/newsfirstlive-kannada/media/post_attachments/wp-content/uploads/2025/03/SUMALATHA_DARSHAN.jpg)
ಬೆಂಗಳೂರು: ಇನ್ಸ್ಟಾದಲ್ಲಿ ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅವರನ್ನು ದರ್ಶನ್ ಅವರು ಅನ್ಫಾಲೋ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುಮಲತಾ ಅವರು ತಮ್ಮ ಇನ್ಸ್ಟಾದಲ್ಲಿ ಸರಣಿ ಸ್ಟೇಟಸ್ಗಳನ್ನ ಬೇಸರದಲ್ಲೇ ಶೇರ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ ಎನ್ನಬಹುದು. ಆದರೆ ಇದು ಇಂತಹವರಿಗೆ ಹೇಳಿದ್ದಾರೆ ಎನ್ನುವುದು ಮಾತ್ರ ನಿಖರವಾಗಿಲ್ಲ.
ಸುಮಲತಾ ಅವರ ಇನ್ಸ್ಟಾಗ್ರಾಮ್ ಪೋಸ್ಟ್ನ ಸ್ಟೇಟಸ್ಗಳನ್ನು ಗಮನಿಸಿದರೆ ಬೇಸರದಿಂದಲೇ ಮಾಡಿದ್ದಾರೆ ಎಂದು ಅನಿಸುತ್ತದೆ. ದರ್ಶನ್ ಅನ್ಫಾಲೋ ಮಾಡಿದ ಬೆನ್ನಲ್ಲೇ ಪೋಸ್ಟ್ ಮಾಡಿರುವುದು ಸದ್ಯಕ್ಕೆ ಹೆಚ್ಚು ಚರ್ಚೆಯ ವಿಷಯವಾಗಿದೆ. ಆದರೆ ಇಂತವರಿಗೆ ಎಂಬುದು ಸ್ಪಷ್ಟವಾಗಿಲ್ಲ. ಇಂದು ನೀವು ಏನ್ ಆಗಿದ್ದೀರಿ ಗೊತ್ತಾಗಲು, ಈ ಹಿಂದೆ ನೋವನ್ನು ಎಷ್ಟು ಬಾರಿ ಶಕ್ತಿಯಾಗಿ ಚೇಂಜ್ ಮಾಡಿದ್ರಿ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಸ್ಟೇಟಸ್ ಒಂದರಲ್ಲಿ ಹೇಳಿದ್ದಾರೆ.
ಇನ್ನೊಂದರಲ್ಲಿ ನೀವು ನಿಮ್ಮ ಹೃದಯದಷ್ಟೇ ಸುಂದರವಾಗಿದ್ದೀರಿ. ಹೇಗೆಂದರೆ ನೀವು ಮಾತನಾಡುವ ಮಾತುಗಳಂತೆ, ಯೋಚಿಸುವ ಆಲೋಚನೆಗಳಂತೆ ಹಾಗೂ ನೀಡುವ ಶಕ್ತಿಯಂತೆ ಎಂದಿದ್ದಾರೆ. ಇನ್ನೊಂದರಲ್ಲಿ ಶ್ರೀಮಂತಿಕೆ ಕುರಿತು ಮಾತನಾಡಿರುವ ಅವರು, ನಿಜವಾದ ಐಷಾರಾಮಿ ಯಾವುದು ಎಂಬುದರ ಬಗ್ಗೆ ಇನ್ಸ್ಟಾ ಸ್ಟೇಟಸ್ನಲ್ಲಿ ಹೇಳಿಕೊಂಡಿದ್ದಾರೆ. ಸಮಾಜ ಹಾಗೂ ಜನರ ಪ್ರಕಾರ ನಿಜವಾದ ಐಷಾರಾಮಿ ಎಂದ್ರೆ, ಕಾರುಗಳು, ಬೆಲೆ ಬಾಳುವ ಒಡವೆ, ಬಟ್ಟೆಗಳನ್ನು ಧರಿಸುವುದು ಹಾಗೂ ಅದ್ಧೂರಿ ಲೈಫ್ಸ್ಟೈಲ್ನಲ್ಲಿದೆ ಎಂದುಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಅನ್ಫಾಲೋ ಬೆನ್ನಲ್ಲೇ ಸುಮಲತಾ ಪೋಸ್ಟ್; ದಾಸನಿಗೆ ಅಮ್ಮ ಪರೋಕ್ಷ ಟಾಂಗ್..!?
ಆದರೆ ನಿಜವಾದ ಐಷಾರಾಮಿ ಇರುವುದು ಇವುಗಳಲ್ಲಿ ಅಲ್ಲ. ಐಷಾರಾಮಿ ಇರುವುದು- ನಮ್ಮ ಆಯ್ಕೆಗಳಲ್ಲಿ ಸ್ವಾತಂತ್ರ್ಯ ಇರಬೇಕು. ರಾತ್ರಿಯಲ್ಲಿ ಒಳ್ಳೆಯ ನಿದ್ದೆ ಮಾಡಬೇಕು. ಮನಸ್ಸಿಗೆ ಶಾಂತಿ, ನೆಮ್ಮದಿಯಿಂದ ಕೂಡಿದ ದಿನಗಳಿರಬೇಕು. ಎಲ್ಲದರಲ್ಲೂ ಸಮನಾವಾಗಿ ಕೂಡಿರುವುದರ ಜೊತೆಗೆ ನೀವು ಪ್ರೀತಿಸುವ ಜನರು, ವಾಪಸ್ ನಿಮ್ಮನ್ನು ಮತ್ತಷ್ಟು ಪ್ರೀತಿಸುವುದರಲ್ಲಿ ಐಷಾರಾಮಿ ಇದೆ ಎಂದು ಹೇಳಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ