/newsfirstlive-kannada/media/post_attachments/wp-content/uploads/2023/08/Sumalatha-Ambarish.jpg)
ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧಿಸೋದು ಫೈನಲ್ ಆಗಿದೆ. ಆದ್ರೆ ತಾವೇ ಸ್ಪರ್ಧಿಸಬೇಕು ಅನ್ನೋದು ಸುಮಲತಾ ಹಂಬಲ. ಹಾಗೇನಾದ್ರೂ ಬಿಜೆಪಿಯಿಂದ ಅವರು ಸ್ಪರ್ಧಿಸಿದ್ರೆ ಈ ಬಾರಿ ಸೋಲೋ ಸಾಧ್ಯತೆ ಇತ್ತಂತೆ. ಹಾಗಂತ ರಾಜ್ಯ ಬಿಜೆಪಿ ನಾಯಕರೇ ವರದಿ ನೀಡಿರೋದು ಆಶ್ಚರ್ಯ ಮೂಡಿಸಿದೆ. ಇಷ್ಟಾದ್ರೂ ಮಂಡ್ಯ ನಂದೇ ಅಂತ ಟಿಕೆಟ್ಗಾಗಿ ಸಂಸದೆ ಸುಮಲತಾ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯ ನಾಯಕರನ್ನು ಸಂಪರ್ಕ ಮಾಡದೇ ನೇರವಾಗಿ ಹೈಕಮಾಂಡ್ ಮನೆಗೆ ಎಡತಾಕುತ್ತಿದ್ದಾರೆ.
ರಾಜ್ಯ ಬಿಜೆಪಿ ನಾಯಕರನ್ನ ಡೋಂಟ್ ಕೇರ್ ಎಂದ ಸಂಸದೆ
ಮಂಡ್ಯ ಲೋಕ ಟಿಕೆಟ್ಗಾಗಿ ಪಟ್ಟು ಹಿಡಿದಿರುವ ಸುಮಲತಾ ಬಿಜೆಪಿ ಹೈಕಮಾಂಡ್ ನಾಯಕರ ಮೊರೆಹೋಗಿದ್ದಾರೆ. ಟಿಕೆಟ್ ವಿಚಾರಕ್ಕೆ ರಾಜ್ಯ ನಾಯಕರಾದ ಬಿಎಸ್ವೈ, ವಿಜಯೇಂದ್ರ, ಆರ್ ಅಶೋಕ್ ಭೇಟಿ ಮಾಡದೇ ನೇರವಾಗಿ ಹೈಕಮಾಂಡ್ ನಾಯಕರನ್ನ ಮಾತ್ರ ಭೇಟಿ ಮಾಡ್ತಿದ್ದಾರೆ. ಇದು ರಾಜ್ಯ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.
ಸುಮಲತಾಗೆ ಟಿಕೆಟ್ ನೀಡಿದ್ರೆ ಸೋಲ್ತಾರೆ ಎಂಬ ವರದಿ
ಇನ್ನು, ಸಂಸದೆ ಸುಮಲತಾಗೆ ಈ ಹಿಂದಿನ ಚುನಾವಣೆಯಲ್ಲಿ ಇದ್ದ ಮತದಾರರ ಬೆಂಬಲ ಈಗ ಇಲ್ಲ ಅಂತಾನೇ ಹೇಳಲಾಗ್ತಿದೆ. ಅಲ್ಲದೆ ಮೊದಲು ಜೊತೆಗಿದ್ದ ಪರಮಾಪ್ತ ಇಂಡುವಾಳು ಸಚ್ಚಿದಾನಂದ ಕೂಡ ಕೇಸರಿ ಶಾಲು ಧರಿಸಿ ಸುಮಲತಾರಿಂದ ದೂರ ಸರಿದಿದ್ದಾರೆ. ಈ ನಡುವೆ ಸುಮಲತಾಗೆ ಟಿಕೆಟ್ ನೀಡಿದ್ರೆ ಅವರು ಸೋಲ್ತಾರೆ ಅಂತ ರಾಜ್ಯ ನಾಯಕರು ವರದಿ ನೀಡಿದ್ದಾರೆ. ಮಂಡ್ಯ ಲೋಕಸಭೆ ಟಿಕೆಟ್ಗಾಗಿ ಪಟ್ಟು ಬಿಡದ ಸ್ವಾಭಿಮಾನಿ ಸುಮಲತಾ ಬಿಜೆಪಿ ಹೈಕಮಾಂಡ್ ನಾಯಕರನ್ನೇ ನೇರವಾಗಿ ಭೇಟಿಯಾಗಿ ಒತ್ತಡ ಹೇರುತ್ತಿದ್ದಾರೆ. ಟಿಕೆಟ್ ವಿಚಾರವಾಗಿ ರಾಜ್ಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದ ಸುಮ ಅವರನ್ನು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಟಿಕೆಟ್ ವಿಚಾರಕ್ಕೆ ಇದುವರೆಗೂ ರಾಜ್ಯ ನಾಯಕರನ್ನ ಸುಮಲತಾ ಭೇಟಿಯಾಗಿಲ್ಲ. ಬಿ.ಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಆರ್. ಅಶೋಕ್ ಭೇಟಿ ಮಾಡದೆ ನೇರವಾಗಿ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಸುಮಲತಾರ ಈ ನಡೆಗೆ ರಾಜ್ಯ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಲತಾಗೆ ಟಿಕೆಟ್ ನೀಡಿದ್ರೆ ಸೋಲ್ತಾರೆ ಅಂತ ರಾಜ್ಯ ಬಿಜೆಪಿ ನಾಯಕರು ವರದಿ ನೀಡಿದ್ದಾರೆ.
ಇದೆಲ್ಲದರ ನಡುವೆ ಮಂಡ್ಯ ನಂದೇ ಅಂತ ಬಿಜೆಪಿ ಟಿಕೆಟ್ಗಾಗಿ ಸಂಸದೆ ದೆಹಲಿಯಲ್ಲಿ ಕೇಸರಿ ಹೈಕಮಾಂಡ್ ಭೇಟಿ ಮಾಡ್ತಿದ್ದಾರೆ. ಆದ್ರೆ ಅವರಿಗೆ ಟಿಕೆಟ್ ಸಿಗೋದು ಬಹುತೇಕ ಡೌಟ್. ಯಾಕಂದ್ರೆ ಈ ಬಾರಿ ಸುಮಲತಾ ಬಿಜೆಪಿಯಿಂದ ಸ್ಪರ್ಧಿಸಿದ್ದರೆ ಗೆಲ್ಲುವ ಸಾಧ್ಯತೆ ಇರಲಿಲ್ಲ ಅನ್ನೋ ಮಾತು ಕೇಳಿಬರ್ತಿದೆ. ಮಾತ್ರವಲ್ಲದೆ ಒಂದ್ವೇಳೆ ಬಿಜೆಪಿ ಟಿಕೆಟ್ ಸಿಗದಿದ್ರೆ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳ್ತಿದ್ದ ಸುಮಲತಾ ಸದ್ಯ ಅದರಿಂದಲೂ ಹಿಂದೆ ಸರಿದಿದ್ದಾರೆ. ಇನ್ನು ಚುನಾವಣೆ ಘೋಷಣೆಯಾದ್ರೂ ಸುಮಲತಾ ಮಂಡ್ಯದಲ್ಲಿ ಕಾಣಿಸಿಕೊಳ್ತಿಲ್ಲ. ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಜೆಡಿಎಸ್‌ನಿಂದ ಅಭ್ಯರ್ಥಿ ಹಾಕಿದ್ರೆ ಮೈತ್ರಿ ಧರ್ಮ ಪಾಲನೆ ಎಂದಿರುವ ಸುಮಲತಾ ಈಗಲೂ ಸೈಲೆಂಟ್ ಆಗಿದ್ದಾರೆ. ಹಾಗಾದ್ರೆ ಸುಮಲತಾ ಮುಂದಿನ ನಡೆಯೇನು? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ