newsfirstkannada.com

ರಾಜಕಾರಣ‌ ಬಿಟ್ಟರೆ ಪುತ್ರನ‌ ರಾಜಕೀಯ ಭವಿಷ್ಯ ಅತಂತ್ರ; ತ್ರಿಶಂಕು ಸ್ಥಿತಿಯಲ್ಲಿ ಸುಮಲತಾ ಅಂಬರೀಶ್..!

Share :

Published April 2, 2024 at 6:51am

Update April 2, 2024 at 6:52am

  ಸುಮಲತಾ ಅಂಬರೀಶ್​ಗೆ ಇರುವುದು ನಾಲ್ಕೇ ಆಫ್ಷನ್

  ಮೈತ್ರಿ ಅಭ್ಯರ್ಥಿ ಪರ ನಿಂತರೆ? ಪ್ಲಸ್, ಮೈನಸ್​ ಏನು?

  ಪಕ್ಷೇತರ ಅಭ್ಯರ್ಥಿಯಾದ್ರೆ? ಪ್ಲಸ್​​ ಏನು? ಮೈನಸ್​ ಏನು?

ನಾಳೆ ರಾಜಕೀಯಕ್ಕೆ ಹೊಸ ಚಿತ್ರಣ ಸಿಗಲಿದೆ. ದಳ ವರ್ಸಸ್​​ ಕಾಂಗ್ರೆಸ್​​ ನೇರ ಹಣಾಹಣಿ ಇರುತ್ತಾ? ಈ ಹಣಾಹಣಿ ಏನಾದ್ರೂ ತ್ರಿಕೋನ ಸ್ಪರ್ಧೆಗೆ ತಿರುಗುತ್ತಾ? ತ್ರಿಕೋನ ಕದನವಾಗಲು ಸುಮಲತಾ ಸ್ಪರ್ಧಿಸಬೇಕು. ಹಾಗಾದ್ರೆ ಸುಮಲತಾ ಸ್ಪರ್ಧಿಸ್ತಾರಾ? ಇಲ್ವಾ? ಸ್ವಾಭಿಮಾನಿಯ ಮುಂದಿನ ನಡೆ ಏನು? ಈ ಪ್ರಶ್ನೆಗಳ ಸುತ್ತವೇ ರಾಜಕೀಯ ಸುತ್ತುತ್ತಿದೆ. ಈ ಸುತ್ತುವ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.

ಸಕ್ಕರೆ ನಾಡಿನ ಸವಿಪಾಕ ಸವಿಯಲು ಸಮರ ನಡೆಯುತ್ತಿದೆ. ಕಳೆದ ಬಾರಿ ಸ್ವಾಭಿಮಾನಿ ಹೆಸರಲ್ಲಿ ಗೆದ್ದು ಬೀಗಿದ ಸುಮಲತಾ ಈ ಬಾರಿ ನಿರ್ಧಾರವೇ ಅತಂತ್ರದಲ್ಲಿ ಸಿಲುಕಿದೆ. ನಾಳೆ ರೆಬಲ್ ಲೇಡಿ ನಿರ್ಧಾರ ಪ್ರಕಟಿಸಲಿದ್ದು, ಕೌಂಡ್ ಡೌನ್ ಶುರುವಾಗಿದೆ. ಮಂಡ್ಯ ನೆಲದಲ್ಲೆ ಅಂತಿಮ ನಿರ್ಧಾರ ಘೋಷಣೆಗೆ ಸಿದ್ಧತೆ ನಡೆಸಿರುವ ಸುಮಲತಾ, ಮುಂದೇನು ಅನ್ನೋ ಚಿಂತೆಗೆ ಬಿದ್ದಿದ್ದಾರೆ.

ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಮಂಡ್ಯದ ಗೌಡ್ತಿ?
ಏಪ್ರಿಲ್ 3 ರಂದು ತಮ್ಮ ನಿರ್ಧಾರ ಪ್ರಕಟಿಸಲು ಸುಮಲತಾ ಮುಂದಾಗಿದ್ದಾರೆ. ಸದ್ಯ ಯಾವ ನಿರ್ಧಾರ ಕೈಗೊಂಡರೇ ರಾಜಕೀಯ ಭವಿಷ್ಯ ಸೂಕ್ತ ಎಂಬ ಯೊಚನೆ ನಡೆಸ್ತಿದ್ದಾರೆ. ಅಷ್ಟಕ್ಕೂ ಸುಮಲತಾ ರಾಜಕೀಯ ನಡೆ ಏನಾಗಲಿದೆ? ಹಾಗಾದ್ರೆ ಅವರ ಮುಂದಿರುವ ಆಫ್ಷನ್​ಗಳೇನು?

ಮೈತ್ರಿ ಅಭ್ಯರ್ಥಿ ಪರ ನಿಂತರೆ? ಪ್ಲಸ್ ಏನು?

 • ಬಿಜೆಪಿ ಸೇರಿದ್ರೆ ಪಕ್ಷದಲ್ಲಿ ಸ್ಥಾನಮಾನ ಸಿಗುವ ಸಾಧ್ಯತೆ
 • ಹೈಕಮಾಂಡ್ ನಾಯಕರ ವಿಶ್ವಾಸವನ್ನ ಮತ್ತಷ್ಟು ಗಟ್ಟಿ
 • ಮುಂದಿನ ದಿನಗಳಲ್ಲಿ ರಾಜ್ಯಸಭಾ or ಪರಿಷತ್​​ ಸ್ಥಾನ
 • ಪುತ್ರನ ಭವಿಷ್ಯಕ್ಕೆ ಹಲವು ಅವಕಾಶ ಸಿಗುವ ವಿಶ್ವಾಸ
 • ಮಂಡ್ಯದಲ್ಲಿ ಬಿಜೆಪಿ ನಾಯಕಿಯಾಗಿ ಬೆಳೆಯುವ ಅವಕಾಶ
 • ಮುಂದೆ ಬಿಜೆಪಿಯಿಂದಲೇ ರಾಜ್ಯ ರಾಜಕಾರಣಕ್ಕೆ ಪ್ರವೇಶ

ಮೈತ್ರಿ ಅಭ್ಯರ್ಥಿ ಪರ ನಿಂತರೆ? ಮೈನಸ್​ ಏನು?

 • ಬಿಜೆಪಿ ಸೇರಿ ಸೈಲೆಂಟ್ ಆದ್ರೆ ಬೆಂಬಲಿಗರು ಅತಂತ್ರವಾಗುವ ಭೀತಿ
 • ಬೆಂಬಲಿಗರು ಮತ್ತು ಆಪ್ತರು ಅಂತರ ಕಾಯ್ದುಕೊಳ್ಳುವ ಸಾಧ್ಯತೆ
 • ಜೆಡಿಎಸ್ ವಿರುದ್ಧ ಸಾಫ್ಟ್ ಕಾರ್ನರ್ ಆಗಬೇಕಾದ ಅನಿವಾರ್ಯತೆ
 • ಈ ಸಾಫ್ಟ್ ನಡೆ ಸುಮಲತಾ ಇಮೇಜ್​ಗೆ ಡ್ಯಾಮೇಜ್ ತರಬಹುದು

ಈ ಬೆಳವಣಿಗೆ ಸಾಧ್ಯವಿಲ್ಲ ಅನ್ನೋದಾದ್ರೆ, ಮೈತ್ರಿಗೆ ಸೆಡ್ಡು ಹೊಡೆಯಬೇಕು. ಸೆಡ್ಡು ಹೊಡೆಯಲು ಮತ್ತೆ ಪಕ್ಷೇತರರಾಗಿ ಕಣಕ್ಕಿಳಿಯಬೇಕು.

ಇದನ್ನೂ ಓದಿ: ಸುಮಲತಾ ‘ಎಚ್ಚರಿಕೆಯ ಹೆಜ್ಜೆ’; ರೆಬಲ್ ಲೇಡಿಯ ಮೌನದ ನಡೆ ಮೈತ್ರಿ ಪಾಳಯಕ್ಕೆ ಟೆನ್ಷನ್, ಟೆನ್ಷನ್..!

ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ಗಟ್ಟಿ ಹೋರಾಟ ಅನ್ನೋದೇ ಸುಮಲತಾಗೆ ಇರೋ ಏಕೈಕ ಪ್ಲಸ್​ ಪಾಯಿಂಟ್​​. ಸುಮಲತಾ ಪಕ್ಷೇತರ ಸ್ಪರ್ಧೆಯಿಂದ ಪ್ಲಸ್​ಗಿಂತ ಮೈನಸ್ಸೇ ಹೆಚ್ಚು. ಬಿಜೆಪಿ ಹೈಕಮಾಂಡ್ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಪಕ್ಷೇತರವಾಗಿ ಸ್ಪರ್ಧಿಸಿದ್ರೂ ಗೆಲುವು ಕಷ್ಟಸಾಧ್ಯ ಎಂಬ ಸತ್ಯದ ಅರಿವು ಸುಮಲತಾರಿಗಿದೆ. ಅಲ್ಲದೆ, ಈಗಾಗಲೇ ಬಿಜೆಪಿ ಜೊತೆ ಮತ್ತು ಹೆಚ್​ಡಿಕೆ ಜೊತೆ ಸಂಬಂಧ ಸುಧಾರಿಸಿಕೊಂಡ ಇಂಡುವಾಳು ಸಚ್ಚಿದಾನಂದ ಸೇರಿ ಹಲವು ಸುಮಲತಾ ಬೆಂಬಲಿಗರು ಅಂತರ ಕಾಯ್ದುಕೊಳ್ಳಲಿದ್ದಾರೆ. ಇದಷ್ಟೇ ಅಲ್ಲ, ಬಿಜೆಪಿ ಸೇರದೆ, ಕಾಂಗ್ರೆಸ್​ ಬೆಂಬಲಿಸದೇ ರಾಜಕೀಯದಿಂದಲೇ ಕಣ್ಮರೆ ಆಗುವ ಭೀತಿಯೂ ಸುಮಲತಾರಿಗಿದೆ.. ಅಕಸ್ಮಾತ್​​ ಫಲಿತಾಂಶದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಾದ್ರೆ ರಾಜಕೀಯವೇ ಅಂತ್ಯ ಆಗುವ ಆತಂಕ ಇದೆ.. ಜೊತೆಗೆ ತನ್ನ ರಾಜಕೀಯ ಭವಿಷ್ಯದ ಜೊತೆ ಪುತ್ರನ‌ ರಾಜಕೀಯ ಭವಿಷ್ಯವೂ ಕಮರಲಿದೆ.

ಅಳೆದುತೂಗಿ ಕೈಗೊಳ್ಳುವ ನಿರ್ಧಾರ ಯಾರಿಗೆ ಹಿತ ತರಲಿದೆ? ಹಳೇ ವಿರೋಧಿ, ಹೊಸ ಮಿತ್ರ ದಳಕ್ಕೆ ಶಾಕ್​ ನೀಡ್ತಾರಾ? ಕಳೆದ ಬಾರಿ ಒಳೇಟು ಕೊಟ್ಟು ಬಲ ತುಂಬಿದ್ದ ಹಸ್ತಕ್ಕೆ ಋಣ ಸಂದಾಯ ಮಾಡ್ತಾರ? ಬಿಜೆಪಿ ವಿಶ್ವಾಸ ಉಳಿಸಿಕೊಳ್ತಾರಾ? ಒಟ್ಟಾರೆ ಸುಮಲತಾ ಕೈಗೊಳ್ಳುವ ನಿರ್ಧಾರದತ್ತ ರಾಜ್ಯ ರಾಜಕೀಯವೇ ಎದುರು ನೋಡ್ತಿದೆ.

ವಿಶೇಷ ವರದಿ: ನಂದೀಶ್​, ನ್ಯೂಸ್​ಫಸ್ಟ್​, ಮಂಡ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕಾರಣ‌ ಬಿಟ್ಟರೆ ಪುತ್ರನ‌ ರಾಜಕೀಯ ಭವಿಷ್ಯ ಅತಂತ್ರ; ತ್ರಿಶಂಕು ಸ್ಥಿತಿಯಲ್ಲಿ ಸುಮಲತಾ ಅಂಬರೀಶ್..!

https://newsfirstlive.com/wp-content/uploads/2024/04/Sumalatha-Ambareesh-1.jpg

Load More