/newsfirstlive-kannada/media/post_attachments/wp-content/uploads/2025/03/D-J-Chakravarthy-Chandrachud.jpg)
ಬೆಂಗಳೂರು: ಸಿಸಿಎಲ್ ಆಡೋದಕ್ಕೆ ಸಮಯವಿದೆ. ಫಿಲ್ಮ್ ಫೆಸ್ಟಿವಲ್ ಭಾಗವಹಿಸೋದಕ್ಕೆ ಸಮಯ ಇಲ್ಲ ಎಂದು ಕಿಡಿಕಾರಿದ್ದ ಶಾಸಕ ರವಿ ಗಣಿಗ ಮಾತಿಗೆ ಕಿಚ್ಚ ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಅವರು ಖಡಲ್ ಸವಾಲ್ ಹಾಕಿದ್ದಾರೆ. ಚಲನಚಿತ್ರೋತ್ಸವಕ್ಕೆ ಆಹ್ವಾನ ಕೊಡದೇ ಸುದೀಪ್ ಅವರು ಬರೋಕೆ ಹೇಗೆ ಸಾಧ್ಯ ಎಂದು ಸುದೀಪ್ ಆಪ್ತ ಚಂದ್ರಚೂಡ್ ಅವರು ಫೇಸ್ಬುಕ್ ಲೈವ್ ಬಂದು ಮಾತನಾಡಿದ್ದಾರೆ.
ಇದನ್ನೂ ಓದಿ:ಕೊಡಗಿನ ರಶ್ಮಿಕಾ ಮಂದಣ್ಣಗೆ ಬುದ್ಧಿ ಕಲಿಸಲೇಬೇಕು; ಡಿಸಿಎಂ ಬಳಿಕ ಕಾಂಗ್ರೆಸ್ ಶಾಸಕರಿಂದ ಲಾಸ್ಟ್ ವಾರ್ನಿಂಗ್!
ಇತ್ತೀಚಿಗೆ ಬೆಂಗಳೂರಲ್ಲಿ 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಯಾಂಡಲ್ವುಡ್ ತಾರೆಯರೇ ಭಾಗವಹಿಸದಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಮೊನ್ನೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಟ್ಟು, ಬೋಲ್ಟ್ ಹೇಳಿಕೆ ನೀಡಿದ್ದರು. ಇದೇ ವಿಚಾರದ ಬಗ್ಗೆ ಪಪರ-ವಿರೋಧಗಳು ಹುಟ್ಟಿಕೊಂಡಿದ್ದವು. ಇದೀಗ ಮಧ್ಯೆ ಏಕಾಏಕಿ ಫೇಸ್ಬುಕ್ ಲೈವ್ಗೆ ಬಂದ ಕಿಚ್ಚ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಅವರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಮೊದಲು ಡಿಸಿಎಂ ಡಿ.ಕೆ ಶಿವಕುಮಾರ್, ಶಾಸಕ ರವಿ ಗಣಿಗ ಹಾಗೂ ಸಾಧು ಕೋಕಿಲಗೆ ತರಾಟೆ ತೆಗೆದುಕೊಂಡ ಚಕ್ರವರ್ತಿ ಚಂದ್ರಚೂಡ್ ಅವರು, ಶಾಸಕರು ಈ ಹಿಂದೆ ಪತ್ರಕರ್ತರಾಗಿದ್ದರು. ನನ್ನ ಗೆಳೆಯರು ಕೂಡ, ಅವರು ಒಂದಷ್ಟು ಸಿನಿಮಾ ನಟರ ಬಗ್ಗೆ ವ್ಯಂಗ್ಯ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಆದ್ರೆ ಅವರು ಯಾರ ಬಗ್ಗೆ ಮಾತಾಡುತ್ತಿದ್ದೇನೆ ಅಂತ ಹೆಸರನ್ನು ತೆಗೆದುಕೊಳ್ಳಬೇಕಿತ್ತು. ಅಲ್ಲದೇ ಒಂದಿಷ್ಟು ಮಾಹಿತಿಗಳ ಜೊತೆಗೆ ಮಾತಾಡಿದ್ರೆ ಒಂದು ತೂಕ ಬರ್ತಾ ಇತ್ತು. ಆದ್ರೆ ಅವರು ಉತ್ತರಕುಮಾರನ ಪೌರುಷದ ತರ ಹೆಸರನ್ನು ತೆಗೆದುಕೊಳ್ಳದೇ ಲೇವಡಿ ಮಾಡಿದ್ದಾರೆ.
ನೀವು ಯಾರ್ಯಾರ ಬಗ್ಗೆ ಮಾತಾಡಿದ್ದೀರಿ ರವಿ ಗಣಿಗ ಅವರೇ, ರಾಕಿಂಗ್ ಸ್ಟಾರ್ ಅಂತಾರೆ, ಬಾದ್ ಷಾ ಕಿಚ್ಚ ಸುದೀಪ ಅಂತಾರೆ, ರಿಯಲ್ ಸ್ಟಾರ್ ಉಪೇಂದ್ರ ಅಂತಾರೆ, ಡಾ. ಶಿವರಾಜ್ ಕುಮಾರ್ ಸರ್ ಅಂತಾರೆ ನೀವು ಇವರೆಲ್ಲಾ ಪರವಾಗಿ ಮಾತಾಡಿದ್ದೀರಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡಿದ್ವಿ, ಅವರು ಯಾರು ಬಂದಿಲ್ಲ ಅಂತ ಮಾತಾಡಿದ್ದೀರಿ. ನೀವು ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಬ್ಯಾನ್ ಮಾಡಬೇಕು ಅಂತ ಮಾತಾಡುತ್ತೀರಿ ಎಂದು ಕಿಡಿ ಕಾರಿದ್ದಾರೆ.
ನೀವು ಡಿಕೆ ಶಿವಕುಮಾರ್ ಅವರ ಪಕ್ಷದಲ್ಲಿ ಇದ್ದೀರಿ, ಆದ್ರೆ ಡಿಕೆ ಶಿವಕುಮಾರ್ ಅಲ್ಲ. ಅಂಬರೀಶ್ ಅವರ ಜಿಲ್ಲೆಯಿಂದ ಗೆದ್ದು ಬಂದಿದ್ದೀರಿ ಆದ್ರೆ ನೀವು ಅಂಬರೀಶ್ ಅಲ್ಲ. ಮೊದಲ ಸಲ ಶಾಸಕರು ಆಗಿದ್ದೀರಿ, ಇನ್ನೂ ಮಂತ್ರಿಗಳು ಆಗಬೇಕಿದೆ. ಮಾಹಿತಿ ಕೊರತೆ ಇಟ್ಟುಕೊಂಡು ಮಾತಾಡಬಾರದು. ರವಿ ಗಣಿಗ ಅವರೇ ಬ್ಯಾನ್ ಎಂಬ ಪದವನ್ನು ವಾಪಸ್ ತೆಗೆದುಕೊಳ್ಳಬೇಕು. ಕ್ಷಮೆ ಕೇಳಬೇಕು ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಕಿಚ್ಚ ಸುದೀಪ್‌ಗೆ ಆಹ್ವಾನವೇ ಕೊಟ್ಟಿಲ್ವಾ?
2004ರಿಂದ ಇವತ್ತಿನವರೆಗೂ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗಿ ಅವಾರ್ಡ್‌ಗಳನ್ನು ತೆಗೆದುಕೊಂಡಿಲ್ಲ ಅಂದ್ರೆ, 2019ರ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ರು. ಆದರೆ ಅದನ್ನು ತಿರಸ್ಕರಿಸಿಲ್ಲ. ಈ ಹಿಂದೆ ಡಾಕ್ಟರೇಟ್ ಬಂದಾಗ ಸಮಾಜಮುಖಿ ಕೆಲಸ ಮಾಡಿದವರಿಗೆ ಕೊಡಿ ಅಂದ್ರೋ ಈಗಲೂ ಹಾಗೆ. ಈ ಯೋಚನೆ ಹಿಂದೆ ಕಾರಣವಿತ್ತು ಒಂದಿಷ್ಟು ಅವಮಾನವಿತ್ತು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ