ಸುಹಾಸ್ ಶೆಟ್ಟಿ ಕೇಸ್​ನಲ್ಲಿ 8 ಶಂಕಿತರು ವಶಕ್ಕೆ.. ಇವತ್ತು ಪರಮೇಶ್ವರ್​​ ಮಂಗಳೂರು ಭೇಟಿ

author-image
Ganesh
Updated On
ಸುಹಾಸ್ ಶೆಟ್ಟಿ ಕೇಸ್​ನಲ್ಲಿ 8 ಶಂಕಿತರು ವಶಕ್ಕೆ.. ಇವತ್ತು ಪರಮೇಶ್ವರ್​​ ಮಂಗಳೂರು ಭೇಟಿ
Advertisment
  • ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಪ್ರಕರಣ
  • ತನಿಖೆಗಾಗಿ ಐದು ತಂಡಗಳ ರಚಿಸಿದ ಪೊಲೀಸರು
  • ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಪರಂ, ಗುಂಡೂರಾವ್

ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸದ್ಯ ಬಲೆಗೆ ಕೆಲ ಶಂಕಿತ ಆರೋಪಿಗಳು ಬಿದ್ದಿದ್ದಾರೆ. ಈ ನಡುವೆ ಇಂದು ಕರಾವಳಿಗೆ ಗೃಹಸಚಿವರು ಭೇಟಿ ನೀಡ್ತಿರೋದು ಮಹತ್ವ ಪಡೆದಿದೆ.

ಪ್ರಕರಣವನ್ನು ಖಂಡಿಸಿ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯನ್ನ ಬಂದ್ ಮಾಡಿದ್ದು ಉದ್ರಿಕ್ತರ ಗುಂಪು ಬಸ್‌ಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಪರಿಣಾಮ ಈ ಬೆನ್ನಲ್ಲೇ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನ ಏರ್ಪಡಿಸಲಾಗಿತ್ತು. ಅಲ್ಲದೇ ಮಂಗಳೂರು ನಗರಾದ್ಯಂತ 144 ಸೆಕ್ಷನ್ ಜಾರಿಯಾಗಿದೆ. ನಿನ್ನೆಯಿಂದ ಮೇ 6ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆರೋಪಿಗಳ ಪತ್ತೆಗೆ 5 ತಂಡ ರಚನೆ ಮಾಡಲಾಗಿದ್ದು ಶಂಕಿತರನ್ನು ಲಾಕ್ ಮಾಡಲಾಗಿದೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರು, ಉಡುಪಿಯ 4 ಕಡೆ ಪ್ರತೀಕಾರದ ದಾಳಿ; ಉರಿಯೋ ಬೆಂಕಿಗೆ ತುಪ್ಪ!

publive-image

8 ಶಂಕಿತರು ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿ 8 ಜನ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ದುಷ್ಕರ್ಮಿಗಳ ಮಾಹಿತಿ ಪತ್ತೆಯಾಗಿದ್ದು ಪ್ರಮುಖ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

ಡಾ.ಜಿ ಪರಮೇಶ್ವರ್ ಭೇಟಿ

ಇನ್ನು ಇಂದು ಮಂಗಳೂರಿಗೆ ಗೃಹಸಚಿವ ಡಾ.ಜಿ ಪರಮೇಶ್ವರ್ ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಗೃಹಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಂಟಿಯಾಗಿ ಎಡಿಜಿಪಿ ಹಿತೇಶ್, ಕಮಿಷನರ್ ಅನುಪಮ್ ಅಗರ್ವಾಲ್ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಮಂಗಳೂರಿನಲ್ಲೇ ಮತ್ತೊಂದು ತಲ್ವಾರ್ ದಾಳಿ ಯತ್ನ

ನಿನ್ನೆ ಮಂಗಳೂರಿನಲ್ಲೇ ಮತ್ತೊಂದು ತಲ್ವಾರ್ ದಾಳಿ ಯತ್ನ ನಡೆದಿದೆ. ಓರ್ವನ ಮೇಲೆ ತಲ್ವಾರ್‌ನಿಂದ ದಾಳಿಗೆ ವಿಫಲ ಯತ್ನ ನಡೆದಿದೆ. ಪಂಜಿಮೊಗೆರು ಬಳಿ ಇಬ್ಬರು ದುಷ್ಕರ್ಮಿಗಳು ತಲ್ವಾರ್ ಬೀಸಿದ ತಕ್ಷಣ ಬೈಕ್ ಹತ್ತಿ ಯುವಕ ಎಸ್ಕೇಪ್ ಆಗಿದ್ದಾನೆ. ಇದರಿಂದ ಮಂಗಳೂರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

ಒಟ್ಟಾರೆ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ ಕರಾವಳಿಯನ್ನ ಮತ್ತೆ ಉದ್ವಿಘ್ನಗೊಳಿಸಿದೆ. ಸದ್ಯ ಶಂಕಿತ ಆರೋಪಿಗಳು ಲಾಕ್ ಆಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಂತಿಮವಾಗಿ ತನಿಖೆ ಬಳಿಕವೇ ಎಲ್ಲಾ ಅಂತೆ-ಕಂತೆಗಳಿಗೆ ಮುಕ್ತಿ ಸಿಗಲಿದೆ.

ಇದನ್ನೂ ಓದಿ: ಪಾಕ್​ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment