newsfirstkannada.com

ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಫಿಕ್ಸ್​​! ರಣಕಣದಲ್ಲಿ ಶುರುವಾಗಿದೆ ಸಂಚಲನ; ಯಾರಿಗೆ ಲಾಭ? ಯಾರಿಗೆ ನಷ್ಟ?

Share :

Published March 31, 2024 at 7:50am

Update March 31, 2024 at 7:53am

    2018ರಲ್ಲಿ ಕಾಂಗ್ರೆಸ್​​​ ಜೊತೆ ನೇರ ಕದನ, ದಳಕ್ಕೆ ಲಾಭ!

    ಮಂಡ್ಯ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಜೆಡಿಎಸ್​​

    ನಿಖಿಲ್​ ವಿರುದ್ಧ ಗೆದ್ದು ಬೀಗಿದ್ದ ಸ್ವಾಭಿಮಾನಿ ಸುಮಲತಾ

ಕಳೆದ ಬಾರಿ ಸ್ವಾಭಿಮಾನದ ಅಸ್ತ್ರ. ಈ ಬಾರಿ ನಿಶ್ಯಸ್ತ್ರ. ಹಾಗಂತ ರಣರಂಗಕ್ಕೆ ಬೆನ್ನು ತೋಡಿದ್ರೆ ಹೇಡಿಯ ಲಕ್ಷಣ. ಈ ಪಟ್ಟ ಕಟ್ಟಿಕೊಳ್ಳಲು ಸುಮಲತಾಗೆ ಇಷ್ಟವಿಲ್ಲ. ಇಷ್ಟವಿಲ್ಲ ಅಂದ್ಮೇಲೆ ಎಲೆಕ್ಷನ್​ ನಿಲ್ಲಲೇಬೇಕು. ಹಾಗಾಗಿ ಸುಮಲತಾ ಎಲೆಕ್ಷನ್​ ನಿಲ್ತಿದ್ದಾರೆ. ಲೇಟ್​ ಆ್ಯಂಡ್​ ಲೇಟೆಸ್ಟ್​ ಆಗಿ ಎಂಟ್ರಿ ಕೊಟ್ಟ ರೆಬೆಲ್​ ಲೇಡಿ, ಯಾರಿಗೆ ಕಂಟಕ ತರ್ತಾರೆ ಅನ್ನೋದೇ 2 ಪಕ್ಷಗಳಿಗೂ ಚಿಂತೆ ಶುರುವಾಗಿದೆ.

ಇದು ಯುದ್ಧ. ಮತಕ್ಕಾಗಿ ನಡೆಯುತ್ತಿರುವ ಮಹಾಭಾರತದ ಮಹಾಯುದ್ಧ. ಇಲ್ಲಿ ಗೆದ್ದವನು ಸುಲ್ತಾನ. ಸೋತವನು ಸಾಮಂತ. ಮಂಡಿಯೂರಿದ ಶರಣಾಗತಿ, ಸಾವಿಗೆ ಸಮಾನ. ಮಂಡ್ಯ ಮತ್ತೆ ರಣ ರಣ ಅಂತಿದೆ. ಹೀಗೆ ರಾಜಕಾರಣವನ್ನೇ ಉಸಿರಾಡುವ ಸಕ್ಕರೆನಾಡಲ್ಲಿ ಈ ಬಾರಿ ತ್ರಿಕೋನ ಕದನ ಏರ್ಪಡೋದು ನಿಶ್ಚಿತ. ಈ ತ್ರಿಕೋನವೇ ಯಾರಿಗೆ ಲಾಭ ಅನ್ನೋದು ಅವುಡಕಚ್ಚಿದ ಆತಂಕ.

ಸುಮಲತಾ ಸ್ಪರ್ಧೆಯಿಂದ ಮತ ಸಮೀಕರಣ ಟೆನ್ಶನ್​!

2019ರಲ್ಲಿ ಜಿದ್ದಿಗೆ ಬಿದ್ದು ಗೆದ್ದ ಗಟ್ಟಿಗಿತ್ತಿ ಸುಮಲತಾ, ಬದಲಾದ ರಾಜಕೀಯ ಏದುಸಿರು ಬಿಡುವಂತೆ ಮಾಡಿದೆ. ಬಿಜೆಪಿಯ ಬೆಂಬಲದ ಬಂಧದಲ್ಲಿ ಸಿಲುಕಿದ್ದ ಸ್ವಾಭಿಮಾನಿಗೆ ಶರಣಾತಿ ಆಗುವ ಸ್ಥಿತಿಗೆ ಕಾಲಚಕ್ರ ನೂಕಿತ್ತು. ಆದ್ರೆ, ಚಕ್ರವ್ಯೂಹದಿಂದ ಹೊರಬಂದ ಸುಮಲತಾ, ಮಂಡ್ಯದಲ್ಲಿ ಪಕ್ಷೇತರ ಸಮರ ಸಾರಲು ಸಜ್ಜಾದಂತೆ ಕಾಣಿಸ್ತಿದೆ. ರಾಜಕೀಯ ಜನ್ಮಕೊಟ್ಟ ಮಂಡ್ಯದ ನೆಲದಲ್ಲೇ ನಿಂತು ತಮ್ಮ ನಿರ್ಧಾರಕ್ಕೆ ಅಂಕಿತ ಹಾಕಲಿದ್ದಾರೆ.

ಸುಮಲತಾ ಹೇಳಿದ ಈ ಮಾತೇ ಮಂಡ್ಯ ರಣಕಣದಲ್ಲಿ ಸಂಚಲನ ಎಬ್ಬಿಸಿದೆ.. ಸುಮಲತಾ ಇಟ್ಟ ಈ ಹೆಜ್ಜೆ ಯಾರಿಗೆ ನಷ್ಟ? ಯಾರಿಗೆ ಲಾಭ? ಏನಾಗುತ್ತೆ ಅನ್ನೋ ಚಿತ್ರಣ ಚಂಚಲತೆ ಸೃಷ್ಟಿಸಿದೆ..

ಎರಡೇ ಸೂತ್ರ.. ಗೆಲ್ಲೋದು ಯಾರು?

2018ರಲ್ಲಿ ಕಾಂಗ್ರೆಸ್​​​ ಜೊತೆ ನೇರ ಕದನದಿಂದ ದಳಪತಿಗಳಿಗೆ ಲಾಭ ಆಗಿತ್ತು. ಮಂಡ್ಯ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಜೆಡಿಎಸ್​​ ಗೆದ್ದು ಬೀಗಿತ್ತು. ಆದ್ರೆ, 2019ರಲ್ಲಿ ಜೆಡಿಎಸ್​​ನ ವಿರೋಧಿ ಮತಗಳು ಒಂದಾಗಿತ್ತು. ಕಾಂಗ್ರೆಸ್​​ನ ಒಳ ಏಟು, ಬಿಜೆಪಿಯ ಬಹಿರಂಗ ಬೆಂಬಲದಿಂದ ನಿಖಿಲ್​ ವಿರುದ್ಧ ಸ್ವಾಭಿಮಾನಿ ಹೆಸರಲ್ಲಿ ಸುಮಲತಾ ಗೆದ್ದು ಬೀಗಿದ್ದರು. 2023ಕ್ಕೆ ಮಂಡ್ಯದಲ್ಲಿ ಆಗಿದ್ದು ಕಾಂಗ್ರೆಸ್​​ ವಿರೋಧಿ ಮತಗಳ ವಿಭಜನೆ. ಕಾಂಗ್ರೆಸ್​​​ ವಿರೋಧಿ ಮತಗಳ ಧ್ರುವೀಕರಣಕ್ಕೆ ಬಿಜೆಪಿ ಕೊಕ್ಕೆ ಹಾಕಿತ್ತು. ಆ ಮೂಲಕ ಅದರ ನೇರ ಹೊಡೆತ 8 ಕ್ಷೇತ್ರಗಳ ಪೈಕಿ 1ರಲ್ಲಿ ಮಾತ್ರ ಜೆಡಿಎಸ್​​ ಗೆಲ್ಲುವಂತೆ ಮಾಡಿತ್ತು. ಆದ್ರೆ, ಈ ಬಾರಿ ವಿಭಿನ್ನ ಮತ ಸಮೀಕರಣ ಆಗಲಿದೆ. ಜೆಡಿಎಸ್​​-ಕಾಂಗ್ರೆಸ್​​ ನೇರ ಕದನ ಏರ್ಪಟ್ಟಿದ್ದು, ಇಲ್ಲಿ ಸುಮಲತಾ ಎಂಟ್ರಿ ಆಗ್ತಿದ್ದಾರೆ. ಹೀಗಾಗಿ ಸುಮಲತಾ ವಿಭಜಿಸುವ ಮತಗಳ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: Video: ಮಹಿಳೆಯರನ್ನು ಚುಡಾಯಿಸಿದವನಿಗೆ ಧರ್ಮದೇಟು.. ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಊರವರು

ಇಲ್ಲಿ ಎರಡು ವ್ಯಾಖ್ಯಾನಗಳು ಕ್ಷೇತ್ರದಲ್ಲಿ ಹರಿದಾಡ್ತಿದೆ.. ಒಂದು ಅಂಬರೀಶ್​​ ಬೆಂಬಲಿಗರು ಮೂಲತಃ ಕಾಂಗ್ರೆಸ್​​ ಬೆಂಬಲಿಗರು.. ಈ ಮತಗಳನ್ನ ಸಂಸದೆ ಸುಮಲತಾ ಪಡೆದ್ರೆ, ಜೆಡಿಎಸ್​ಗೆ ಲಾಭ ಆಗಲಿದೆ ಅನ್ನೋ ಲೆಕ್ಕಾಚಾರ. ಎರಡು, ಸದ್ಯ ಬಿಜೆಪಿಯಲ್ಲಿ ಹಲವರು ಸುಮಲತಾ ಬೆಂಬಲಿಗರಿದ್ದಾರೆ.. ಇವರು ಯಾರಿಗೆ ಬೆಂಬಲಿಸ್ತಾರೆ ಅನ್ನೋದು ಕುತೂಹಲ.. ಒಂದ್ವೇಳೆ, ಮೈತ್ರಿಧರ್ಮ ಪಾಲನೆ ಆಗದೇ ಸುಮಲತಾ ಬೆಂಬಲಿಸಿದ್ರೆ, ಕಾಂಗ್ರೆಸ್​​​-ಜೆಡಿಎಸ್​​ ಮಧ್ಯೆ ಸಮಬಲದ ಪೈಪೋಟಿ ಏರ್ಪಡಲಿದೆ.. ಮೈತ್ರಿ ಧರ್ಮ ಪಾಲಿಸಿದ್ರೆ ಚಿತ್ರಣ ರೋಚಕವಾಗಲಿದೆ.

ಒಟ್ಟಾರೆ, ಸುಮಲತಾ ಸ್ಪರ್ಧೆ ಯಾರಿಗೆ ಲಾಭ? ಯಾರಿಗೆ ನಷ್ಟ ಅನ್ನೋ ಲೆಕ್ಕಾಚಾರ ಯಾರಿಗೂ ನಿಲುಕುತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಫಿಕ್ಸ್​​! ರಣಕಣದಲ್ಲಿ ಶುರುವಾಗಿದೆ ಸಂಚಲನ; ಯಾರಿಗೆ ಲಾಭ? ಯಾರಿಗೆ ನಷ್ಟ?

https://newsfirstlive.com/wp-content/uploads/2024/03/sumalatha-7.jpg

Load More