಬಾ ದಿನಗಳಿಂದ ಇರುವ ಆರೋಪ. ಅದರಂತೆ, ಈ 18 ಗ್ರಾಮಗಳಲ್ಲಿ ಸರ್ಕಾರ ಪಡಿತರ ನೀಡಿದೆ. ಅದರಲ್ಲಿ ಗೋಧಿ ಮನುಷ್ಯರ ಬದುಕಿಗೆ ಸಂಚಕಾರವಾಗಿರೋದು ಗೊತ್ತಾಗಿದೆ.
ಇದನ್ನೂ ಓದಿ: ಗೃಹಿಣಿಯರಿಗೆ ಶಾಕಿಂಗ್ ನ್ಯೂಸ್.. ಸದ್ದಿಲ್ಲದೇ ಅಡುಗೆ ಎಣ್ಣೆ ಬೆಲೆ ಏರಿಕೆ? ಕೆ.ಜಿಗೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಳ?
/newsfirstlive-kannada/media/post_attachments/wp-content/uploads/2025/01/Hair-Loss.jpg)
ಗೋಧಿಯಲ್ಲಿ ಏನಿತ್ತು..?
- ಗೋಧಿಗೂ ತಲೆಕೂದಲು ಉದುರಿದ್ದಕ್ಕೂ ಸಂಬಂಧ ಇದೆ
- ಅದರಲ್ಲಿ ಸೆಲಿನಿಯಂ ಹೆಚ್ಚು, ಜಿಂಕ್ ಕಮ್ಮಿ ಪ್ರಮಾಣದಲ್ಲಿತ್ತು
- ಸ್ಥಳೀಯ ಗೋಧಿಗಿಂತ 600 ಪಟ್ಟು ಹೆಚ್ಚಿನ ಸೆಲಿನಿಯಂ ಇತ್ತು
- ಹೆಚ್ಚಿನ ಸೆಲಿನಿಯಂನಿಂದ ಅಲೋಪಿಸಿಯಾ ಕೇಸ್ ಹೆಚ್ಚಳ
- ಗೋಧಿಯಲ್ಲಿ ಸೆಲಿನಿಯಂ ಪ್ರತಿ ಕೆಜಿ 14.5 ಮಿಲಿಗ್ರಾಂ ಇತ್ತು
- ಸೆಲಿನಿಯಂ ಪ್ರತಿ ಕೆಜಿಗೆ 1.9 ಮಿಲಿಗ್ರಾಂ ಇದ್ದರೆ ತೊಂದರೆ ಇಲ್ಲ
- ಗೋಧಿಯು ಪಂಜಾಬ್ ರಾಜ್ಯದಿಂದ ಸರಬರಾಜು ಆಗಿದೆ
- ಇದರಿಂದ ಜನರಿಗೆ ತಲೆಕೂದಲು ಉದುರುವ ಸಮಸ್ಯೆ ಶುರು
ಆಘಾತಕಾರಿ ಮಾಹಿತಿ..!
ಬುಲ್ಡಾನಾ ಜಿಲ್ಲೆಯ ಜನರ ರಕ್ತ, ಮೂತ್ರ, ಕೂದಲು ಸ್ಯಾಂಪಲ್ ಪಡೆದು ಲ್ಯಾಬ್ನಲ್ಲಿ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಜನರಲ್ಲಿ ರಕ್ತದಲ್ಲಿ 35 ಪಟ್ಟು, ಮೂತ್ರದಲ್ಲಿ 60 ಪಟ್ಟು, ಕೂದಲಿನಲ್ಲಿ 150 ಪಟ್ಟು ಹೆಚ್ಚಿನ ಸೆಲಿನಿಯಂ (selenium) ಅಂಶ ಇರೋದು ಪತ್ತೆಯಾಗಿದೆ. 18 ಗ್ರಾಮದ 8 ವರ್ಷದಿಂದ ಹಿಡಿದು 72 ವರ್ಷದೊಳಗಿನ ಜನರ ತಲೆಮೇಲಿದ್ದ ಕೂದಲು ಇದ್ದಕ್ಕಿದ್ದಂತೆ ಮಾಯವಾಗಿತ್ತು - ಡಾಕ್ಟರ್ ಹಿಮ್ಮತ್ ರಾವ್ ಭಾವಸ್ಕರ್, ವಿಜ್ಞಾನಿ, ಪದ್ಮಶ್ರೀ ಪುರಸ್ಕೃತ
ಗೋಧಿಯ ಸ್ಯಾಂಪಲ್​​ ಥಾಣೆಯ ವರ್ನಿ ಅನಾಲಿಟಿಕಲ್ ಲ್ಯಾಬ್​ನಲ್ಲಿ ಪರೀಕ್ಷೆ ನಡೆದಿದೆ. ತಲೆ ಕೂದಲು ಮಾಯವಾಗಲು ಅಸಲಿ ಕಾರಣ ಕೊನೆಗೂ ರಿವೀಲ್ ಆಗಿದೆ. ಆದರೆ ಐಸಿಎಂಆರ್​​ನಿಂದ ಇನ್ನೂ ಅಧಿಕೃತಾಗಿ ಮಾಹಿತಿಯನ್ನು ಹೊರ ಬಿದ್ದಿಲ್ಲ. ಶೀಘ್ರದಲ್ಲೇ, ಐಸಿಎಂಆರ್​ ಅಸಲಿ ಸತ್ಯ ಹೇಳುವ ಸಾಧ್ಯತೆ ಇದೆ. ಇದೀಗ ಸರ್ಕಾರ ನೀಡುವ ಪಡಿತರ ಜನರ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ಸುಧಾ ಮೂರ್ತಿಗೆ ಮೋದಿ ವಿಶೇಷ ಮನವಿ.. ಆನಂದ್ ಮಹೀಂದ್ರಾ ಸೇರಿ 10 ಗಣ್ಯರಿಗೆ ಸ್ಪೆಷಲ್ ಟಾಸ್ಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us