newsfirstkannada.com

ಕಾಂಗ್ರೆಸ್ಸಿನಿಂದಲೇ ಮಂಡ್ಯದಿಂದ ಸ್ಪರ್ಧೆ ಮಾಡ್ತಾರಾ ಸುಮಲತಾ? ಈ ಬಗ್ಗೆ ಅಂಬಿ ​ಪತ್ನಿ ಏನಂದ್ರು?

Share :

Published January 25, 2024 at 8:02pm

  ಕರ್ನಾಟಕದಲ್ಲಿ ಈಗ ಮಂಡ್ಯ ಲೋಕಸಭಾ ಕ್ಷೇತ್ರದ್ದೇ ಸದ್ದು!

  ಕಾಂಗ್ರೆಸ್​ನಿಂದಲೇ ಸ್ಪರ್ಧೆ ಮಾಡ್ತಾರಾ ಸುಮಲತಾ ಅಂಬರೀಶ್​?

  ಬಿಜೆಪಿಯಿಂದ ಟಿಕೆಟ್​ ಸಿಗೋದರ ಬಗ್ಗೆ ಏನಂದ್ರು ಅಂಬಿ ಪತ್ನಿ?

ಮಂಡ್ಯ: ಬಿಜೆಪಿ, ಜೆಡಿಎಸ್​ ಮೈತ್ರಿಯಾದ ಕಾರಣ ಮಂಡ್ಯ ಟಿಕೆಟ್​ ವಿಚಾರಕ್ಕೆ ಕಗ್ಗಂಟು ಮುಂದುವರಿದಿದೆ. ಈ ಸಲ ಸುಮಲತಾ ಸ್ಪರ್ಧೆ ಖಚಿತ ಎಂದು ಗೊತ್ತಾಗಿದೆ. ಹೀಗಾಗಿ ಜೆಡಿಎಸ್‌ಗೆ ಟೆನ್ಷನ್‌ ಡಬಲ್​​​ ಆಗಿದ್ದು, ಈ ಬಗ್ಗೆ ಭಾರೀ ಚರ್ಚೆ ನಡೆದಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಆಗಿದ್ದು, ಸೋತ ಕಣದಲ್ಲೇ ಗೆಲ್ಲಲು ಕುಮಾರಸ್ವಾಮಿ ಅಗತ್ಯತೆ ಅಭಿಪ್ರಾಯ ವ್ಯಕ್ತವಾಗಿದೆ. ಆದ್ರೆ, ಕಳೆದ ಬಾರಿ ಸುಮಲತಾ ಪರವಿದ್ದ ಅನುಕಂಪ, ನಿಖಿಲ್​​ ಪರ ತಿರುಗಿದೆ ಅನ್ನೋ ಅಭಿಪ್ರಾಯ ಕ್ಷೇತ್ರದಲ್ಲಿ ಕಾಣಿಸ್ತಿದ್ದು, ನಿಖಿಲ್‌ಗೆ ಮತ್ತೆ ಕಣಕ್ಕಿಳಿಸಲು ಹೆಚ್‌ಡಿಕೆ ಪ್ಲಾನ್‌ ರೂಪಿಸಿದ್ದಾರೆ. ಈ ಮಧ್ಯೆ ತನ್ನ ಸ್ಪರ್ಧೆ ಬಗ್ಗೆ ಸುಮಲತಾ ಅಂಬರೀಶ್​ ಮಾತಾಡಿದ್ದಾರೆ.

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ನನಗೆ ಬಿಜೆಪಿಯಿಂದ ಟಿಕೆಟ್​ ಸಿಗಲಿದೆ ಅನ್ನೋ ನಂಬಿಕೆ ಇದೆ. ನಮಗೂ ನಂಬಲರ್ಹ ಮೂಲಗಳು ಇವೆ. ದೊಡ್ಡವರಿಂದಲೇ ನನಗೆ ಟಿಕೆಟ್​ ಸಿಗೋ ಭರವಸೆ ಸಿಕ್ಕಿದೆ. ನಾನು ಬಿಜೆಪಿ, ಜೆಡಿಎಸ್​​​ ಮೈತ್ರಿ ಬಗ್ಗೆ ಕಾಮೆಂಟ್​ ಮಾಡಲ್ಲ ಎಂದರು.

ಬಿಜೆಪಿಯಿಂದ ಟಿಕೆಟ್​ ಸಿಗದೆ ಹೋದರೆ ಕಾಂಗ್ರೆಸ್​ ಸೇರ್ತೀರಾ? ಅನ್ನೋ ಬಗ್ಗೆ ಮಾತಾಡಿದ ಸುಮಲತಾ ಹೀಗೆಂದರು. ನನಗೆ ಕಾಂಗ್ರೆಸ್​ನಲ್ಲಿ ಒಳ್ಳೆಯ ಸ್ನೇಹಿತರು ಇದ್ದಾರೆ. ಅಲ್ಲಿ ಇರೋರು ಎಲ್ಲರೂ ಅಂಬರೀಶ್​ ಅವರ ಸ್ನೇಹಿತರೇ. ಕಾಂಗ್ರೆಸ್​ ಸೇರುವಂತೆ ನನಗೆ ಹಲವರು ಕೇಳಿಕೊಂಡಿದ್ದಾರೆ. ನಿಮ್ಮ ಪರ ನಾವು ನಿಲ್ಲುತ್ತೇವೆ ಎನ್ನುತ್ತಿದ್ದಾರೆ. ಅಂತಹ ಸಂದರ್ಭ ಬಂದಾಗ ನಿಮಗೆ ಹೇಳುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್ಸಿನಿಂದಲೇ ಮಂಡ್ಯದಿಂದ ಸ್ಪರ್ಧೆ ಮಾಡ್ತಾರಾ ಸುಮಲತಾ? ಈ ಬಗ್ಗೆ ಅಂಬಿ ​ಪತ್ನಿ ಏನಂದ್ರು?

https://newsfirstlive.com/wp-content/uploads/2023/11/Sumalatha.jpg

Load More