/newsfirstlive-kannada/media/post_attachments/wp-content/uploads/2024/01/SUDHA-MURTHY.jpg)
ನಾವು ನಮ್ಮ ಮದುವೆಗೆ ಕೇವಲ 800 ರೂಪಾಯಿ ಮಾತ್ರ ಖರ್ಚು ಮಾಡಿದ್ದೇವು ಎಂದು ಇನ್ಫೋಸಿಸ್ನ ಸುಧಾ ಮೂರ್ತಿ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, 1978ರಲ್ಲಿ ನಮ್ಮ ಮದುವೆ ನಡೆಯಿತು. ನಮ್ಮ ತಂದೆ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಅಂದುಕೊಂಡಿದ್ದರು. ಆದರೆ ನಾವು ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದೇವು.
ಅಂದು ನಮ್ಮ ಮದುವೆಗೆ ಕೇವಲ 800 ರೂಪಾಯಿ ಖರ್ಚು ಮಾಡಿದ್ದೇವು. ನಾನು 400 ರೂಪಾಯಿ ಖರ್ಚು ಮಾಡಿದ್ದೆ. ಅವರು ಕೂಡ ನಾಲ್ಕು ನೂರು ರೂಪಾಯಿ ಖರ್ಚು ಮಾಡಿದ್ದರು. ಇದರಿಂದ ನಮ್ಮ ತಂದೆ ತುಂಬಾ ಬೇಜಾರು ಮಾಡಿಕೊಂಡಿದ್ದರು. ಮದುವೆಗೆ ನನ್ನ ಮನೆ ಕಡೆಯಿಂದ ಕೇವಲ 6 ಮಂದಿ ಬಂದಿದ್ದರು, ನಾರಾಯಣ ಮೂರ್ತಿ ಕಡೆಯಿಂದ ಅಪ್ಪ-ಅಮ್ಮ ಇಬ್ಬರು ಮಾತ್ರ ಬಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಈಗ ಸೀರೆ, ಮಾಂಗಲ್ಯ ಸರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಾರೆ. ನನಗೆ ನಾರಾಯಣ ಮೂರ್ತಿ 300 ರೂಪಾಯಿ ನೀಡ್ತೇನೆ. ಸೀರೆ ಅಥವಾ ಮಾಂಗಲ್ಯ ಸರ ತೆಗೆದುಕೊಳ್ಳಬಹುದು ಎಂದಿದ್ದರು. ಸೀರೆಗಿಂತ ಮಾಂಗಲ್ಯ ಸೂತ್ರ ಹೆಚ್ಚು ಬಾಳಿಕೆ ಬರಬೇಕು ಅನ್ನೋ ಕಾರಣಕ್ಕೆ ಮಾಂಗಲ್ಯ ಸರವನ್ನು ನಾನು ಆಯ್ಕೆ ಮಾಡಿಕೊಂಡಿದ್ದೆ. ಅದು ದಾರದಲ್ಲಿ ಪೋಣಿಸಿದ್ದ ಮಾಂಗಲ್ಯ ಸೂತ್ರವಾಗಿತ್ತು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ