/newsfirstlive-kannada/media/post_attachments/wp-content/uploads/2025/03/SUMALATHA_DARSHAN-1.jpg)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇನ್ಸ್ಟಾದಲ್ಲಿ ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅವರನ್ನು ಅನ್ಫಾಲೋ ಮಾಡಿರುವುದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಸಂಬಂಧ ಸುಮಲತಾ ಅವರೇ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ ಶೇರ್ ಮಾಡಿದ ಬೆನ್ನಲ್ಲೇ ಮಾಜಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ಪೋಸ್ಟ್ಗಳಿಗೂ- ದರ್ಶನ್ಗೂ ಯಾವುದೇ ಸಂಬಂಧವಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡೋದು ಅವರ ವೈಯಕ್ತಿಕ ವಿಚಾರ. ತಾಯಿ- ಮಗನ ಸಂಬಂಧ ನಮ್ಮದು. ಇದರಲ್ಲಿ ಅನಗತ್ಯ ವಿವಾದ ಬೇಡ ಅಂತಾ ಸುಮಲತಾ ತಿಳಿಸಿದ್ದಾರೆ.
ಇದನ್ನೂ ಓದಿ:ದರ್ಶನ್ ಅನ್ಫಾಲೋ; ಇನ್ಸ್ಟಾದಲ್ಲಿ ಸರಣಿ ಪೋಸ್ಟ್.. ಸುಮಲತಾ ಇದೆಲ್ಲಾ ಹೇಳಿದ್ದು ಯಾರಿಗೆ?
ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯವಾದ ವಿವಾದ ಸೃಷ್ಟಿ ಆಗಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಇನ್ಸ್ಟಾ ಪೋಸ್ಟ್ಗಳು ಯಾರನ್ನೂ ಗುರಿಯಾಗಿಸಿ ಮಾಡಿರುವುದು ಅಲ್ಲ. ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ನನ್ನನ್ನು ಯಾರು ಫಾಲೋ ಮಾಡುತ್ತಾರೆ, ಯಾರು ಅನ್ಫಾಲೋ ಮಾಡುತ್ತಾರೆ ಎನ್ನುವ ಗಮನಿಸುವ ಅಭ್ಯಾಸ ಹೊಂದಿಲ್ಲ ಎಂದು ಹೇಳಿದ್ದಾರೆ.
ದರ್ಶನ್ ಅವರು ಇನ್ಸ್ಟಾ, ಟ್ವಿಟರ್ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಅವರ ಮಗನನ್ನೂ ಕೂಡ. ಇದು ಅವರ ವೈಯಕ್ತಿಕ ಆಯ್ಕೆ. ತಾಯಿ ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದ ಸೃಷ್ಟಿಸುವುದು ಬೇಡ. ನನ್ನ ಪೋಸ್ಟ್ಗಳು ಯಾರನ್ನೂ ಉದ್ದೇಶಿಸಿಲ್ಲ. ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಎಳೆದು ತರುವ ಅಭ್ಯಾಸ ಯಾವತ್ತೂ ಹೊಂದಿಲ್ಲ ಎಂದು ಸರಣಿ ಪೋಸ್ಟ್ಗಳ ಬಗ್ಗೆ ಸುಮಲತಾ ಅವರು ಅಂತಿಮ ತೆರೆ ಎಳೆದಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ