ಸುಹಾಸ್ ಶೆಟ್ಟಿ ಪ್ರಕರಣ; ಬಿಜೆಪಿ, ಪ್ರತೀಕಾರದ ಆರೋಪಕ್ಕೆ ಸ್ಪೀಕರ್ ಯು.ಟಿ ಖಾದರ್ ಸ್ಪಷ್ಟನೆ

author-image
Bheemappa
ಸುಹಾಸ್ ಶೆಟ್ಟಿ ಪ್ರಕರಣ; ಬಿಜೆಪಿ, ಪ್ರತೀಕಾರದ ಆರೋಪಕ್ಕೆ ಸ್ಪೀಕರ್ ಯು.ಟಿ ಖಾದರ್ ಸ್ಪಷ್ಟನೆ
Advertisment
  • ಘಟನೆ ನಮ್ಮಿಂದ ಆಗಿಲ್ಲವೆಂದು ಹೇಳಿದ್ದ ಫಾಝಿಲ್ ತಂದೆ, ಸಹೋದರರು
  • ಸ್ಥಳೀಯವಾಗಿ ವದಂತಿಗಳಿಂದಲೇ ಉದ್ವಿಗ್ನ ಪರಿಸ್ಥಿತಿಯನ್ನುಂಟು ಮಾಡಿತ್ತು
  • ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಂಡು ಶಾಂತಿಗಾಗಿ ಪ್ರಯತ್ನಿಸಿ

ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಜೀವ ತೆಗೆಯಲಾಗಿದೆ. ಈ ಕೃತ್ಯದ ಹಿಂದೆ ಮತೀಯ ಕಾರಣವಿದೆಯೆಂಬ ವದಂತಿಗಳಿಂದ ಸ್ಥಳೀಯ ಮಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನುಂಟು ಮಾಡಿತ್ತು. ಆಗ ರೌಡಿಗಳ ನಡುವಿನ ಗ್ಯಾಂಗ್ ವಾರ್​ನಿಂದ ಈ ಘಟನೆ ಆಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದೆ. ಜೊತೆಗೆ ಆರೋಪಿಗಳ ಬಂಧನದ ನಂತರವೇ ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ.

ಘಟನೆ ನಡೆದ ಕೂಡಲೇ, ಅದು ಫಾಝಿಲ್ ಹತ್ಯೆಗೆ ಪ್ರತೀಕಾರ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಫಾಝಿಲ್ ತಂದೆ ಮತ್ತು ಸಹೋದರರು ನನಗೆ ಫೋನ್ ಕಾಲ್ ಮಾಡಿ ಈ ಘಟನೆಯಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದರು. ಇದನ್ನು ಈಗಾಲಲೇ ಉಲ್ಲೇಖ ಮಾಡಿದ್ದೆ. ಇದೇ ಸಂದರ್ಭದಲ್ಲಿ ಪೊಲೀಸರು ಕೃತ್ಯ ಎಸಗಿದವರವನ್ನು ಅರೆಸ್ಟ್ ಮಾಡಿದ ನಂತರ ವಿಚಾರಣೆಯ ಮೂಲಕ ಈ ಕೃತ್ಯದಲ್ಲಿ ಯಾರೆಲ್ಲಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂದು ತಿಳಿದು ಬರಲಿದೆ. ಅಪರಾಧಿಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು ಎಂಬುದನ್ನೂ ಸ್ಪಷ್ಟಪಡಿಸಿದ್ದೆ.

ಇದನ್ನೂ ಓದಿ: ಬ್ಯಾಟ್​ ಮುರಿದಿದ್ದಕ್ಕೆ ಕ್ಯಾಚ್ ಔಟ್ ಆದ್ರಾ RCB ಯಂಗ್ ಪ್ಲೇಯರ್ ಜಾಕೋಬ್ ಬೆಥೆಲ್..?

publive-image

ಘಟನೆ ನಡೆದ ಬಳಿಕ, ಆರೋಪಿಗಳ ಬಂಧನಕ್ಕೆ ಮೊದಲು ಪ್ರಕರಣವನ್ನು ಕೋಮು ದೃಷ್ಟಿಯಲ್ಲಿ ಚಿತ್ರೀಕರಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡಿ 2 ಧರ್ಮಗಳ ನಡುವೆ ಗಲಭೆ ಎಬ್ಬಿಸಿ, ರಾಜಕೀಯ ಲಾಭ ಪಡೆಯಲು ಸ್ಥಳೀಯ ನಾಯಕರು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಿಸಿದ್ದೇ ಹೊರತು, ಯಾರ ಪರವಾಗಿ ಆಗಲಿ ಅಥವಾ ಯಾರ ವಿರೋಧವಾಗಿಯೂ ಮಾತನಾಡುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ವಿಫಲವಾದವರು ನಾನು ಹೇಳಿದ್ದನ್ನ ಉದ್ದೇಶ ಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿ ಅಪಪ್ರಚಾರ ಮಾಡುತ್ತಿರುವುದು ಅಜ್ಞಾನದ ಸಂಕೇತವಷ್ಟೇ ಅಲ್ಲ, ಅದು ಜನಪ್ರತಿನಿಧಿಗಳ ಜವಾಬ್ದಾರಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಇಂತಹ ವ್ಯಾಖ್ಯಾನ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಪ್ರಯತ್ನವೇ ಹೊರತು ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಹಾಗಾಗಿ ಇಂತಹ ಕಠಿಣ ಸನ್ನಿವೇಶದಲ್ಲಿ ಎಲ್ಲರೂ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು, ಜವಾಬ್ದಾರಿಯಿಂದ ನಡೆದುಕೊಂಡು ಶಾಂತಿ ಕಾಪಾಡಲು ಯತ್ನಿಸಬೇಕು ಎಂದು ವಿನಂತಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಶಾಂತಿ, ಅಭಿವೃದ್ಧಿ ಬಯಸುವವರಿಗೆ ಸ್ಪಷ್ಟೀಕರಣ ಎಂದು ತಿಳಿಸಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment