/newsfirstlive-kannada/media/post_attachments/wp-content/uploads/2025/05/Suhas-shetty-Mangalore-1.jpg)
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಪಾತಕಿಗಳು ಅಂದರ್ ಆಗಿದ್ದಾರೆ. ತನ್ನ ಸ್ನೇಹಿತರೊಂದಿಗೆ ಇನ್ನೊವಾ ಕಾರಿನಲ್ಲಿ ಸುಹಾಸ್ ಶೆಟ್ಟಿ ಹೋಗುತ್ತಿದ್ದರು. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಬಳಿ ಮೀನಿನ ಟೆಂಪೋ ಮೂಲಕ ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.
ಡೆಡ್ಲಿ ಅಟ್ಯಾಕ್ ಮಾಡಿದ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಮಂಗಳೂರು ಪೊಲೀಸರು ಈ ಪ್ರಕರಣವನ್ನ ಬೇಧಿಸಿದ್ದಾರೆ. ಸುಹಾಸ್ ಶೆಟ್ಟಿಯನ್ನ ಮುಗಿಸಲು ಪಕ್ಕಾ ಪ್ಲ್ಯಾನ್ ಮಾಡಿ ಕೊಂದ ದುಷ್ಕರ್ಮಿಗಳ ಜಾಲವನ್ನು ಪೊಲೀಸರು ಹೆಕ್ಕಿ ತೆಗೆದಿದ್ದಾರೆ. ಅಟ್ಟಾಡಿಸಿ ಅಟ್ಟಹಾಸ ಮೆರೆದ ಕಿರಾತಕರನ್ನ ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದು, ಸುಹಾಸ್ ಮರ್ಡರ್ ರಹಸ್ಯ ಕೊನೆಗೂ ರಿವೀಲ್ ಆಗಿದೆ.
ಸಿಸಿಟಿವಿ ಮತ್ತು ವಾಹನಗಳ ನಂಬರ್ ಪ್ಲೇಟ್ಗಳ ಮಾಹಿತಿ ಆಧರಿಸಿ ಪೊಲೀಸರು 8 ಜನರನ್ನ ಅರೆಸ್ಟ್ ಮಾಡಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಸುದ್ದಿಗೋಷ್ಟಿಯಲ್ಲಿ ಸುಹಾಸ್ ಶೆಟ್ಟಿ ಮರ್ಡರ್ ಹೇಗಾಯ್ತು ಅನ್ನೋ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಸುಹಾಸ್ ಹತ್ಯೆಗೆ ಪ್ಲಾನ್ ಹೇಗೆ ನಡೆದಿತ್ತು? ಯಾರೆಲ್ಲ ಸಹಾಯ ಮಾಡಿದ್ರು? ಅದೆಷ್ಟು ದಿನದಿಂದ ಹತ್ಯೆಗೆ ಸ್ಕೆಚ್ ರೂಪಿಸ್ತಿದ್ರು ಅನ್ನೋ ಪಿನ್ ಟು ಪಿನ್ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ.
ಸುಹಾಸ್ ಶೆಟ್ಟಿಗೆ ಸ್ಕೆಚ್ ಹಾಕಿದ್ದು 10 ಜನರ ಟೀಮ್!
ಬರೋಬ್ಬರಿ 10 ಜನರ ತಂಡ ಸುಹಾಸ್ ಶೆಟ್ಟಿ ಹತ್ಯೆಗೆ ಪ್ಲಾನ್ ಮಾಡಿತ್ತು. ಈ ಮಾಸ್ಟರ್ ಪ್ಲಾನ್ ಮಾಡಿದ್ದು A1 ಆರೋಪಿ ಅಬ್ದುಲ್ ಸಫ್ವಾನ್. ಸುಹಾಸ್ ಕೊಲೆಗೆ ಸಫ್ವಾನ್ 10 ಜನರ ತಂಡ ಕಟ್ಟಿದ್ದ. ಕ್ರೈಂ ಡೈರಿಯಲ್ಲಿ ಪಳಗಿದ ಪಾತಕಿಗಳನ್ನೇ ತನ್ನ ದುಷ್ಕೃತ್ಯಕ್ಕೆ ರೆಡಿ ಮಾಡಿದ್ದ.
ಸುಹಾಸ್ನನ್ನ ಕೊಲ್ಲೋದಕ್ಕೆ ಅಬ್ದುಲ್ ಸಫ್ವಾನ್ ತಿಂಗಳುಗಟ್ಟಲೇ ಪ್ಲಾನ್ ಮಾಡಿದ್ದ. ಎರಡು ಬಾರಿ ಸುಹಾಸ್ ಶೆಟ್ಟಿ ಹತ್ಯೆಗೂ ಯತ್ನಿಸಿದ್ದ. ಆದ್ರೆ ೡ ಎರಡು ಬಾರಿ ಮರ್ಡರ್ ಯತ್ನ ಫೇಲ್ ಆಗಿತ್ತು. ಆದ್ರೆ ಮೂರನೇ ಬಾರಿ ಪಕ್ಕಾ ಪ್ಲಾನ್ ಮಾಡಿದ್ದ ಅಬ್ದುಲ್ ಸುಹಾಸ್ ಕತೆ ಫಿನಿಶ್ ಮಾಡಿದ್ದಾನೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಮುಗಿಸಲು ಸುಪಾರಿ ಕೊಟ್ಟಿದ್ದೇ ಫಾಸಿಲ್ ಸಹೋದರ.. ಪ್ರತೀಕಾರಕ್ಕಾಗಿ ನಡೆದ ಪ್ಲಾನ್ ಹೇಗಿತ್ತು..?
5 ಲಕ್ಷಕ್ಕೆ ಡೀಲ್ ಮಾಡಿ 3 ಲಕ್ಷ ಅಡ್ವಾನ್ಸ್ ನೀಡಿ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ರೆಡಿ ಮಾಡಲಾಗಿತ್ತು. ಈ ಡೀಲ್ಗೆ ಕಳಸ ಮೂಲದ ನಾಗರಾಜ್, ರಂಜಿತ್ ಸಾಥ್ ನೀಡಿದ್ದರು. ಸುಹಾಸ್ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದವರು ಬುಧವಾರ ಸುರತ್ಕಲ್ನಿಂದ ಬಂದಿದ್ದ ಸುಹಾಸ್ ಮೇಲೆ ನಡು ರೋಡ್ಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ