/newsfirstlive-kannada/media/post_attachments/wp-content/uploads/2025/05/suhas1.jpg)
ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಬಂಧನ ಬೆನ್ನಲ್ಲೇ ಪ್ರಾಥಮಿಕ ತನಿಖೆಯಲ್ಲಿ ತಿಳಿದುಕೊಂಡ ಮಾಹಿತಿಯನ್ನು ಮಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಸುಹಾಸ್ ಶೆಟ್ಟಿ ಕೇಸ್ನಲ್ಲಿ 8 ಶಂಕಿತರು ವಶಕ್ಕೆ.. ಇವತ್ತು ಪರಮೇಶ್ವರ್ ಮಂಗಳೂರು ಭೇಟಿ
ಈ ಪ್ರಕರಣದಲ್ಲಿ ಅಬ್ದುಲ್ ಸಫ್ವಾನ್ ಹಾಗೂ 2022 ರಲ್ಲಿ ಜೀವ ಕಳೆದುಕೊಂಡ ಫಾಸಿಲ್ ಸಹೋದರ ಪ್ರಮುಖ ಆರೋಪಿಗಳಾಗಿದ್ದಾರೆ. ಶಾಂತಿಗುಡ್ಡೆದ ನಿವಾಸಿ ಅಬ್ದುಲ್ ಸಫ್ವಾನ್ (27), ನಿಯಾಜ್ (25) ಮೊಹಮ್ಮದ್ ಮುಸ್ಸಾಮಿರ್ ( 32) ಕಲಂದರ್ ಶಫಿ ( 29), ಆದಿಲ್ ಮೆಹರೂಪ್ (27), ನಾಗರಾಜ್ (20), ಮೊಹಮದ್ ರಿಜ್ವಾನ್ (28) ಹಾಗೂ ರಂಜಿತ್ ಬಂಧಿತ ಆರೋಪಿಗಳು.
ಬಂಧನಕ್ಕೆ ಒಳಗಾಗಿರುವ ನಾಗರಾಜ್ ಮತ್ತು ರಂಜಿತ್ ಹೆಸರು ಪ್ರಮುಖ ಗಮನ ಸೆಳೆದಿದೆ. ಇವರು ಕೂಡ ಸುಹಾಸ್ ಶೆಟ್ಟಿ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಅಂತಾ ಪೊಲೀಸರು ಶಂಕಿಸಿದ್ದಾರೆ. ಶಂಕಿತ ನಾಗರಾಜ್ ಚಿಕ್ಕಮಗಳೂರು ಜಿಲ್ಲೆಯ ಕಳಸದ ಕೋಟೆ ಹೊಳೆ ನಿವಾಸಿ. ಮಗನ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಆತನ ಮನೆಯವರು ಬೀಗ ಹಾಕಿ ಹೊರ ಹೋಗಿದ್ದಾರೆ. ಹೀಗಾಗಿ ಕೋಟೆಹೋಳೆ ಗ್ರಾಮದ ನಾಗರಾಜ್ ಮನೆಯ ಹತ್ತಿರ ಪೊಲೀಸರ ನಿಯೋಜನೆ ಮಾಡಲಾಗಿದೆ.
ರಂಜಿತ್ ಮತ್ತು ನಾಗರಾಜ್ ಯಾರು?
ಈ ಬಗ್ಗೆ ಮಾತಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, ನಿಯಾಜ್ ಇಬ್ಬರು ಸ್ನೇಹಿತರಾದ ರಂಜಿತ್ ಹಾಗೂ ನಾಗರಾಜ್ ಚಿಕ್ಕಮಗಳೂರಿನ ಕಳಸದಲ್ಲಿ ವಾಸವಿದ್ದಾರೆ. ರಂಜಿತ್ ಹಾಗೂ ನಾಗರಾಜ್ 15 ದಿನಗಳ ಹಿಂದೆ ಅಬ್ದುಲ್ ಸಫ್ವಾನ್ ಮನೆಯಲ್ಲಿ ವಾಸ ಮಾಡಿದ್ದಾರೆ. ಸಫ್ವಾನ್ ಮನೆಗೆ ಬಂದಿದ್ದ ಇವರು, ಸುಹಾಸ್ ಶೆಟ್ಟಿಯನ್ನು ಫಾಲೋ ಮಾಡಿದ್ದಾರೆ. ಈ ಇಬ್ಬರಿಗೆ ಕೆಲವರು ಸುಹಾಸ್ ಶೆಟ್ಟಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇಲ್ಲಿ ಸಿಕ್ಕ ಖಚಿತ ಆಧಾರದ ಮೇಲೆ ಅಂದು ರಾತ್ರಿ ಸುಹಾಸ್ ಶೆಟ್ಟಿ ಮೇಲೆ ದಾಳಿ ಆಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ