ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಾಣ! ಪರೋಪಕಾರಿ ಅಮ್ಮನ ಬಾಲ್ಯದ ಕನಸು ನನಸಾಗುವ ಸಂಭ್ರಮ

author-image
Ganesh
Updated On
ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಾಣ! ಪರೋಪಕಾರಿ ಅಮ್ಮನ ಬಾಲ್ಯದ ಕನಸು ನನಸಾಗುವ ಸಂಭ್ರಮ
Advertisment
  • ಸುಧಾ ಮೂರ್ತಿ ಎಲ್ಲಿ ದೇಗುಲ ನಿರ್ಮಾಣ ಮಾಡ್ತಿದ್ದಾರೆ..?
  • ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಿದ ಸುಧಾ ಮೂರ್ತಿ
  • 1500 ವರ್ಷಗಳ ಇತಿಹಾಸ ಇರುವ ಶಿವ ದೇಗುಲ ಜೀರ್ಣೋದ್ಧಾರ

ಲೋಕೋಪಕಾರಿ ಅಮ್ಮ, ಇನ್ಫೊಸಿಸ್‌ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಅವರು ತಮಿಳುನಾಡಿನ ಕುಗ್ರಾಮ ಒಂದರಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಕುಂಭಕೋಣಂ (Kumbakonam)ನ ಐವನಲ್ಲೂರಿನಲ್ಲಿ ಶಿವನ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಸುಧಾ ಮೂರ್ತಿ ಅವರು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ.

1500 ವರ್ಷಗಳ ಇತಿಹಾಸ

ಇಲ್ಲಿದ್ದ ಶಿವಲಿಂಗಕ್ಕೆ ಸುಮಾರು 1500 ವರ್ಷಗಳ ಇತಿಹಾಸ ಇದೆ. ಇಲ್ಲಿನ ಗ್ರಾಮಸ್ಥರು ಚಿಕ್ಕ ಗುಡಿಯಲ್ಲಿ ಶಿವ, ಪಾರ್ವತಿ, ವಿನಯಗರ್, ಮುರುಗನ್ ಮತ್ತು ನಂದಿಯ ಪುರಾತನ ವಿಗ್ರಹಗಳನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಸರಿಯಾದ ದೇವಾಲಯ ನಿರ್ಮಾಣ ಆಗದನ್ನು ಮನಗಂಡಿದ್ದ ಸುಧಾ ಮೂರ್ತಿ ತಮ್ಮ ಸ್ವಂತ ಖರ್ಚಿನಲ್ಲಿ ದೇವಾಲಯ ನಿರ್ಮಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ನಮ್ಮ ಮದುವೆಗೆ ಕೇವಲ 800 ರೂಪಾಯಿ ಮಾತ್ರ ಖರ್ಚು ಮಾಡಿದ್ದೇವು -ಸುಧಾ ಮೂರ್ತಿ

publive-image

ಆಸೆ ಈಡೇರಲಿದೆ

ಇತ್ತೀಚೆಗೆ ಸುಧಾ ಮೂರ್ತಿಯವರ ನೇತೃತ್ವದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ವಿಧಿವತ್ತಾಗಿ ನಡೆದಿದೆ. ದೇಗುಲವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗುತ್ತದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ರಥೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ನಡೆದಿವೆ.

ಈ ಬಗ್ಗೆ ಮಾತನಾಡಿರುವ ಸುಧಾಮೂರ್ತಿ.. ನಾನು ಚಿಕ್ಕವಳಿದ್ದಾಗ ನನ್ನ ತಾತ ವಿಜಯನಗರ ಸಾಮ್ರಾಜ್ಯದ ಅನೇಕ ಕಥೆಗಳನ್ನು ಹೇಳುತ್ತಿದ್ದರು. ವಿದ್ಯೆ ಕಲಿಸುವುದು, ಇತರರಿಗೆ ಸಹಾಯ ಮಾಡುವುದು, ಕೊಳ, ದೇಗುಲ ಕಟ್ಟುವುದು ಮುಂತಾದ ಕೆಲಸಗಳನ್ನು ಮಾಡಿದರೆ ಮಾತ್ರ ಜೀವನ ಪೂರ್ಣವಾಗುತ್ತದೆ ಎಂದಿದ್ದರು. ಈಗ ಐವನಲ್ಲೂರಿನಲ್ಲಿ ದೇವಸ್ಥಾನ ನಿರ್ಮಿಸುವ ಮೂಲಕ ನನ್ನ ಆಸೆ ಈಡೇರಲಿದೆ ಎಂದಿದ್ದಾರೆ. ಮುಂದಿನ 18 ತಿಂಗಳೊಳಗೆ ಸ್ವಂತ ಖರ್ಚಿನಲ್ಲಿ ಐವನಲ್ಲೂರಿನಲ್ಲಿ ಮಂದಿರ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಕಳೆದ ವಾರ ದೇವಸ್ಥಾನದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದ ಅವರು, ಸಾಂಪ್ರದಾಯಿಕ ಸಂಸ್ಕೃತಿಯಂತೆ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿದರು.

ಇದನ್ನೂ ಓದಿ:ವಾರಕ್ಕೆ 70 ಗಂಟೆ ಕೆಲಸ.. ನಾರಾಯಣ ಮೂರ್ತಿ ಟ್ರೋಲ್ ಮಾಡಿದವರಿಗೆ ಸುಧಾ ಮೂರ್ತಿ ಕೊಟ್ರು ಕೌಂಟರ್‌; ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment