/newsfirstlive-kannada/media/post_attachments/wp-content/uploads/2024/11/SUMALATH-ON-NIKHIL.jpg)
ಒಂದು ಕಾಲದಲ್ಲಿ ಮಂಡ್ಯದ ಲೋಕಸಭಾ ಅಖಾಡದಲ್ಲಿ ಎದುರಾಳಿಗಳಾದವರು ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ. 2019ರ ಲೋಕಸಭಾ ಚುನಾವಣೆ ವೇಳೆ ಮಂಡ್ಯ ರಣಕಣ ಕಾವು ಪಡೆದುಕೊಂಡಿತ್ತು. ಇಂಡಿಯಾದ ಎಲ್ಲಾ ಕ್ಷೇತ್ರಗಳು ಬಿಟ್ಟರೆ ಮಂಡ್ಯ ಒಂದೇ ಇದೆಯೆನೋ ಅನ್ನುವ ಮಟ್ಟಕ್ಕೆ ಅಖಾಡ ಕಾವು ಪಡೆದುಕೊಂಡಿತ್ತು.
ಈ ಐದು ವರ್ಷಗಳಲ್ಲಿ ಮಂಡ್ಯದ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅಂದು ಪ್ರಚಂಡ ಶತ್ರುಗಳಾದವರು ಇಂದು ಒಂದೇ ಮಿತ್ರಪಕ್ಷದಲ್ಲಿದ್ದಾರೆ. ಒಬ್ಬರ ಸೋಲಿಗೆ ಒಬ್ಬರು ಮರುಕಪಡುವ ಮಟ್ಟಕ್ಕೆ ಬಂದಿದ್ದಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ವಿಚಾರವಾಗಿ ಸುಮಲತಾ ಮಾತನಾಡಿದ್ದಾರೆ.
ಇದನ್ನೂ ಓದಿ: ನಿಖಿಲ್ಗೆ ಬರಬೇಕಾಗಿದ್ದ ವೋಟು ಟರ್ನ್ ಆಗಿದ್ದು ಎಲ್ಲಿ? ಮೈತ್ರಿಯೇ ಮುಳುವಾಯ್ತಾ ಕುಮಾರಣ್ಣನ ಪುತ್ರನಿಗೆ ?
ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್, ಉಪ ಚುನಾವಣೆ ಬಂದಾಗ ರೂಲಿಂಗ್ ಪಾರ್ಟಿ ಗೆಲ್ಲೋದು ಸಹಜ. ಇದನ್ನು ನೋಡುತ್ತಾ ಬಂದಿದ್ದೇವೆ.ಯಾವುದೇ ಪಾರ್ಟಿ ಇರಲಿ, ಗೆಲ್ಲಬೇಕು ಅನ್ನೋ ಉದ್ದೇಶ ಇಟ್ಟುಕೊಂಡೇ ಹೋರಾಡುತ್ತಾರೆ. ನಿಖಿಲ್ ಸೋಲಿನ ಬಗ್ಗೆ ನಾನೇನು ರಿಯಾಕ್ಷನ್ ಕೊಡಲು ಇಷ್ಟಪಡುವುದಿಲ್ಲ, ನಿಖಿಲ್ ಇನ್ನೂ ಯುವಕ, ಒಳ್ಳೆಯ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದಷ್ಟೇ ಸುಮಲತಾ ಅಂಬರೀಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ