Advertisment

VIDEO: ಕ್ರಿಕೆಟ್​ ಆಡುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತ.. ನೆಲಕ್ಕೆ ಬಿದ್ದಂತೆ ಉಸಿರು ನಿಲ್ಲಿಸಿದ ಬಾಟ್ಸ್​ಮನ್​

author-image
AS Harshith
Updated On
VIDEO: ಕ್ರಿಕೆಟ್​ ಆಡುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತ.. ನೆಲಕ್ಕೆ ಬಿದ್ದಂತೆ ಉಸಿರು ನಿಲ್ಲಿಸಿದ ಬಾಟ್ಸ್​ಮನ್​
Advertisment
  • ಬ್ಯಾಟ್​​ ಬೀಸಿದ ತಕ್ಷಣವೇ ಹೃದಯಾಘಾತಕ್ಕೆ ಯುವಕ ಬಲಿ
  • ನೋಡ ನೋಡುತ್ತಿದ್ದಂತೆಯೇ ಯುವಕ ನೆಲಕ್ಕೆ ಬಿದ್ದು ಸಾವು
  • ಆಘಾತಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆ.. ಘಟನೆ ಎಲ್ಲ ನಡೆದದ್ದು?

ಯುವಕನೋರ್ವ ಕ್ರಿಕೆಟ್​ ಆಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾದ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ. ಬ್ಯಾಟ್​ ಬೀಸಿದ ದಾಂಡಿಗ ಏಕಾಏಕಿ ಕುಸಿದು ಬಿದ್ದು ಉಸಿರು ನಿಲ್ಲಿಸಿದ್ದಾನೆ. ಈ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisment

ಮುಂಬೈಯ ಮೀರಾ ರೋಡ್​ನಲ್ಲಿ ಈ ಘಟನೆ ನಡೆದಿದೆ. ಮೀರಾ ರಸ್ತೆಯ ಕಾಶಿಮೀರಾ ಪ್ರದೇಶದ ಟರ್ಫ್​ನಲ್ಲಿ ಬಾಕ್ಸ್​ ಕ್ರಿಕೆಟ್​ ಆಡುವ ವೇಳೆ ಯುವಕನಿಗೆ ಹಾರ್ಟ್​ ​ ಅಟ್ಯಾಕ್​ ಆಗಿದೆ. ತಕ್ಷಣವೇ ಕುಸಿದು ಬಿದ್ದ ಆತ ಕೊನೆಯುಸಿರೆಳೆದಿದ್ದಾನೆ.

ಕಂಪನಿಯೊಂದು ಕ್ರಿಕೆಟ್​ ಪಂದ್ಯವನ್ನು ಆಯೋಜಿಸಿತ್ತು. ಇದರಲ್ಲಿ ಯುವಕ ಮತ್ತು ಆತನ ತಂಡ ಭಾಗವಹಿಸಿತ್ತು. ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಯುವಕನಿಗೆ ಹೃದಯಾಘಾತವಾಗಿದೆ.

Advertisment


">June 3, 2024

ಇದನ್ನೂ ಓದಿ: ನಾನು ವಿಶ್ವಕಪ್ ಪಂದ್ಯ​ ವೀಕ್ಷಿಸಲು ಇಷ್ಟಪಡಲ್ಲ; ಆಯ್ಕೆ ಮಾಡದಿದ್ಕೆ ಅಹಂಕಾರದ ಮಾತಾಡಿದ ಪರಾಗ್!

ಕ್ಯಾಮೆರಾದಲ್ಲಿ ಯುವಕ ಹೃದಯಾಘಾತಕ್ಕೆ ಬಲಿಯಾಗುವ ಭಯಾನಕ ದೃಶ್ಯ ಸೆರೆಯಾಗಿದೆ. ಟ್ವಿಟ್ಟರ್​​ನಲ್ಲಿ ದೃಶ್ಯಗಳು ಹರಿದಾಡುತ್ತಿದೆ. ಯುವಕ ನೆಲಕ್ಕೆ ಬಿದ್ದಂತೆ ಸ್ನೇಹಿತರು ಆತನ ಬಳಿ ಓಡಿ ಬರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment