newsfirstkannada.com

ಮಂಡ್ಯ ರಾಜಕೀಯಕ್ಕೆ ಬಿಗ್​ ಟ್ವಿಸ್ಟ್​​; ಸುಮಲತಾ ಸಪೋರ್ಟ್​​ ಜೆಡಿಎಸ್​​​ಗಾ ಕಾಂಗ್ರೆಸ್ಸಿಗಾ..?

Share :

Published April 25, 2024 at 6:15am

    ಬಹಿರಂಗ ಪ್ರಚಾರಕ್ಕೆ ತೆರೆಬಿದ್ದರೂ ತಲೆಹಾಕದ ಸುಮಲತಾ

    ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬಾರದ ರೆಬೆಲ್ ಲೇಡಿ..!

    ಸುಮಲತಾ ಸೈಲೆಂಟ್ ಸೂತ್ರವೇ ಕಾಂಗ್ರೆಸ್​ಗೆ ಬಿಗ್ ಅಸ್ತ್ರ

ಮಂಡ್ಯ: ಬಹಿರಂಗ ಪ್ರಚಾರ ಕೊನೆಯಾಗಿದ್ದಾಯ್ತು. ಅಬ್ಬರವೆಲ್ಲಾ ತಣ್ಣಗಾಗಿದ್ದೂ ಆಯ್ತು. ಆದ್ರೂ ಮಂಡ್ಯ ರಣಕಣಕ್ಕೆ ಸುಮಲತಾ ಯಾಕೆ ಬರ್ಲಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಗ್ಲೇ ಇಲ್ಲ. ನಾಳೆ ಮತದಾನ. ಸುಮಲತಾ ಹಿಂಗೆಲ್ಲಾ ಸೈಲೆಂಟಾಗಿ ಕೂತಿದ್ದು ಮಂಡ್ಯ ವಿಚಾರದಲ್ಲಿ ಯಾರಿಗೆ ಪ್ಲಸ್ ಆಗುತ್ತೆ, ಯಾರಿಗೆ ಮೈನಸ್ ಆಗುತ್ತೆ ಅನ್ನೋದೇ ಕುತೂಹಲ.

ಲೋಕಸಭಾ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಕಡೇ ದಿನದವರೆಗೂ ಸುಮಲತಾ, ಮಂಡ್ಯದತ್ತ ತಲೆಯೇ ಹಾಕಿಲ್ಲ. ಮೈತ್ರಿ ಪರ ಪ್ರಚಾರ ಮಾಡಬೇಕಿದ್ದ ಸುಮಲತಾ, ನಿರೀಕ್ಷೆಯಂತೆ ದೂರವೇ ಉಳಿದು ರಾಜಕೀಯ ದಾಳ ಉರುಳಿಸಿದ್ದಾರೆ. ರೆಬೆಲ್ ಲೇಡಿಯ ಈ ಆಟಕ್ಕೆ ಬೆಂಬಲಿಗರು ಮತ್ತು ಆಪ್ತರಲ್ಲಿ ಗೊಂದಲ ಮುಂದುವರೆದಿದೆ. ಬಿಜೆಪಿಗೆ ಸೇರಿದ್ದರೂ ಅಂತರ ಕಾಯ್ದುಕೊಂಡಿದ್ದ, ಸುಮಲತಾ ಸ್ವಕ್ಷೇತ್ರ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ.

ಪ್ರಚಾರಕ್ಕೆ ರೆಬೆಲ್ ಲೇಡಿ ಚಕ್ಕರ್​

ಕ್ಷೇತ್ರದ 6 ತಾಲೂಕಿನಲ್ಲಿ ಮೈತ್ರಿ ಸಮಾವೇಶಗಳು ನಡೆದ್ರೂ ಸುಮಲತಾ ಮೇಡಂ ಗೈರಾಗಿದ್ದಾರೆ. ಪ್ರತ್ಯೇಕವಾಗಿಯೂ ಮೈತ್ರಿ ಪರ ಮತ ಕೇಳದೆ ಸುಮಲತಾ ನಿಗೂಢ ಹೆಜ್ಜೆ ಇರಿಸಿದ್ದಾರೆ. ದಳಪತಿಗಳ ಮೇಲಿನ ಹಳೇ ದ್ವೇಷ ಇನ್ನೂ ಮರೆತಿಲ್ವಾ ಅನ್ನೋ ಪ್ರಶ್ನೆಗಳು ಕ್ಷೇತ್ರದಲ್ಲಿ ಹರಿದಾಡ್ತಿದೆ. ಖುದ್ದು ಮಾಜಿ ಸಿಎಂ ಹೆಚ್​ಡಿಕೆ ಮನೆಗೆ ಭೇಟಿ ಬಳಿಕವೂ ಪ್ರಚಾರಕ್ಕೆ ಸಂಸದೆ ಮನಸ್ಸು ಮಾಡಿಲ್ಲ. ಸುಮಲತಾ ಅವರ ಈ ನಿಲುವು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಸುಮಲತಾ ಸೈಲೆಂಟ್​​ ಆಗ್ತಿದ್ದಂತೆ ಎರಡು ಪಕ್ಷಗಳಲ್ಲೂ ಮತಕ್ಕಾಗಿ ಕಸರತ್ತು ಆರಂಭ ಆಗಿದೆ. ಸಚಿವ ಚಲುವರಾಯಸ್ವಾಮಿ, ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಲ್ಲ. ಅಂಬರೀಶ್ ಅಭಿಮಾನಿಗಳು ನೂರಕ್ಕೆ ನೂರು ನಮ್ಮ ಪರ ಇರ್ತಾರೆ ಅಂತ ಹೇಳಿದ್ದಾರೆ. ಅಲ್ಲದೆ, 2019ರ ಚುನಾವಣೆಯಲ್ಲಿ ದಳದ ಜೊತೆ ಮೈತ್ರಿಯಿದ್ರೂ ತಾವು ಸೈಲೆಂಟ್​ ಆಗಿದ್ದನ್ನ ಸುಮಲತಾ ಬೆಂಬಲಿಗರನ್ನ ನೆನಪಿಸಿದ್ದಾರೆ.

ಆದ್ರೆ, ಜೆಡಿಎಸ್​​​ ಉಪ ವರಿಷ್ಠ, ಮಂಡ್ಯ ಜೆಡಿಎಸ್​​​ ಅಭ್ಯರ್ಥಿ ಹೆಚ್​.ಡಿ.ಕುಮಾರಸ್ವಾಮಿ ಅವರ ಮಂಡಿಸುವ ವಾದವೇ ಬೇರೆ. ಸುಮಲತಾ ಬಿಜೆಪಿ ಸೇರಿರೋದ್ರಿಂದ ತಮಗೆ ಬೆಂಬಲ ನೀಡಿದಂತೆ ಅನ್ನೋದು ಹೆಚ್​ಡಿಕೆ ವ್ಯಾಖ್ಯಾನ. ಒಟ್ಟಾರೆ, ಮಂಡ್ಯ ರಾಜಕಾರಣ ತಂತ್ರ-ಮಂತ್ರ ಎಂದಿನಂತೆ ನಿಗೂಢವಾಗಿದೆ. ಯಾರ ಪರ ಹೇಗೆ ಒಲವು ವ್ಯಕ್ತ ಆಗುತ್ತೆ ಅನ್ನೋದು ಕಾಲವೇ ಉತ್ತರ ನೀಡಲಿದೆ.

ಇದನ್ನೂ ಓದಿ: ಏಪ್ರಿಲ್‌ 26 ಚುನಾವಣೆ; ಮತದಾನದ ದಿನ ಯಾರಿಗೆಲ್ಲಾ ಕಡ್ಡಾಯ ರಜೆ ಇದೆ? ತಪ್ಪದೇ ಸ್ಟೋರಿ ಓದಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ರಾಜಕೀಯಕ್ಕೆ ಬಿಗ್​ ಟ್ವಿಸ್ಟ್​​; ಸುಮಲತಾ ಸಪೋರ್ಟ್​​ ಜೆಡಿಎಸ್​​​ಗಾ ಕಾಂಗ್ರೆಸ್ಸಿಗಾ..?

https://newsfirstlive.com/wp-content/uploads/2024/03/Siddu_Sumalatha.jpg

Load More