/newsfirstlive-kannada/media/post_attachments/wp-content/uploads/2025/03/Chakraborty-Chandrachud-Sudeep-Manager.jpg)
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ನಟ್ಟು, ಬೋಲ್ಟ್ ಹೇಳಿಕೆ ಹಾಗೂ ಸ್ಯಾಂಡಲ್‌ವುಡ್ ನಟ, ನಟಿಯರ ಯುದ್ಧಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಪರ-ವಿರೋಧದ ಚರ್ಚೆಯ ಮಧ್ಯೆ ಕಿಚ್ಚ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಅವರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಬಂದು ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್ ಅವರು ಮಂಡ್ಯ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನು ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ. ಆಮಂತ್ರಣ ಕೊಡದೆ ಸುದೀಪ್ ಅವರು ಹೇಗೆ ಬರೋಕೆ ಸಾಧ್ಯ. ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು ಎಂದು ಕಿಡಿಕಾರಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್, ಶಾಸಕ ರವಿ ಗಣಿಗ ಹಾಗೂ ಸಾಧು ಕೋಕಿಲಗೆ ತರಾಟೆ ತೆಗೆದುಕೊಂಡ ಚಕ್ರವರ್ತಿ ಚಂದ್ರಚೂಡ್ ಅವರು ನಿಮ್ಮದು ಹಿಟ್ಲರ್ ಸಂಸ್ಕೃತಿಯನ್ನು ತೋರಿಸುತ್ತಿದೆ. ಒಂದು ಪಕ್ಷ ಮಾಡೋ ಕಾರ್ಯಕ್ರಮಕ್ಕೆ ಇಂಡಸ್ಟ್ರಿ ಯಾಕೆ ಬರುತ್ತೆ. ಸಾಧು ಕೋಕಿಲ ಅವರು ಕಾಂಗ್ರೆಸ್‌ನಲ್ಲಿ ಇದ್ದಾರೆ ಅಂದ್ರೆ ಬೇರೆಯವರು ಯಾಕೆ ಬರ್ತಾರೆ ಎಂದು ಚಂದ್ರಚೂಡ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಟೈಟ್ ಹೇಳಿಕೆ.. ಪರ ವಿರೋಧದ ಚರ್ಚೆಗೆ ಇಳಿದ ಸ್ಯಾಂಡಲ್‌ವುಡ್
ಡಿ.ಕೆ ಶಿವಕುಮಾರ್ ಅವರಿಗೆ ಸಾಧು ಕೋಕಿಲ ಏನ್ ಹೇಳಿದ್ದಾರೋ ಗೊತ್ತಿಲ್ಲ. ಸಾಧು ಮಾಡಿರೋ ಯಡವಟ್ಟಿಗೆ ಇವತ್ತು ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಯಾಕೆ ದೂರೋದು ಎಂದು ಚಕ್ರವರ್ತಿ ಚಂದ್ರಚೂಡ್ ಕೇಳುತ್ತಿದ್ದಾರೆ.
ಸಾಧು ಕೋಕಿಲ ಹೇಳಿದ್ದೇನು?
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಹ್ವಾನ ಕೊಡದೇ ಇರೋದು ಈಗ ವಿವಾದಕ್ಕೆ ಕಾರಣವಾಗಿದೆ. ಸುದೀಪ್‌ಗೆ ಸರ್ಕಾರ ಆಹ್ವಾನ ಕೊಟ್ಟಿಲ್ವಾ. ಸುದೀಪ್ ಮ್ಯಾನೇಜರ್ ಚಂದ್ರಚೂಡ್ ಮಾತಿಗೆ ನಟ ಸಾಧು ಕೋಕಿಲಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರೋಟೋಕಾಲ್ ಕಾರಣದಿಂದ ದೊಡ್ಡ ನಟರಿಗೆ ಆಹ್ವಾನ ನೀಡಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನ ನೀಡುವುದು ಒಂದಷ್ಟು ಜನಕ್ಕೆ ಮಿಸ್ ಆಗಿರಬಹುದು. ದಿನ ಒಬ್ಬೊಬ್ಬರ ಮಾತಿಗೂ ತಲೆ ಕೆಡಿಸ್ಕೊಂಡು ಕೂರೋಕೆ ಆಗಲ್ಲ ಎಂದು ಸಾಧು ಕೋಕಿಲ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ