/newsfirstlive-kannada/media/post_attachments/wp-content/uploads/2024/07/RASHMI.jpg)
ಉಡುಪಿ: ಮಾಜಿ ಶಾಸಕರೊಬ್ಬರ ಒತ್ತಡದಿಂದ ದಕ್ಷ ಅಧಿಕಾರಿಯಾದ ಕುಂದಾಪುರ ಉಪವಿಭಾಗದ ಎಸಿ ರಶ್ಮಿ ಎಸ್.ಆರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ ಅನ್ನೋ ಆರೋಪ ಮಾಡಲಾಗಿದೆ. ಒಂದು ವರ್ಷದ ಹಿಂದೆಯಷ್ಟೇ ವರ್ಗಾವಣೆಯಾಗಿ ಬಂದಿದ್ದ ರಶ್ಮಿ ಅವರನ್ನು ಈಗ ಮತ್ತೆ ಬೇರೆ ಸ್ಥಳಕ್ಕೆ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ:ರಾತ್ರಿ ರಾಡ್ನಿಂದ ಬೀಗ ಹೊಡೆದು ಮನೆಗೆ ನುಗ್ಗಿದ್ದ ಕಳ್ಳ.. ತಾನೇ 20 ರೂಪಾಯಿ ಇಟ್ಟು ಹೋದ!
ತಮ್ಮ ಉತ್ತಮ ಸೇವೆ ಮೂಲಕ ಎಸಿ ರಶ್ಮಿ ಅವರು ಹೆಸರಾಗಿದ್ದರು. ಒಂದು ವರ್ಷದ ಹಿಂದೆಯಷ್ಟೇ ವರ್ಗಾವಣೆಯಾಗಿ ಕುಂದಾಪುರಕ್ಕೆ ಬಂದಿದ್ದರು. ಸದ್ಯ ರಶ್ಮಿಯವರ ದಿಢೀರ್ ವರ್ಗಾವಣೆ ಕುರಿತು ಕುಂದಾಪುರದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕನ ವಿರುದ್ಧವೂ ಜನ ಗರಂ ಆಗಿದ್ದಾರೆ.
ಇದನ್ನೂ ಓದಿ: ಮಳೆಗೆ ಸೋರುತ್ತಿರೋ ತಹಶೀಲ್ದಾರ್ ಕಚೇರಿ.. ಅಪಾಯದ ಮಟ್ಟ ಮೀರಿದ ರಾಜ್ಯದ ನದಿಗಳು, ಆತಂಕ
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಬೈಂದೂರು ಮಾಜಿ ಶಾಸಕರೊಬ್ಬರು ಒತ್ತಡ ಹಾಕಿ ರಶ್ಮಿಯವರನ್ನು ವರ್ಗಾವಣೆ ಮಾಡಿಸಲಾಗಿರುವ ಆರೋಪವಿದೆ. ಈ ಮಾಜಿ ಶಾಸಕನ ಆಪ್ತನ ಜಾಗದ ವಿಷಯದ ತಕರಾರಿಗೆ ದಕ್ಷ ಅಧಿಕಾರಿ ಸಹಕಾರ ನೀಡಿರಲಿಲ್ಲ. ಜಾಗಕ್ಕಾಗಿ ಕಾನೂನು ಮೀರಿ ತಕರಾರು ವಿಲೇವಾರಿಗೆ ಅಧಿಕಾರಿ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡುವುದಾಗಿ ರಶ್ಮಿ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಲಾಗಿದೆ. ರಶ್ಮಿ ಅವರ ದಿಢೀರ್ ವರ್ಗಾವಣೆಯಿಂದ ಕುಂದಾಪುರದ ಜನ ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಎಂಎಲ್ಎ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ